ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಆಲ್ಕೊಳ ವಿವಿ ಕೇಂದ್ರದಿಂದ ಸರಬರಾಜಾಗುವ ಕೇಂದ್ರದಿಂದ ಸರಬರಾಜಾಗುವ ಫೀಡರ್-10 ಮತ್ತು 11ರಲ್ಲಿ ಐಪಿಡಿಎಸ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸವಿ ಬೇಕರಿ ಹಿಂಭಾಗ ಮತ್ತು ಎದುರಿನ ರಸ್ತೆ, ಕೆನರಾ ಬ್ಯಾಂಕ್, ಸೂಡ ಕಾಂಪ್ಲೇಕ್ಸ್, ಸಬ್ ರಿಜಿಸ್ಟರ್ ಕಚೇರಿ, ವೀರ ಸಾವರ್ಕರ್ ಬಿಲ್ಡಿಂಗ್, ಪೊಲೀಸ್ ಚೌಕಿ, ಬಾಲಾಜಿ ಗ್ರಾನೈಟ್ ಸುತ್ತಮುತ್ತ, ವಿನೋಬನಗರ 100 ಅಡಿ ರಸ್ತೆ, ಮೆಸ್ಕಾಂ ಕಚೇರಿ, 60 ಅಡಿ ರಸ್ತೆ, ಮೇದಾರಕೇರಿ, ಕೆ.ಹೆಚ್ಬಿ ಕ್ವಾಟ್ರಸ್, ಎಸ್ಕೆಎನ್ ಶಾಲೆ ಸುತ್ತಮುತ್ತ, ದಾಮೋದರ ಕಾಲೋನಿ, ಕೆಜೆಪಿ ಆಸ್ಪತ್ರೆ, ಆರಾಧ್ಯ ಕಣ್ಣಿನ ಆಸ್ಪತ್ರೆ, ಕರಿಯಣ್ಣ ಬಿಲ್ಡಿಂಗ್, ಶಿವಾಲಯ ದೇವಸ್ಥಾನ, ಪೊಲೀಸ್ ವಸತಿಗೃಹ, ಭಾಗ್ಯರಾವ್ ಆಸ್ಪತ್ರೆ ಹಿಂಭಾಗದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಇನ್ನು, ಮೆಗ್ಗಾನ್ ವಿವಿ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂಜಿಎಫ್-4 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಮೇಳಿಗೆ ಕ್ಲಿನಿಕ್, ಲ್ಯಾಕ್ಮೇ ಸೆಲೂನ್, ಕುವೆಂಪು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ.16 ರಂದು ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನ.ಉ.ವಿ.-3ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post