ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಕನ್ನಡದ ಕಲಾವಿದರಿಗೆ, ನಟರಿಗೆ ಗೌರವ ಸಲ್ಲಿಸುವುದು ಕನ್ನಡಿಗರ ಕರ್ತವ್ಯವಾಗಬೇಕು. ಕಲಾವಿದರಿಗೆ ಜಾತಿ, ಮತ ಪಂಥದ ಹಂಗಿಲ್ಲ. ಅನಿವಾರ್ಯವೂ ಅಲ್ಲ. ಕಲೆಗೆ ನಟನೆ, ಗೌರವ, ಪ್ರೀತಿ ಅಭಿಮಾನ ಮುಖ್ಯ. ಸಂಕುಚಿತ ವ್ಯಕ್ತಿಗಳು ಕಲಾವಿದರಿಗೆ ಮಾಡುವ ಅಗೌರವಕ್ಕೆ ಮಾನ್ಯತೆ ಇಲ್ಲ. ಕಲಾವಿದರನ್ನು ಕಲೆಯ ದೃಷ್ಟಿಯಲ್ಲಿ ನೋಡಬೇಕು ಎಂದು ಸಂಸ್ಕೃತಿ ಚಿಂತಕ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಜನ್ಮದಿನ ಹಾಗೂ ನಟರಾದ ಉಪೇಂದ್ರ, ಶೃತಿ ಅವರ ಜನ್ಮದಿನದ ಅಂಗವಾಗಿ ಅವರು ನೀಡಿರುವ ಕೊಡುಗೆಗಳ ಕುರಿತು ಮಾತನಾಡುತ್ತಾ ಕಲಾವಿದರು ಕಲೆಯ ಸಾರ್ವಭೌಮರು. ಕನ್ನಡ ಚಿತ್ರರಂಗ ಮತ್ತು ದೇಶದ ವಿವಿಧ ಭಾಷೆಗಳಲ್ಲಿ ಅಭಿನಯಿಸಿರುವ ಕಲಾವಿದರು ಪೂರ್ತಿಯಾಗಿ ಅವರ ಚಿತ್ರದ ಮೌಲ್ಯಗಳನ್ನು ಅಷ್ಟೇ ವೀಕ್ಷಕರು ಅರಿತು ನಡೆಯಬೇಕು. ಸಾಧಕರ ಸಾಧನೆ ಮಾತ್ರ ಮುಖ್ಯ. ಸಾಧನೆಯನ್ನು ಮುಖವಾಡದಲ್ಲಿ ನೋಡುವುದನ್ನು ಬಿಡಲು, ಸರ್ವರಿಗೂ. ಒಳ್ಳೆಯ ಭಾವನೆ ಬೆಳೆಯುವ ಗುಣ ನೀಡಲಿ ಎಂದು ಜಯಂತಿಗಳ ಮೂಲಕ ಪ್ರಾರ್ಥಿಸೋಣ.
ವಿಷ್ಣುವರ್ಧನ್ ರವರು ನೂರಾರು ಚಲನಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಚಲನಚಿತ್ರಗಳ ಮೂಲಕ ಮಾನವೀಯ ಮೌಲ್ಯಗಳು, ದೇಶಕ್ಕಾಗಿ ಸೈನಿಕ ಸೇವೆ, ಕುಟುಂಬದ ಚಿತ್ರಣ, ಒಟ್ಟಿಗೆ ಬಾಳುವ ರೀತಿ, ಮನುಷ್ಯನ ಸಮಗ್ರ ಕಲ್ಯಾಣದ ದೃಷ್ಟಿಕೋನದ ಚಿತ್ರಗಳು ಮಾನವನಲ್ಲಿ ತುಂಬಾ ಪ್ರಭಾವ ಬೀರುತ್ತದೆ. ಅಂತಹ ಸುಂದರ ಸಾಹಸ, ಪ್ರೀತಿ, ದುಷ್ಟರ ಸಂಹಾರ, ದೇಶ ವಿರೋಧಿ ಸಾಮಾಜಿಕ ವಿರೋಧಿ, ಮೌಲ್ಯಗಳ ಚಿತ್ರಗಳನ್ನು ನೀಡಿರುವ ನಟರುಗಳು ಶಾಶ್ವತವಾಗಿ ಮನಸ್ಸಿನಲ್ಲಿ ನಿಲ್ಲುತ್ತಾರೆ. ಕನ್ನಡದಲ್ಲಿ ಹಲವಾರು ನಟರು ಅಭಿನಯ ಶ್ರೇಷ್ಠರಾಗಿ ಭಾರತೀಯ ಚಿತ್ರರಂಗದಲ್ಲಿ ಅಪಾರ ಕೊಡುಗೆ ನೀಡುತ್ತಿದ್ದಾರೆ. ಎಲ್ಲಾ ಕಲಾವಿದರ ಚಿತ್ರಗಳನ್ನು ಗೌರವಿಸೋಣ. ಸಂತೋಷ ಪಡೋಣ ಎಂದರು.
ನಿವೃತ್ತ ಮುಖ್ಯ ಶಿಕ್ಷಕಿ ಸರಸ್ವತಿ ಮಾತನಾಡಿ ಕನ್ನಡದಲ್ಲಿ ನೂರಾರು ಉತ್ತಮ ಚಿತ್ರಗಳು ಹೊರಬಂದಿದೆ ಕಲಾವಿದರ ಅಭಿನಯ,ನಿರ್ದೇಶನ, ಹಣ ಹೂಡಿಕೆ ಮೂಲಕ ಚಲನಚಿತ್ರವನ್ನು ನಿರ್ಮಿಸಿ ಚಿತ್ರಗಳನ್ನು ಜನರಿಗೆ ನೀಡುತ್ತಿರುವ ಕನ್ನಡಿಗರಿಗೆ ಸದಾ ಅಭಿಮಾನ ಬೆಳೆಸಿಕೊಳ್ಳೋಣ ಎಂದರು.
ಗಾಯಕರಾದ ಕಾಗಲವಾಡಿ ರಂಗಸ್ವಾಮಿ, ಜಯರಾಜ್ ರವಿಚಂದ್ರ ಪ್ರಸಾದ್, ಶಿವಲಿಂಗಮೂರ್ತಿ, ನಾಗೇಶ್, ಮಹಮದ್ ಕಾರ್ ಕುಮಾರ್, ಮಹೇಶ್ , ಜಗದೀಶ್ ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








