ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮೆಸ್ಕಾಂ ನಗರ ಉಪ ವಿಭಾಗ ವ್ಯಾಪ್ತಿಗಳಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಎಪ್ರಿಲ್ 28 ರ ನಾಳೆ ಮಂಗಳವಾರದಂದು ಈ ಶಾಖೆ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದ್ದಾರೆ.
Also Read>> ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ | ಮಾಸ್ಟರ್ ಮೈಂಡ್ ಶಾರಿಕ್’ಗೆ 10 ವರ್ಷ ಜೈಲು ಶಿಕ್ಷೆ
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಹಳೇನಗರ, ಹೊಸಸೇತುವೆ ರಸ್ತೆ, ಸಿದ್ಧಾರೂಢನಗರ, ಶಂಕರ ಮಠ, ಕನಕನಗರ, ಕೆಎಸ್’ಆರ್’ಟಿಸಿ ಡಿಪೋ, ತಾಲೂಕು ಕಚೇರಿ ರಸ್ತೆ, ಅಂಬೇಡ್ಕರ್ ನಗರ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟಿ, ಕಂಚಿನ ಬಾಗಿಲು, ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಪ್ರದೇಶ, ಹಳ್ಳದಮ್ಮ ನವರ ಬೀದಿ, ಮಡಿವಾಳರ ಬೀದಿ, ಖಾಜಿಮೊಹಲ್ಲಾ, ಭೂತನಗುಡಿ, ಹೊಳೆ ಹೊನ್ನೂರು ರಸ್ತೆ, ಖಲಂದರನಗರ, ಜಟ್ ಪಟ್ ನಗರ,ಅನ್ವರ್ ಕಾಲೋನಿ, ಮೊಮಿನ್ ಮೊಹಲ್ಲಾ, ಅಮೀರ್ ಜಾನ್ ಕಾಲೋನಿ, ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















