ಇಂತಹ ದುಃಖದ ಸಮಯದಲ್ಲೂ ಸಹ ತಮ್ಮ ಕುತಂತ್ರದ ಬೇಳೆ ಬೇಯಿಸಿಕೊಳ್ಳಲು ಮೋದಿ ವಿರೋಧಿಗಳು ಆತುರದಲ್ಲಿದ್ದಾರೆ.
ವಿಶೇಷ ಲೇಖನ: ಅಕ್ಷತಾ ಬಜ್ಪೆ, ಬರಹಗಾರ್ತಿ
ಮೋದಿ ಹಾಗೂ ಅಟಲ್ ರನ್ನು ಹೋಲಿಸುವುದು ಸಮಂಜಸವಲ್ಲ. ಆದರೆ ಮೋದಿಯಲ್ಲಿ ಅಟಲ್ ಶಿಷ್ಯನನ್ನು ಕಾಣಬಹುದು. ಗುರು ಸ್ವತಂತ್ರ ಭಾರತದ ಮೊದಲ ಅತೀ ದೊಡ್ಡ ರಾಷ್ಟ್ರೀಯ ಪಕ್ಷವನ್ನು ಕಟ್ಟಿದರು. ಶಿಷ್ಯ ಸ್ವತಂತ್ರ ಭಾರತದ ಮೊದಲ ಕಾಂಗ್ರೆಸೇತರ ಸರ್ಕಾರ ಪೂರ್ಣ ಬಹುಮತದೊಂದಿಗೆ ರಚಿಸಿದರು. ಇಬ್ಬರದ್ದೂ ತಪಸ್ಸೇ. ಅವರವರ ಕಾಲಘಟ್ಟದಲ್ಲಿ ಭೀಷ್ಮನಂತೆ ನಿಂತು ಪಕ್ಷವನ್ನು ದೇಶವನ್ನು ಮುನ್ನಡೆಸಿದವರು.
ಇಂದು ಅಟಲ್ ಅಸ್ತಂಗತರಾಗಿದ್ದಾರೆ. ಇಡೀ ದೇಶ ಶೋಕ ಸಾಗರದಲ್ಲಿ ಮುಳುಗಿದೆ. ಮೋದಿ ತನ್ನ ತಂದೆಯಂತಹ, ಗುರುವನ್ನು, ತನ್ನ ತಲೆ ಮೇಲಿನ ಸೂರನ್ನು ಕಳೆದುಕೊಂಡ ಮಗುವಿನಂತೆ ದುಃಖಿಸುತ್ತಿದ್ದಾರೆ.
ಈ ನಡುವೆ ಅವರಿಬ್ಬರನ್ನು ಹೋಲಿಕೆ ಮಾಡಿ ಮೋದಿಗೆ ಅಟಲ್ ರಂತಹ ಛಾತಿ ಇಲ್ಲ. ಮೋದಿ ಅಹಂಕಾರ ಮರೆತು ಅಟಲ್ ರಂತೆ ಇರಲಿ. ಮೋದಿ ಅಟಲ್ ರಷ್ಟು ಶ್ರೇಷ್ಟ ನಾಯಕರಲ್ಲ ಎಂದು ಹೇಳುತ್ತಾ ಹೇಳುತ್ತಾ ಮೋದಿಯನ್ನು ಕುಗ್ಗಿಸುವ, ಈ ಮೂಲಕ ಮೋದಿ ವಿರೋಧಿ ದನಿಗೆ ಗಾಳಿ ಹಾಕುವ ಕುತಂತ್ರಿ ನೀಚರು ಇಂತಹ ಸಂದಿಗ್ಧತೆಯಲ್ಲೂ ತಮ್ಮ ಬೇಳೆ ಬೇಯುಸಿಕೊಳ್ಳುವ ಆತುರದಲ್ಲಿದ್ದಾರೆ.
ಹಾಗಾಗಿ ನಾವು ಎಚ್ಚರದಿಂದಿರಬೇಕು. ಮೋದಿಯ ಮಾತುಗಳು ಅಟಲ್ ವಾಗ್ಝರಿಯಂತಹ ಮೋಡಿ ಮಾಡದೇ ಇರಬಹುದು. ಹೌದು, ಗುರುವಿನ ಚರಿಷ್ಮಾ ಎಂದೂ ಶಿಷ್ಯನಿಗಿಂತ ಹೆಚ್ಚೇ ಇರುತ್ತದೆ. ಮೋದಿಯವರೇ ಸ್ವತಃ ಅಟಲ್ ಚರಣಗಳಲ್ಲಿ ಶರಣುಹೋದವರು. ಮತ್ತು ಇಂದು ಅಟಲ್ ಆದರ್ಶದ ಹಾದಿಯಲ್ಲಿ ತಾವೂ ಸಾಗಿ ದೇಶವನ್ನೂ ಅಟಲ್ ಕನಸಿನಂತೆ ಮುನ್ನಡೆಸುತ್ತಿರುವವರು.
ಎದುರಿರುವ ಸವಾಲುಗಳು, ಶತ್ರುಗಳು, ಪರಿಸ್ಥಿತಿಗಳು ಬೇರೆ ಬೇರೆ ಇರುವಂತೆ ಕಾರ್ಯವೈಖರಿಯೂ ವಿಭಿನ್ನ ಅಂದಿನ ರಾಜಕಾರಣಕ್ಕೆ ರಾಮನಂತಹ ರಾಜ ಬೇಕಿದ್ದ, ಅಟಲ್ ಉದಯಿಸಿದರು. ಇಂದು ಕೃಷ್ಣನೇ ಬೇಕು, ಮೋದಿಯೇ ಸರಿ!
ವಿಚಾರಗಳು,- ಆದರ್ಶಗಳು-ಗುರಿ-ಕನಸು ಒಂದೇ ಇದ್ದ ಮೇಲೆ ಮತ್ತೆ ನೂರು ಪ್ರಶ್ನೆಗಳು ಯಾಕೆ?
ಅಟಲಜೀಆಪ್‌ಅಮರ್_ರಹೇ
ಮೋದಿಜೀಆಪ್‌ಆಗೇಬಡೋ
Discussion about this post