ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಒಂದೆಡೆ ಲಾಕ್ ಡೌನ್’ನಿಂದಾಗಿ ಹೊರಕ್ಕೆ ಹೋಗುವಂತಿಲ್ಲ.. ಇನ್ನೊಂದೆಡೆ ಸೂರ್ಯನ ಪ್ರಖರ ಶಾಖಕ್ಕೆ ಕಾದ ಕಾವಲಿಯಂತಾಗಿದ್ದ ನಗರ.. ಇದರಿಂದ ಮನೆಯೊಳಗೆ ಸುಮ್ಮನೆ ಕೂರಲು ಸಾಧ್ಯವಾಗದಷ್ಟು ಸೆಖೆ… ಆದರೆ ಇವೆಲ್ಲಕ್ಕೂ ಇಂದು ರಿಲ್ಯಾಕ್ಸ್ ಮಾಡಿದ್ದಾನೆ ಮಳೆರಾಯ.
ಹೌದು..ನಗರ ಹಾಗೂ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಇಂದು ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ಸಣ್ಣಗೆ ಹನಿ ಹಾಕಲು ಆರಂಭಿಸಿದ ಮಳೆರಾಯ ಆನಂತರ ಸುಮಾರು ನಿಮಿಷಗಳ ಕಾಲ ಅಬ್ಬರಿಸಿದ್ದು, ಇಳೆಯನ್ನು ಕೊಂಚ ತಂಪಾಗಿಸಿದೆ.
ರಸ್ತೆಗಳಲ್ಲಿ ಜನ ಸಂಚಾರ ಇಲ್ಲದೇ ಇರುವುದರಿಂದ ಯಾರಿಗೂ ತೊಂದರೆಯಾಗಲಿಲ್ಲ. ಅಲ್ಲದೇ, ತಮ್ಮ ಮನೆಗಳಲ್ಲೇ ಮಳೆಯನ್ನು ಜನರು ಸಂಭ್ರಮಿಸುತ್ತಿದ್ದುದು ಕಂಡು ಬಂತು…
ಭದ್ರಾವತಿಗೆ ಮೋಡವಷ್ಟೆ!
ಮೂರು ಗಂಟೆ ನಂತರ ಭದ್ರಾವತಿಯಲ್ಲಿ ಮೋಡ ಕವಿದ ವಾತಾವರಣವಿತ್ತು. 5 ಗಂಟೆ ವೇಳೆ ಒಂದೆರಡು ಹನಿ ಹಾಕಿದ್ದು ಬಿಟ್ಟರೆ, ಇನ್ನೇನು ಜೋರು ಮಳೆ ಆರಂಭವಾಗುತ್ತದೆ ಎನ್ನುವಷ್ಟರಲ್ಲೇ, ಮೋಡವೆಲ್ಲಾ ಚದುರಿ, ಬಿಸಿಲಿನ ಧಗೆ ಆರಂಭವಾಗಿದ್ದು, ನಗರದ ಜನರಿಗೆ ನಿರಾಸೆ ಮೂಡಿಸಿತು.
ಗ್ರಾಮೀಣ ಭಾಗದಲ್ಲೂ ಮಳೆ
ಇನ್ನು, ಶಿವಮೊಗ್ಗ ಸಮೀಪದ ಹೊಸಹಳ್ಳಿ, ಮತ್ತೂರು ಸೇರಿದಂತೆ ಹಲವು ಭಾಗಗಳಲ್ಲಿ ಜೋರಾಗಿಯೇ ಮಳೆಯಾಗಿದ್ದು, ನಗರಕ್ಕಿಂತಲೂ ಕೊಂಚ ಹೆಚ್ಚು ಮಳೆಯಾಗಿದೆ ಎಂದೇ ಹೇಳಲಾಗುತ್ತಿದೆ.
Get in Touch With Us info@kalpa.news Whatsapp: 9481252093
















