No Result
View All Result
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ
English Articles

Special Train Between Bengaluru Cantt and Chennai

by ಕಲ್ಪ ನ್ಯೂಸ್
April 3, 2026
0

Kalpa Media House  |  Bengaluru  | To clear the extra rush of passengers during the Summer Holiday season, South Western...

Read moreDetails
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
  • Advertise With Us
  • Grievances
  • About Us
  • Contact Us
Monday, April 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಿತ್ಯ ಜೀವನಕ್ಕೆ ಗೀತೆಯ ಮಹತ್ವ ಸಾರಿದ ಅದ್ಭುತ ಆಯೋಜನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 19, 2025
in Special Articles
0
ನಿತ್ಯ ಜೀವನಕ್ಕೆ ಗೀತೆಯ ಮಹತ್ವ ಸಾರಿದ ಅದ್ಭುತ ಆಯೋಜನೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ಪತ್ರಕರ್ತ ರವಿಕಾಂತ್ ಕುಂದಾಪುರ ವಾಟ್ಸಾಪ್ ಡೀಪಿಯಲ್ಲಿ ಹೀಗೆ ಇತ್ತು -“ಈ ಬದುಕೇ ಒಂದು ಕುರುಕ್ಷೇತ್ರ ಇಲ್ಲಿ ಹಿಂಜರಿಯುವ ಅರ್ಜುನನು ನಾನೇ ಹುರಿದುಂಬಿಸುವ ಶ್ರೀ ಕೃಷ್ಣನೂ ನಾನೇ”. ಈ ಮಾತು ಅದೆಷ್ಟು ಬಾರಿ ಓದಿದರೂ ನಿಜ ಎನ್ನಿಸಿತು. ಏಕೆಂದರೆ ಎಂದೋ ಬೋಧಿಸಿದ ಗೀತೆ ಇಂದಿಗೂ ಪ್ರಸ್ತುತ ಅನಿಸುವುದು ಇದೇ ಕಾರಣಕ್ಕೆ. ಅಲ್ಲದೇ ಇಲ್ಲಿ ಅರ್ಜುನನ್ನು ಸಾಂಕೇತಿಕವಾಗಿಟ್ಟುಕೊಂಡು ನಮ್ಮ ಜೀವನ ಕ್ರಮ ಹೇಗಿರಬೇಕು? ನಾವೇನು ಮಾಡಬೇಕು? ಏನು ಮಾಡಬಾರದು? ಯಾವಾಗ ಮಾಡಬೇಕು? ಏಕೆ ಮಾಡಬೇಕು ಎಂಬುದನ್ನು ಬಹಳ ಸ್ಪಷ್ಟವಾಗಿ, ಸರಳವಾಗಿ ವ್ಯಾಸ ಮಹರ್ಷಿಗಳ ಕೈಯಿಂದ ನಮಗೆ ಗೀತೆಯನ್ನು ಭಗವಂತ ಕರುಣಿಸಿದ್ದಾನೆ.

ಪ್ರತಿಯೊಂದು ದೇಶದಲ್ಲೂ ಒಂದೊಂದು ಸಂವಿಧಾನ ಇದ್ದಂತೆ ನಮ್ಮ ದೇಶಕ್ಕೂ ಇದೆ. ಅದರಂತೆ ಎಲ್ಲಾ ದೇಶಕ್ಕೂ, ಎಲ್ಲಾ ವರ್ಗಕ್ಕೂ, ಎಲ್ಲರಿಗೂ ಕೂಡ ಅನ್ವಯವಾಗುವಂತಹ ಸಂವಿಧಾನ ಅನ್ನೋದು ಏನಾದರೂ ಇದ್ದರೆ ಅದು ಭಗವದ್ಗೀತೆಯೇ ಆಗಿದೆ. ಸರ್ವರಿಗೂ ಸಮಾನವಾಗಿ ಅನ್ವಯವಾಗುವ ಉಪದೇಶ, ನೀತಿ ಭಗವದ್ಗೀತೆಯಲ್ಲಿರುವುದರಿಂದ ಇದು ಇಂದಿಗೂ ಪ್ರಸ್ತುತ.ಜೀವನದ ಜಂಜಾಟಗಳಿಗೆ, ಮನಸ್ಸಿನ ನೋವು ದುಃಖಗಳಿಗೆ, ಬದುಕಿನ ನಿತ್ಯ ಸಮಸ್ಯೆಗಳಿಗೆ ಇರುವ ಪೂರ್ಣ ಪರಿಹಾರವೇ ಭಗವದ್ಗೀತೆ. ಇಂತಹ ಗೀತೆಯ ಕುರಿತಾಗಿ ಅದರ ಸಾರವನ್ನು ಗೀತ, ನೃತ್ಯ, ರೂಪಕದ ಮೂಲಕ ಎಲ್ಲರಿಗೂ ತಲುಪಿಸುವ ಒಂದು ವಿಶಿಷ್ಟ ಪ್ರಯತ್ನವನ್ನು ಶ್ರೀಶಾರದಾ ಸಂಗೀತ-ನೃತ್ಯ ವಿದ್ಯಾಲಯವು ಕುವೆಂಪು ರಂಗಮಂದಿರದಲ್ಲಿ ಮಾಡಿ ಯಶಸ್ವಿಯಾದರೆಂದೇ ಹೇಳಬಹುದು.

ಸರಿಯಾದ ಸಮಯಕ್ಕೆ ಆರಂಭವಾದ ಈ ಕಾರ್ಯಕ್ರಮ ಸಂಗೀತ ಗುರುಕುಲದ ದೃಶ್ಯದೊಂದಿಗೆ ಅಲ್ಲಿನ ಮಗುವೊಂದರ ತಲ್ಲಣಕ್ಕೆ, ಆತಂಕಕ್ಕೆ ಸಮಾಧಾನ ಮಾಡುವ ರೀತಿಯಲ್ಲಿ ಗೀತೋಪದೇಶವು ತೆರೆದುಕೊಳ್ಳುತ್ತಾ ಹೋಗುತ್ತದೆ. ಆ ಮಗುವಿಗೆ ಅರ್ಜುನನ ಖಾಯಿಲೆಯಿಂದ ಅರ್ಜುನ ಭಾವಕ್ಕೆ ವಿವೇಕಾನಂದರ ಸನ್ಯಾಸಿಗೀತೆ, ರೈತ ಗೀತೆ ಇವುಗಳಿಂದ ಬಹಳ ಚೆನ್ನಾಗಿ ತರುತ್ತಾರೆ. ಆನಂತರ ಎಲ್ಲದಕ್ಕೂ ಹರಿ ಇದ್ದಾನೆ ಎಂಬ ಹಾಡಾಗಿರಬಹುದು, ಕುರುಡು ಕಾಂಚಾಣದ ಹಾಡು ಹಾಗೂ ಅದಕ್ಕೆ ತಕ್ಕದಾದ ನೃತ್ಯ ಎಲ್ಲರ ಮನಸೆಳೆಯಿತು.
ಮಧ್ಯದಲ್ಲಿ ವಾಲ್ಮೀಕಿ ಕುರಿತಾದ ರತ್ನಾಕರನ ಕಥೆ, ಅಲ್ಲಿನ ಪಾತ್ರಗಳೆಲ್ಲವೂ ಎಷ್ಟು ನಮ್ಮನ್ನು ಆವರಿಸುವಂತೆ ಮಾಡಿತೆಂದರೆ ಆ ನಾರದ, ರತ್ನಾಕರ ಅವನ ಕುಟುಂಬ ವಾಹ್! ಅದ್ಭುತ ಅಭಿನಯ. ನಂತರ ಪ್ರಹ್ಲಾದನ ಕಥೆ ಅಲ್ಲಿಯೂ ನಟನೆಯ ಬಗ್ಗೆ ಮಾತೇ ಇಲ್ಲ. ಅದಕ್ಕಿಂತಲೂ ಗುರುಭಕ್ತಿಯ ಶ್ರದ್ಧೆಯಲ್ಲಿ ನಮ್ಮನ್ನು ಕೊಂಡೊಯುವಲ್ಲಿ ಶ್ರೀ ಶಂಕರಾನಂದ ಜೋಯಿಸರಂತೂ ನಮಗೆ ಗುರುದರ್ಶನವೇ ಮಾಡಿಸಿಬಿಟ್ಟರು. ಶಬರಿಯ ಸನ್ನಿವೇಶದಲ್ಲಿ ಆ ಹಾಡಿಗೆ ಅವರ ಅಭಿನಯ ಹಾಗೂ ಹಿಂದಿನ ಪರದೆಯ ಗುಡಿಸಲ ಚಿತ್ರಣ ಅದೇನು ಅದ್ಬುತ ಅಂದರೆ ಪದಗಳಲ್ಲಿ ಕಟ್ಟಿಕೊಡಲು ಕಷ್ಟವೇ ಆಗಬಹುದೇನೋ. ಆದರೆ ಅಲ್ಲಿ ಬಂದ ಬಾಲರಾಮ ಅದು ಶಬರಿಯ ಕಲ್ಪನೆಯ ರಾಮ ಎಂಬುದನ್ನು ನಾವು ಭಾವಿಸಬಹುದು. ನಂತರದ ಮುಂದಿನ ಹಾಡಾದ ಮುಳ್ಳು ಕೊನೆಮೇಲೆ ಮೂರು ಕೆರೆಯ ಕಟ್ಟೆ… ಹಾಡು ಬಹಳ ಸಾಂದರ್ಭಿಕ ಹಾಗೂ ಸತ್ವ ರಜೋತಮಗಳ ಕುರಿತಾಗಿ ಕಟ್ಟಿಕೊಡುವ ಗೀತೆಯಾಗಿ ಮೂಡಿ ಬಂದಿತು.

ವಿಶ್ವರೂಪ ದರ್ಶನದ ಸಂದರ್ಭದಲ್ಲಿ ಹಾಡಿದ ಆತ್ಮನೂ ನೀನೇ ಪರಮಾತ್ಮನೂ ನೀನೆ ಹಾಡು ಮತ್ತು ಅದಕ್ಕೆ ಸಂಯೋಜಿಸಿದ ದೃಶ್ಯ ನಿಜವಾಗಿಯೂ ವಿಶ್ವರೂಪದ ದರ್ಶನವೇ ಆಯಿತು. ಹೀಗೆ ಸಾಗಿ ಬಂದು ನಿಂತಿದ್ದು ಕೊನೆಗೆ ಉತ್ತಿಷ್ಟತ ಜಾಗ್ರತ ಎಂಬ ಹಾಡಿಗೆ. ಒಟ್ಟಿನಲ್ಲಿ ಬಳಸಿದ ಹಾಡು, ಮೂಡಿ ಬಂದ ದೃಶ್ಯ ಹಾಗೂ ನೃತ್ಯಗಳು ಎಲ್ಲವೂ ಅತ್ಯದ್ಭುತವಾಗಿತ್ತು. ಅಲ್ಲಿದ್ದ ಎಲ್ಲರ ಹೃದಯದಲ್ಲೂ ಅರ್ಜುನ ಭಾವ ಜಾಗ್ರತವಾಗಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಲ್ಲ ಅನೇಕ ಸಂಗತಿಗಳನ್ನು ಬಹಳ ಸರಳವಾಗಿ ಗೀತಾಮೃತದ ಸಾರ ಉಣಬಡಿಸಿದ ವಿದ್ವಾನ್ ಅರುಣ್ ಕುಮಾರ್ ಹಾಗೂ ಶ್ರೀಮತಿ ವೀಣಾ ಅರುಣ್ ಕುಮಾರ್ ಅವರ ತಂಡಕ್ಕೆ ನಗರದ ಸಂಗೀತ ನೃತ್ಯ ಆಸಕ್ತರ ಪರವಾಗಿ ಅನಂತ ಅನಂತ ಧನ್ಯವಾದಗಳು. ಇದರಲ್ಲಿ ಬಂದ ಕೆಲವು ಸಂಭಾಷಣೆಗಳಾದ-‘ ಮೌನ ಮಾತಾದಾಗ ಭಕ್ತಿ ಭಾವವಾಗುತ್ತದ’, ‘ಕಣ್ಣಿಗೆ ಕಾಣುವುದು ಕ್ಷೇತ್ರ ನೋಡುವವನು ಕ್ಷೇತ್ರಜ್ಞ’. ಆಸಕ್ತಿ ಹುಟ್ಟುವುದು ನಮ್ಮ ನಮ್ಮ ಗುಣಗಳಿಂದ ಎಂದು ಹೇಳಿ ಸಾತ್ವಿಕತೆ ಹೆಚ್ಚಿದರೆ ಸದ್ವಿದ್ಯೆ. ಕಳ್ಳ ಹಾಗೂ ಮೋಸಗಾರ ಎಲ್ಲರಿಗೂ ಸಹ ಸಾಧನೆ ಅನ್ವಯಿಸುತ್ತೆ ಆದರೆ ಸಮಾಜ ಒಪ್ಪುವಂತಹ ನ್ಯಾಯ ಸಮ್ಮತವಾದ ಗೌರವ ಗಳಿಸುವ ಸಾಧನೆಗೆ ಮಾತ್ರ ಬೆಲೆ ಇರುತ್ತದೆ. ಅದಕ್ಕೆ ಒಳ್ಳೆಯ ಗುರು ವಾತಾವರಣ ಜೊತೆಗೆ ಆಹಾರವು ಅವಶ್ಯಕ ಆ ಆಹಾರ ಮನಸ್ಸು ಮತ್ತು ಬುದ್ಧಿಗಳನ್ನು ನಿಯಂತ್ರಿಸುತ್ತೆ. ‘ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ’ ಎನ್ನುವ ಈ ಶ್ಲೋಕದಲ್ಲಿ ದುರ್ಯೋಧನನ ಮಾತು ಉದಾಹರಿಸಿ ಎಲ್ಲದಕ್ಕೂ ಮನಸ್ಸೇ ಕಾರಣ ಅಂತಹ ಮನೋ ನಿಯಂತ್ರಣ ಆಹಾರ ಹಾಗೂ ಉಸಿರಾಟದಿಂದ ಸಾಧ್ಯ ಎಂದು ಹೇಳಿ ‘ಶ್ರದ್ಧಾವಾನ್ ಲಭತೇ ಜ್ಞಾನಮ್’ ಎಂದು ಹೇಳಿ ಇಲ್ಲಿ ಓದಲು ಆಗದೆ ಇರುವಾಗ ನಿಜ ಗುರುವಿಗೆ ಶರಣಾಗಬೇಕು. ಆಗ ಅಹಂಕಾರ ನಾಶವಾಗಿ ಉನ್ನತ ವಿಚಾರಕ್ಕೆ ನಾಂದಿ ಆಗುತ್ತದೆ. ಒಳಿತನ್ನು ಬಯಸುತ್ತಾ ವೃತ್ತಿ, ಪ್ರವೃತ್ತಿ ಮಾಡುತ್ತಾ ಹೋದರೆ ಅದೇ ಜೀವನದ ಸಫಲತೆ ಎಂದು ಹೇಳುವ ಎಲ್ಲ ಮಾತುಗಳು ಮನಸ್ಸಿನಾಳಕ್ಕೆ ಇಳಿದು ನಮ್ಮರಿವಿನ ಜಾಗ್ರತಿ ಆಯಿತು.
ಬೆಳಕಿನ ನಿರ್ವಹಣೆಯಲ್ಲಿ ಶ್ರೀ ಮಂಜುನಾಥ ಕೂದುವಳ್ಳಿ, ಧ್ವನಿಯಲ್ಲಿ ವೀರಭದ್ರ ಸೌಂಡ್ ಸಿಸ್ಟಮ್ ನವರ ಕಾರ್ಯ ಉತ್ತಮ. AI ಚಿತ್ರಗಳಂತೂ ಎಲ್ಇಡಿ ವಾಲ್‌ನಲ್ಲಿ ಒಂದಾದ ಮೇಲೊಂದು ಬಹಳ ಅಚ್ಚುಕಟ್ಟಾಗಿ ಕಂಡುಬಂದವು.

ಒಟ್ಟಿನಲ್ಲಿ ಹೇಳಬೇಕೆಂದರೆ ಶಿವಮೊಗ್ಗದ ಜನತೆಗೆ ಈ ಬಾರಿ ಭಗವದ್ಗೀತೆಯ ಸವಿ ಸ್ವರ್ಣವಲ್ಲಿ ಮಠದವರ ಗೀತಾ ಅಭಿಯಾನದ ಮಹಾ ಸಮರ್ಪಣೆ ಕಳೆದ ಕೆಲವೇ ದಿನಗಳಲ್ಲಿ ಆಯೋಜಿತವಾಗಿ ಜನರಲ್ಲಿ ಮಾನವನಿಂದ ಮಾಧವನೆಡೆಗೆ ಕೊಂಡೊಯ್ಯಲು ಮೆಟ್ಟಿಲಾದಂತೆ ಆಯ್ತೆನ್ನುವುದಂತೂ ನಿಜ. ಈ ನಿಟ್ಟಿನಲ್ಲಿ ಇಲ್ಲಿಯ ಜನ ಪುಣ್ಯವಂತರೇ ಹೌದು. ಕುವೆಂಪು ರಂಗಮಂದಿರದಲ್ಲಿ ಕಿಕ್ಕಿರಿದ ಜನರೇ ಅಲ್ಲದೆ ಗಣ್ಯರಾದ ಕೆ.ಎಸ್. ಈಶ್ವರಪ್ಪನವರ ಕುಟುಂಬ ಹಾಗೂ ಶಾಸಕರಾದ ಚೆನ್ನಿಯವರು ಹಾಗೂ ಡಾ. ಪಿ. ನಾರಾಯಣ್ ರವರೇ ಮೊದಲಾದ ಎಲ್ಲರೂ ಈ ಕಾರ್ಯಕ್ರಮವನ್ನು ಪೂರ್ಣ ಆಸ್ವಾದಿಸಿದ್ದು ಸಹ ಒಂದು ವಿಶೇಷವೆನಿಸಿತು ಹಾಗಾಗಿ ಆ ಮಟ್ಟಿಗಿನ ಒಂದು ಯಶಸ್ವಿ ಕಾರ್ಯಕ್ರಮ ಇದಾಗಿತ್ತು. ಅತ್ಯಂತ ಆಕರ್ಷಕ ಹಾಗೂ ವಿನೂತನ ರಂಗ ಪ್ರಯೋಗವಾಗಿ ಗೀತೆಯ ಹದಿನೆಂಟು ಅಧ್ಯಾಯಗಳ ಮೌಲ್ಯಗಳು ಹಾಗೆಯೇ ಕರ್ಮ ಜ್ಞಾನ ಭಕ್ತಿಯ ಬೆಳಕಾಗಿ ಬದುಕನ್ನು ಬೆಳಗಿಸುವ ಮಹಾಶಕ್ತಿ ಎಂಬುದರ ಅರಿವಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    

http://kalpa.news/wp-content/uploads/2024/04/VID-20240426-WA0008.mp4

Tags: ArjunaK S EshwarappaKannada News WebsiteKurukshetraLatest News KannadaShimogaShivamoggaShivamogga Newsಅರ್ಜುನಕುರುಕ್ಷೇತ್ರಕುವೆಂಪು ರಂಗಮಂದಿರಕೆ.ಎಸ್. ಈಶ್ವರಪ್ಪಪತ್ರಕರ್ತಭಗವದ್ಗೀತೆವಿಶ್ವರೂಪ ದರ್ಶನವ್ಯಾಸ ಮಹರ್ಷಿಶ್ರೀ ಕೃಷ್ಣಶ್ರೀಶಾರದಾ ಸಂಗೀತ-ನೃತ್ಯ ವಿದ್ಯಾಲಯಸಂವಿಧಾನ
Share196Tweet123Send
Previous Post

ನ್ಯಾಷನಲ್ ಹೆರಾಲ್ಡ್ ಪ್ರಕರಣ | ಅನಗತ್ಯ ಆರೋಪ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Next Post

ಅಜಾನ್ ಬಗ್ಗೆ ಹಗುರ ಮಾತು ಬೇಡ: ಕಲೀಂ ಪಾಷ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅಜಾನ್ ಬಗ್ಗೆ ಹಗುರ ಮಾತು ಬೇಡ: ಕಲೀಂ ಪಾಷ

ಅಜಾನ್ ಬಗ್ಗೆ ಹಗುರ ಮಾತು ಬೇಡ: ಕಲೀಂ ಪಾಷ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗದ ಮಣ್ಣಿನ ಮಗ ಡಾ. ಕೆ. ರಾಘವೇಂದ್ರ ಪೈ ಅಮೇರಿಕಾ ವಿವಿ ಉಪಕುಲಪತಿಯಾಗಿ ನೇಮಕ

ಶಿವಮೊಗ್ಗದ ಮಣ್ಣಿನ ಮಗ ಡಾ. ಕೆ. ರಾಘವೇಂದ್ರ ಪೈ ಅಮೇರಿಕಾ ವಿವಿ ಉಪಕುಲಪತಿಯಾಗಿ ನೇಮಕ

April 6, 2026
ಬಣ್ಣದ ಬದುಕಿನ ಮಣ್ಣಿನ ಮಗ: ಚೇತನ್ ನೈಲಾಡಿ ಎಂಬ ಅದ್ಭುತ ಕಲಾಚೇತನ

ಬಣ್ಣದ ಬದುಕಿನ ಮಣ್ಣಿನ ಮಗ: ಚೇತನ್ ನೈಲಾಡಿ ಎಂಬ ಅದ್ಭುತ ಕಲಾಚೇತನ

April 6, 2026
ಮಂಗಳೂರಿನಲ್ಲಿ ಫ್ಲಾಟ್ ದರದಲ್ಲಿ ಲಭ್ಯವಿದೆ ಸುಂದರವಾದ Fully Furnished ವಿಲ್ಲ/ಬಂಗ್ಲೆ

ಮಂಗಳೂರಿನಲ್ಲಿ ಫ್ಲಾಟ್ ದರದಲ್ಲಿ ಲಭ್ಯವಿದೆ ಸುಂದರವಾದ Fully Furnished ವಿಲ್ಲ/ಬಂಗ್ಲೆ

April 4, 2026
ತಾಲೂಕು ಆಸ್ಪತ್ರೆಗೆ ತಜ್ಞ ವೈದ್ಯರನ್ನು ಮರು ನೇಮಕ ಮಾಡಲು ಜೆಡಿಎಸ್ ಆಗ್ರಹ

ತಾಲೂಕು ಆಸ್ಪತ್ರೆಗೆ ತಜ್ಞ ವೈದ್ಯರನ್ನು ಮರು ನೇಮಕ ಮಾಡಲು ಜೆಡಿಎಸ್ ಆಗ್ರಹ

April 4, 2026
ಡಾ. ಆತ್ಮಪ್ರಸನ್ನ ಅವರ ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ ಕೃತಿ ಬಿಡುಗಡೆ

ಡಾ. ಆತ್ಮಪ್ರಸನ್ನ ಅವರ ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ ಕೃತಿ ಬಿಡುಗಡೆ

April 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL