ATC ಇದು ಮಮತಾ ಬ್ಯಾನರ್ಜಿ ಪಕ್ಷ. All India thrina moola party. ಇದರ ಅಧಿನಾಯಕಿ ಮಮತಾ ಬ್ಯಾನರ್ಜಿ. ಒಂಟಿ ಮಹಿಳೆ, ದಿಟ್ಟ ಮಹಿಳೆಯೂ, ಸರಳತೆಯೂ ಇವರಲ್ಲಿದೆ. ಆದರೆ ಇದೆಲ್ಲವೂ Extreme ಆಗಿರೋದ್ರಿಂದಲೇ ಈಕೆ ಯಾವಾಗಲೂ ವಿವಾದಾತ್ಮಕವೂ, ನೈಜ ಭಾರತೀಯ ಧರ್ಮಕ್ಕೂ ವಿರೋಧವಾಗಿರೋದು.
ಹಿಂದೆ ವಿದೇಶಿ ಜನರ ಬೆಂಬಲದಿಂದ ಅನೇಕ ರಾಜರುಗಳು ಅಹಂಕಾರದಿಂದ ಮೆರೆದಿದ್ದಿದೆ. ಇದನ್ನು ವಿದೇಶಿ ಬಾಡಿಗೆ ಮನುಷ್ಯರು ಎಂದರೂ ತಪ್ಪಾಗದು. ಅದೇ ರೀತಿ ಬಾಂಗ್ಲಾ ನುಸುಳುಕೋರರಿಗೂ ಬೆಂಬಲ ನೀಡಿ, ಕೇಂದ್ರ ಸರಕಾರಕ್ಕೆ ಒಂದು ರೀತಿಯ Terrorist ರೀತಿಯಲ್ಲಿ ನಡೆದುಕೊಳ್ಳುವುದು ಕಾಣಿಸುತ್ತದೆ. ಕಾಂಗ್ರೆಸ್ಸಿನ ಭಿನ್ನಮತೀಯಳಾಗಿ ಅಲ್ಲಿಂದ ಹೊರಬಂದು, ತೃಣಮೂಲ ಸ್ಥಾಪನೆ. ಆಗ ಕಮ್ಯುನಿಷ್ಟರ ಪಾರಂಪರಿಕ ರಾಜ್ಯಭಾರವು ಪಶ್ಚಿಮ ಬಂಗಾಳದಲ್ಲಿ ತಲೆಯೆತ್ತಿ ಭಾರತೀಯ ಸಂಪ್ರದಾಯಗಳಿಗೆ ಮಾರಕವಾಗಿತ್ತು. ತಮಗೆ ಮಮತಾ ಬ್ಯಾನರ್ಜಿಯಿಂದ ರಕ್ಷಣೆ ಸಿಗಬಹುದು, ಮುಕ್ತಿ ಸಿಗಬಹುದು ಎಂದು ಪ್ರಜೆಗಳು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪೀಠದಲ್ಲಿ ಮಮತಾ ದೀದಿಯನ್ನು ಕುಳ್ಳಿರಿಸಿದರು.
ಆದರೆ ಇವರು ಕಮ್ಯುನಿಷ್ಟರಿಗಿಂತಲೂ ಹೀನ ವ್ಯಕ್ತಿ ಎಂದು ಜನರಿಗೆ ಈಗ ಅರಿವಾಗತೊಡಗಿದ್ದಕ್ಕೆ ದೊಡ್ಡ ಸಾಕ್ಷಿ ಎಂದರೆ ಮೋದಿಯವರ ಸಭೆಗೆ ಆಗಮಿಸಿದ ಲಕ್ಷಾಂತರ ಜನರು. ಆದಿತ್ಯನಾಥ ಯೋಗಿಯವರ ಹೆಲಿಕಾಪ್ಟರ್ Land ಆಗಲೂ ಬಿಡದೆ ತನ್ನ ಸರ್ವಾಧಿಕಾರ ತೋರಿಸಿದರು. ಶಾರದಾ ಚಿಟ್ ಫಂಡ್ ಸಂಸ್ಥೆಯ ಅವ್ಯವಹಾರ ತನಿಕೆಗೆ ಬಂದ CBI ಸಿಬ್ಬಂಧಿಗಳನ್ನೇ ಬಂಧಿಸಿ ಸರ್ವಾಧಿಕಾರ ತೋರಿಸಿದ್ದು ಎಲ್ಲರಿಗೂ ತಿಳಿದಿದೆ. ಸತ್ಯ ಧರ್ಮದಲ್ಲಿ ನಡೆದವರಿಗೇ ಬದುಕಲು ಆಗುವುದಿಲ್ಲ ಎಂದ ಮೇಲೆ ಈ ಧರ್ಮದ್ರೋಹಿಗಳಿಗೆ ತುಂಬಾ ದಿನ ಇರುವುದಕ್ಕೂ ಕಷ್ಟವೇ.
ನಾವು ಇವರ ಜಾತಕ ಶೋಧನೆ ಮಾಡಿದಾಗ ಏನು ಈಕೆಯ ವಿಶೇಷ ಎಂದು ತಿಳಿಯಲು ಸಾಧ್ಯ. ಜನನ ಕಾಲದ ಮಾಹಿತಿ ಸರಿಯಾಗಿರಬಹುದು ಎಂದು ಕಾಣುವುದಿಲ್ಲ. ಆದರೆ ಈಕೆಯದ್ದು ಕೃತ್ತಿಕಾ ನಕ್ಷತ್ರ ವೃಷಭ ರಾಶಿ ಎಂಬುದು ಖಚಿತ. ಇವರ ಜಾತಕ ಪ್ರಕಾರ ನೋಡಿದರೆ ಇವರಿಗೆ ಸೆರೆಮನೆಯಲ್ಲಿ ಕುಳಿತುಕೊಳ್ಳುವ ಯೋಗವಿದೆ. ಇಡೀ ಕುಂಡಲಿಯಲ್ಲಿ ನೀಗಡ(ಸಂಕೋಲೆ, ಬಂಧನ) ದ್ರೇಕ್ಕಾಣವು ಚಂದ್ರನ ಭಾಗ್ಯ ಸ್ಥಾನದಲ್ಲಿದೆ. ಅದರ ಅಧಿಪತಿ ಶನಿಯ ದಶೆಯೂ ಈಗ ನಡೆಯುತ್ತಿರುವುದು. ಕೃತ್ತಿಕಾ ನಕ್ಷತ್ರಕ್ಕೆ ಪ್ರತ್ಯರ ತಾರಾದಶೆಯು ಶನಿದೆಶೆ. ಇದು ಈಕೆಗೆ ಮಾರಕ ದೆಶೆ.
ಯಾವಾಗ ಮಾರಕ?
2020 ಜನವರಿಯವರೆಗೆ ಈಕೆಗೆ ಅನಾರೋಗ್ಯ ಅವಮಾನಗಳಾಗಲಿದೆ. ನಂತರ ಶನಿಯು ಮಕರ ರಾಶಿ ಪ್ರವೇಶಿಸಿದಾಗ ಯಾವುದೋ ಹಗರಣಗಳಿಂದ ಬಂಧನ ಸಾಧ್ಯ. ಸೆರೆಮನೆಗೂ ಹೋಗಬಹುದು. ಈಕೆ ಎಲ್ಲರಲ್ಲೂ ಸಂಶಯಪಡುವ ಗುಣವನ್ನು ಹೊಂದಿರುತ್ತಾರೆ. ಒಂದು ರೀತಿಯ Police Mentality ಎನ್ನಬಹುದು. Ignoring ಸ್ವಭಾವ, ತಪ್ಪು ತಿಳಿದುಕೊಂಡು ವ್ಯವಹರಿಸುವುದು, ಇತ್ಯಾದಿ ಈಕೆಯ ಗುಣ. ಯಾವ ಗುಣಗಳೂ ಕೆಟ್ಟದ್ದಲ್ಲವಾದರೂ ಹೊಂದಾಣಿಕೆಯಲ್ಲಿ ವೈಪರೀತ್ಯವಾದಾಗ ಮಾರಕವಾಗುತ್ತದೆ. ಈಗ ಈ ವೈಪರೀತ್ಯ ಶುರುವಾಗಿದೆ. ಇದು ಸೆರೆಮನೆಗೆ ಆಹ್ವಾನಿಸಿದಂತಾಗುತ್ತದೆ. ಗುರು ಉಚ್ಛ ಇರುವುದರಿಂದ ಬಡವರ ಬಗ್ಗೆ ಅತ್ಯಂತ ಕನಿಕರವೂ ಇದೆ. ಆದರೆ ಇದರ ದುರ್ಲಾಭದಿಂದ ಸರ್ವಾಧಿಕಾರ ತೋರಿಸಿ ಅನಾಹುತವನ್ನು ಎಳೆದುಹಾಕಿಕೊಳ್ಳುತ್ತಾರೆ.
ಇಂತಹ ಸಂಶಯದ ಒಬ್ಬ ವ್ಯಕ್ತಿಯು, ಮಾರಕ ದೆಶೆಯ ರಾಜಕಾರಣಿಯು ಮಹಾಘಟ್ಬಂದನದಲ್ಲಿ ಸೇರಿಕೊಂಡರೆ ಏನಾದೀತು ಎಂದು ನಾನು ಹೇಳಬೇಕಾಗಿಲ್ಲ. ಈಕೆಯ ಆಲಸ್ಯ ಸ್ವಭಾವವೇ ಈಕೆಗೆ ಮಾರಕವೂ ಆಗುತ್ತದೆ. ಅಂತೂ ಇವೆಲ್ಲ ಬೆಳವಣಿಗೆಗಳು ಭಾರತೀಯ ಜನತಾ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಲಾಭವಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲೆಲ್ಲಿ ಬಿಜೆಪಿಗೆ ಮಾರಕವಾಗಿರುತ್ತದೋ ಅಲ್ಲಲ್ಲಿ ಬಿಜೆಪಿ ಉತ್ತಮ ಲಾಭ ಪಡೆಯುತ್ತದೆ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ ಎಂದರೆ ಕಳೆದ ಲೋಕಸಭಾ ಚುನಾವಣೆಯ ಅಸ್ಸಾಂ ರಾಜ್ಯ ಫಲಿತಾಂಶ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post