ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಮೈಸೂರು |
ಪುಣೆ ವಿಭಾಗದ ಪುಣೆ-ಮೀರಜ್ ಭಾಗದಲ್ಲಿ ಡಬ್ಲಿಂಗ್ ಯೋಜನೆಯ ಭಾಗವಾಗಿ ಅಪ್ ಲೂಪ್ ಲೈನ್ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ ಡೌಂಡಜ್ ನಿಲ್ದಾಣದಲ್ಲಿ ಎಂಜಿನಿಯರಿಂಗ್ ಕಾಮಗಾರಿಗಳು ನಡೆಯಲಿವೆ.
ಈ ಕುರಿತಂತೆ ನೈರುತ್ಯ ರೈಲ್ವೆ ಪ್ರಕಟಣೆ ಹೊರಡಿಸಿದ್ದು, ಈ ಕಾರಣದಿಂದಾಗಿ, ಕೆಳಗಿನ ರೈಲು ಸೇವೆಗಳನ್ನು ನಿಯಂತ್ರಿಸಲಾಗುವುದು ಎಂದು ಮಧ್ಯ ರೈಲ್ವೆ ತಿಳಿಸಿದೆ.
1. ಜುಲೈ 19, 2025 ರಂದು ಬೆಂಗಳೂರಿನ ಕೆಎಸ್ಆರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16506 ಕೆಎಸ್ಆರ್ ಬೆಂಗಳೂರು – ಗಾಂಧಿಧಾಮ್ ಎಕ್ಸ್ ಪ್ರೆಸ್ ಮಾರ್ಗ ಮಧ್ಯ 2 ಗಂಟೆ 20 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ, ಇದೆ ರೈಲು ಜುಲೈ 26, 2025 ರಂದು ಹೊರಡುವ ಪ್ರಯಾಣದಲ್ಲಿ ಸಹ 1 ಗಂಟೆ 20 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
2. ಜುಲೈ 22, 2025 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16210 ಮೈಸೂರು – ಅಜ್ಮೀರ್ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯ 2 ಗಂಟೆ 20 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post