ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸ್ಯಾಂಡಲ್’ವುಡ್ ಹಿರಿಯ ನಟ ಹುಲಿವಾನ್ ಗಂಗಾಧರಯ್ಯ ವಿಧಿವಶರಾಗಿದ್ದು, ಇವರ ಸಾವಿಗೆ ಕೊರೋನಾ ಸೋಂಕು ಕಾರಣ ಎಂದು ಹೇಳಲಾಗಿದೆ.
70 ವರ್ಷದ ಗಂಗಾಧರ್ ಅವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಗಂಗಾಧರ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿ ಎರಡನೇ ದಿನಕ್ಕೆ ಜ್ವರ ಕಾಣಿಸಿಕೊಂಡಿದೆ. ನಂತರ ಸೆಲ್ಫ ಕ್ವಾರಂಟೈನ್’ಗೆ ಒಳಗಾಗಿದ್ದರು. ಆಸ್ಪತ್ರೆಗೆ ದಾಖಲಾದ ನಂತರ ಕೊರೋನಾ ಪರೀಕ್ಷೆ ಮಾಡಿದ್ದು ಪಾಸಿಟಿವ್ ಬಂದಿತ್ತು ಎಂದು ಹೇಳಲಾಗಿದೆ.
ಗಂಗಾಧರ್ ಮೂವರು ಹೆಣ್ಣು ಮಕ್ಕಳು, ಒಬ್ಬ ಪುತ್ರ ಮತ್ತು ಪತ್ನಿಯನ್ನು ಅಗಲಿದ್ದಾರೆ. ಇವರು 1500ಕ್ಕೂ ಹೆಚ್ಚು ನಾಟಕ, 118 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.
ಉಲ್ಟಾ ಪಲ್ಟಾ, ಗ್ರಾಮ ದೇವತೆ, ಭೂಮಿ ತಾಯಿ ಚೊಚ್ಚಲ ಮಗ, ಅಪ್ಪು, ಕುರಿಗಳು ಸಾರ್ ಕುರಿಗಳು, ಶಬ್ದವೇಧಿ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಗಂಗಾಧರ್ ನಟಿಸಿದ್ದರು.
Get In Touch With Us info@kalpa.news Whatsapp: 9481252093















