ನವದೆಹಲಿ: ಕೋಟ್ಯಂತರ ಭಾರತೀಯರನ್ನು ಅಗಲಿ ಬಾರದ ಲೋಕಕ್ಕೆ ತೆರಳಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ನೆರವೇರಿದ್ದು, ಇಡಿಯ ರಾಷ್ಟ್ರ ಭಾರವಾದ ಮನಸ್ಸಿನಿಂದ ಮಾಜಿ ಪ್ರಧಾನಿಯವರನ್ನು ಬೀಳ್ಕೊಟ್ಟಿದೆ.
ಇಂದು ಸಂಜೆ ನವದೆಹಲಿಯ ಸ್ಮೃತಿ ಸ್ಥಳದಲ್ಲಿ ಅಟಲ್ ಜೀ ಅಂತ್ಯಸಂಸ್ಕಾರ ನಡೆದಿದ್ದು, ದೇಶ ವಿದೇಶಗಳ ಗಣ್ಯಾತಿಗಣ್ಯರು ಹಾಜರಿದ್ದು, ಅಂತಿಮ ಗೌರವ ಸಲ್ಲಿಸಿದ್ದು ನೋಡಿದರೆ, ವಾಜಪೇಯಿ ಅವರ ವ್ಯಕ್ತಿತ್ವದ ಪ್ರಭೆ ಹೇಗಿತ್ತು ಎನ್ನುವುದು ವೇದ್ಯವಾಗುತ್ತದೆ.
ಅಟಲ್ ಜೀ ಅವರಿಗೆ ಯಾರೆಲ್ಲಾ ಅಂತಿಮ ಗೌರವ ಸಲ್ಲಿಸಿದರು? ಇಲ್ಲಿದೆ ನೋಡಿ:
ತಮ್ಮ ತಂದೆ ಸಮಾನರಾದ, ಗುರುಗಳಾದ ಅಟಲ್ ಜೀ ಅವರಿಗೆ ಪ್ರಧಾನಿ ನರೇಂದ್ರ ಕಣ್ಣೀರು ತುಂಬಿಕೊಂಡೇ ಅಂತಿಮ ನಮನ ಸಲ್ಲಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಅತ್ಯಾಪ್ತ ಸ್ನೇಹಿತ ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ತಮ್ಮ ಸ್ನೇಹಿತನಿಗೆ ದುಃಖ ತುಂಬಿದ ಮನದಿಂದಲೇ ಅಂತಿಮ ನಮನ ಸಲ್ಲಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಅವರಿಂದ ಅಂತಿಮ ಗೌರವ
ರಾಷ್ಟ್ರಪತಿ ರಾಮನಾಥ ಕೋವಿಂದ್ ಅಗಲಿದ ಮಾಜಿ ಪ್ರಧಾನಿಯವರಿಗೆ ಅಂತಿಮ ಗೌರವ ಸಲ್ಲಿಸಿ, ಕಂಬನಿ
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಡಿಯ ಇಲಾಖೆ ಹಾಗೂ ಸೇನೆಯ ಪರವಾಗಿ ಗೌರವ
ಅಟಲ್ ಜೀ ಅವರೊಂದಿಗೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇಂದಿನ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅಟಲ್ ಜೀ ಅವರಿಗೆ ಅಂತಿಮ ಗೌರವ
ಭೂತಾನ್ ದೊರೆ ಜಿಗ್ಮೆ ಖೇಸರ್ ನಾಮ್ಜಿಲ್ ವಾಂಗ್ಚಕ್ ಅವರಿಂದ ಅಂತಿಮ ನಮನ
ಶ್ರೀಲಂಕಾ ವಿದೇಶಾಂಗ ಸಚಿವ ಲಕ್ಷ್ಮಣ ಕಿರಿಲ್ಲಾ ಅವರಿಂದ ಅಂತಿಮ ನಮನ
ವಾಜಪೇಯಿ ಅವರ ಸ್ನೇಹಿತರಾಗಿದ್ದ ಅಫ್ಘಾನಿಸ್ಥಾನದ ಮಾಜಿ ಪ್ರಧಾನಿ ಹಮೀದ್ ಖರ್ಜಾಯಿ ಅಂತಿಮ ನಮನ ಸಲ್ಲಿಸಿದರು.
ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
ನೌಕಾಪಡೆಯ ಚೀಫ್ ಅಡ್ಮಿರಲ್ ಸುನಿಲ್ ಲಂಬಾ
ವಾಯ ಸೇನೆಯ ಮುಖ್ಯಸ್ಥ ಮಾರ್ಷಲ್ ಬೀರೇಂದರ್ ಸಿಂಗ್
ನೇಪಾಳ ವಿದೇಶಾಂಗ ಸಚಿವ ಕುಮಾರ್ ಗ್ಯವಾಲಿ, ಬಾಂಗ್ಲಾದೇಶ ವಿದೇಶಾಂಗ ಸಚಿವ ಅಬುಲ್ ಹಸನ್ ಮೊಹಮದ್ ಅಲಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜನಾಥ ಸಿಂಗ್, ಮೋಹನ್ ಭಾಗ್ವತ್, ರಾಹುಲ್ ಗಾಂಧಿ, ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಕೇಂದ್ರ ಸಚಿವರು, ಗಣ್ಯಾತಿಗಣ್ಯರು ಹಾಜರಿದ್ದು, ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.





















Discussion about this post