ಕೋಲಾರ: ಮುಳಬಾಗಿಲು ಸಮೀಪರುವ ತಂಬಿಹಳ್ಳಿ ಶ್ರೀಮಾಧವತೀರ್ಥರ ಸಂಸ್ಥಾನದಲ್ಲಿ ಎಪ್ರಿಲ್ 13 ಮತ್ತು 14ರಂದು ಶ್ರೀರಾಮನವಮಿ ಮಹೋತ್ಸವವನ್ನು ಆಯೋಜಿಸಲಾಗಿದೆ.
ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀಮಾಧವತೀರ್ಥರಿಂದ ಪೂಜೆಗೊಂಡ ಶ್ರೀಮೂಲ ವೀರರಾಮ ದೇವರಿಗೆ ರಾಮನವಮಿ ನಿಮಿತ್ತ ಶ್ರೀವಿದ್ಯಾಸಾಗರ ಮಾಧವತೀರ್ಥರು ಮತ್ತು ಶ್ರೀವಿದ್ಯಾಸಿಂಧು ಮಾಧವತೀರ್ಥರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಎ.13ರಂದು ಬೆಳಿಗ್ಗೆ ಶ್ರೀರಾಮ ಷಡಕ್ಷರಹೋಮ, ಶ್ರೀಮಹಾಭಾರತ ತಾತ್ಪರ್ಯ ನಿರ್ಣಯ ಗತ ರಾಮಾಯಣ ಪಾರಾಯಣ ಮತ್ತು ವಿದ್ಯಾರ್ಥಿಗಳಿಂದ ಅನುವಾದ ನಡೆಯಲಿದೆ. ಸಂಜೆ ವಿದೂಷಿ ಅರ್ಚನಾ ಕುಲಕರ್ಣಿ ಮತ್ತು ಕಿರಣ್ಮಯಿ ದೇಸಾಯಿ ಅವರಿಂದ ಶ್ರೀವಿದ್ಯಾಸಾಗರ ಮಾಧವತೀರ್ಥರ ಕೃತಿಗಳು ಮತ್ತು ಅಪರೋಕ್ಷ ಜ್ಞಾನಿಗಳಾದ ಹರಿದಾಸರ ಕೃತಿಗಳ ಗಾಯನ ನಡೆಯಲಿದೆ.
ಎ.14ರಂದು ಮೂಲದೇವರುಗಳಿಗೆ ಮಹಾಪಂಚಾಮೃತ ಅಭಿಷೇಕ ಮತ್ತು ವಿಶ್ವರೂಪ ದರ್ಶನ, ಸೀತಾರಾಮ ಕಲ್ಯಾಣ, ರಥೋತ್ಸವ ಹಾಗೂ ನವವಿಧ ತುಲಾಭಾರ ಕಾರ್ಯಕ್ರಮ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಮೊ. 9606766824/ 9141826180 ಗೆ ಸಂಪರ್ಕಿಬಹುದು.
Discussion about this post