ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತದ ಸಾರ್ವಜನಿಕ ವೇದಿಕೆಯಲ್ಲಿಯೇ ಹತ್ಯೆ ಮಾಡುವುದಾಗಿ ಉಗ್ರ ಸೈಯ್ಯದ್ ಹಫೀಜ್ ಬೆದರಿಕೆ ಹಾಕಿದ ಬೆನ್ನಲ್ಲೇ, ಮಾವೋವಾದಿಗಳೂ ಸಹ ಮೋದಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಕುರಿತಂತೆ ಪೂನಾ ಪೊಲೀಸರು ಮಾಹಿತಿ ಆಘಾತಕಾರಿ ಬಹಿರಂಗಪಡಿಸಿದ್ದು, ಶ್ರೀಲಂಕಾದಲ್ಲಿ ದಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮೇಲೆ ನಡೆದ ಹತ್ಯೆ ಯತ್ನದ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಮಾವೋವಾದಿಗಳು ಸಂಚು ರೂಪಿಸಿದ್ದರು ಎಂದಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮಾವೋವಾದಿ ಕಿಶನ್ ಎಂಬುವರು ರೋನಾ ಜೇಕಬ್ ಎಂಬುವರಿಗೆ ಪತ್ರ ಬರೆದಿದ್ದು ಅದರಲ್ಲಿ ಶ್ರೀಲಂಕಾದಲ್ಲಿ ರಾಜೀವ್ ಗಾಂಧಿ ಅವರಿಗೆ ಗೌರವಾರ್ಥ ಪರೇಡ್ ನಡೆಯುತ್ತಿದ್ದಾಗ ಓರ್ವ ತನ್ನ ಕೈಯಲ್ಲಿದ್ದ ಬಂದೂಕಿನಿಂದ ರಾಜೀವ್ ಗಾಂಧಿ ಅವರ ತಲೆಗೆ ಗಂಭೀರವಾಗಿ ಹೊಡೆದಿದ್ದರು. ಇದೇ ರೀತಿಯಲ್ಲಿ ಮೋದಿ ಅವರ ಹತ್ಯೆ ಮಾಡುವ ಕುರಿತಂತೆ ಬರೆಯಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
Also Read: ಸಾರ್ವಜನಿಕವಾಗಿ ಪ್ರಧಾನಿ ಮೋದಿಯನ್ನು ಹತ್ಯೆ ಮಾಡುತ್ತಾರಂತೆ!
https://kalpa.news/pm-modi-will-be-killed-india-will-disintegrate-hafiz-saeeds-top-aide-instigates-on-public-platform-in-pak/
ಯಾವುದೇ ಸಭೆ ಸಮಾರಂಭಗಳಲ್ಲಿ ಪ್ರಧಾನಿ ಮೋದಿ ಅವರು ಭಾಗಹಿಸಿದರೆ ಈ ವೇಳೆ ಅವರು ಸುಲಭವಾಗಿ ಜನರ ಜೊತೆ ಬೆರೆಯುತ್ತಾರೆ. ಅಲ್ಲಿ ನೆರೆದಿರುವಂತಹ ಅಭಿಮಾನಿಗಳ ಕೈ ಕುಲುಕುತ್ತಾರೆ ಇದನ್ನೇ ಬಳಸಿಕೊಂಡು ಕಿಶನ್ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ವಿಚಾರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
Discussion about this post