ಶಿವಮೊಗ್ಗ: ದೇಶದಲ್ಲಿ ಬಿಜೆಪಿಯನ್ನು ಬೇರು ಮಟ್ಟದಲ್ಲಿ ಕಟ್ಟಿದ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ನಮ್ಮೊಂದಿಗಿಲ್ಲ.. ಆದರೆ, ಅವರ ದೇಶ ಸೇವೆಯ ನೆನಪುಗಳ ಮಾತ್ರ ಎಂದಿಗೂ ದೇಶವಾಸಿಗಳಿಂದ ಮರೆಯಾಗುವುದಿಲ್ಲ.
ಅಟಲ್ ಜಿ ಪಕ್ಷ ಸಂಘಟನೆಗಾಗಿ ದೇಶ ಪ್ರವಾಸ ಮಾಡುವ ವೇಳೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗಕ್ಕೆ ಆಗಮಿಸಿದ್ದರು.
5 ಬಾರಿ ಶಿವಮೊಗ್ಗಕ್ಕೆ ಬಂದಿರುವ ಅಟಲ್ ಜೀ, 4 ಬಾರಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಮನೆಯಲ್ಲಿ ತಂಗಿದ್ದರು.
ಅದು 1978ನೆಯ ಇಸವಿ. ಶಿವಮೊಗ್ಗದಲ್ಲಿ ಆಯೋಜನೆಯಾಗಿದ್ದ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಲು ಅವರು ಆಗಮಿಸುತ್ತಾರೆ ಎಂಬ ಮಾಹಿತಿ ಡಿಎಚ್‌ಎಸ್ ಅವರಿಗೆ ದೊರೆತಿತು.
ಅಂದು ಡಿಎಚ್‌ಎಸ್ ವಿನಾಯಕ ಟಾಕೀಸ್ ಎದುರಲ್ಲಿದ್ದ ಮನೆ ಕನಿಷ್ಠ 50-60ಜನಕ್ಕೆ ಆಗುವಷ್ಟು ದೊಡ್ಡಮನೆಯಾಗಿತ್ತು.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಭೇಟಿಯಾಗಿ, ಶಿವಮೊಗ್ಗದ ಅವರ ವಾಸ್ತವ್ಯದ ಕುರಿತು ವಿಚಾರಿಸಿದ ಡಿಎಚ್‌ಎಸ್ ಅವರನ್ನು ಯಾಕೆ ನಿನ್ನ ದೊಡ್ಡಮನೆ ಇತ್ತಲ್ಲ ಏನಾಯಿತು ಎಂದು ಅಟಲ್ ಜೀ ಪ್ರಶ್ನಿಸಿದ್ದರು.
ಅದಕ್ಕೆ ಡಿಎಚ್‌ಎಸ್ ಇದೆ. ಆದರೆ, ತಾವು ಈಗ ಕೇಂದ್ರ ಸಚಿವರು ಎಂದಿದ್ದರು. ಆದರೇನಂತೆ, ನಿಮ್ಮ ಮನೆಗೆ ಬರುತ್ತೇನೆ ಎಂದಿದ್ದರು.
ಅವರು ಮಾರನೆಯ ದಿನ ರಾತ್ರಿ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಅಟಲ್ ಜೀ ಅವರನ್ನು ಕರೆದುಕೊಂಡು ಬರಲು ಕಾರು ತೆಗೆದುಕೊಂಡು ಹೋಗಿದ್ದರು ಡಿಎಚ್‌ಎಸ್. ಆಗಿನ ಎಸ್‌ಪಿ ಸಾಂಗ್ಲಿಯಾನಾ ಹಾಗೂ ಪೋಲಿಸರು ನನ್ನ ಕಾರ್‌ನ್ನು ನಿಲ್ದಾಣದ ದ್ವಾರದ ಬಳಿ ನಿಲ್ಲಿಸಲು ಬಿಡಲಿಲ್ಲ. ನಿಮ್ಮ ಮನೆಗೆ ಅವರು ಬರುವುದಿಲ್ಲ. ಅಲ್ಲಿ ಯಾವುದೇ ರಕ್ಷಣೆ ನೀಡಿಲ್ಲ ಎಂದೆಲ್ಲಾ ಕಾರಣ ಹೇಳಿದ್ದರು.
ಅಂದು ಡಿಎಚ್‌ಎಸ್ ದೂರದಲ್ಲಿ ಕಾರು ನಿಲ್ಲಿಸಿಕೊಂಡಿದ್ದರು. ಅಟಲ್‌ಜೀ ನಿಲ್ದಾಣದಿಂದ ಹೊರಬಂದವರೇ ಅವರು ಹುಡುಕಿ, ಕರೆದರು. ಶಿಷ್ಟಾಚಾರ, ಸುರಕ್ಷತಾ ವ್ಯವಸ್ಥೆ ಎಲ್ಲವನ್ನೂ ದಾಟಿ ನನ್ನ ಕಾರಿನಲ್ಲಿ ಡಿಎಚ್‌ಎಸ್ ಮನೆಗೆ ಆಗಮಿಸಿದ್ದರು. ರಾತ್ರಿ ತಂಗಿದ್ದು, ಬೆಳಿಗ್ಗೆ ಅವರ ಮನೆಯ ಅಡುಗೆ ಮನೆಯಲ್ಲಿ ತಾವೇ ಸ್ವತಃ ಬಿಸಿಯಾದ ಚಹಾ ತಯಾರಿಸಿ, ಡಿಎಚ್‌ಎಸ್ ಅವರಿಗೂ ಕೊಟ್ಟು ತಾವೂ ಕುಡಿದರು.
Discussion about this post