ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |ರಂಗಭೂಮಿ, ನಾಟಕಗಳು ಮನೋರಂಜನೆ ಮಾತ್ರವಲ್ಲದೆ ಸಂದೇಶವಾಹಕ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವ ಮಧ್ಯಮವಾಗಿ ಅನೇಕ ಶತಮಾನಗಳಿಂದಲೂ ನಡೆದು ಬಂದಿದೆ. ಸಂಪೂರ್ಣ ಪ್ರಮಾಣದ ರಂಗ ತಂಡಗಳು ಕಡಿಮೆಯಾಗುತ್ತಿದ್ದರೂ ಹವ್ಯಾಸಿ ರಂಗ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವವರು ಸಾಕಷ್ಟು ಜನರಿದ್ದಾರೆ. ನಾಟಕರಂಗದಲ್ಲಿ ಮಹಿಳೆಯರ ಪಾತ್ರ ಬಹಳವೇ ಕಡಿಮೆ ಇದ್ದು ಮೊದಲೆಲ್ಲ ಪುರುಷರೇ ಮಹಿಳಾ ಪಾತ್ರವನ್ನು ನಿರ್ವಹಿಸುತ್ತಿದ್ದರು. ಆದರೆ ಕಾಲ ಕಳೆದಂತೆ ಮಹಿಳೆಯರು ತಮ್ಮನ್ನು ತಾವು ನಾಟಕ ರಂಗದಲ್ಲಿ ತೊಡಿಸಿಕೊಂಡಿದ್ದಾರೆ.
ಮಹಿಳಾ ನಟಿಯರು ನಿರ್ದೇಶಕರು ಮಹಿಳಾ ಮಣಿಗಳೇ ತಂಡವೇ ಒಂದು ನಾಟಕವನ್ನು ರಚಿಸಿ ಅಭಿನಯಿಸುವುದು ವಿಶೇಷವಾಗಿದೆ. ಅದರಲ್ಲಿ ಮಹಿಳೆಯೇ ಬರೆದು ಮತ್ತೊಬ್ಬರು ಮಹಿಳೆಯೇ ನಿದೇರ್ಶಿಸಿ ಮಹಿಳಾ ನಟಿಯರೇ ನಟಿಸುತ್ತಿರುವ ವಿಶಿಷ್ಟ ನಾಟಕ “ಬಾಯ್ ತುಂಬಾ ನಕ್ಬಿಡಿ” 22 ಯಶಸ್ವಿ ಪ್ರದರ್ಶನಗಳನ್ನು ಕಂಡಿದ್ದು, 23ನೇ ಪ್ರದರ್ಶನ ಬೆಂಗಳೂರಿನ ನರಸಿಂಹ ರಾಜ ಕಾಲೋನಿಯ ಡಾ.ಅಶ್ವತ್ಥ ಕಲಾ ಭವನದಲ್ಲಿ ನಡೆಯಲಿದೆ.
ನಾಟಕದ ಬಗ್ಗೆ
ಈ ನಾಟವು ಮಧ್ಯಮ ವರ್ಗದ ಕುಟುಂಬ, ಅಲ್ಲಿ ಬರುವ ಮನೆಕೆಲಸದವಳು, ಮನೆ ಯಜಮಾನಿಯ ಸ್ನೇಹಿತೆಯರು ಹಾಗೂ ಅಕ್ಕ ಪಕ್ಕದ ಸುತ್ತ ಸುತ್ತುತ್ತದೆ. ಬೆಂಗಳೂರಿನ ನಗರ ಜೀವನದಲ್ಲಿ ಅನೇಕ ರಾಜ್ಯಗಳಿಂದ ಬಂದ ಜನರು ತಮ್ಮ ಭಾಷೆಗಳನ್ನು ಬಿಟ್ಟು ಕೊಡದೇ ಕನ್ನಡವನ್ನು ತಮಗೆ ತಿಳಿದಂತೆ ಮಾತನಾಡುತ್ತ ಇಲ್ಲಿಯ ಜನರೊಂದಿಗೆ ಸ್ನೇಹ ಮತ್ತು ಸಹಬಾಳ್ವೆ ಜೊತೆಗೆ ಧರ್ಮದ ಚೌಕಟ್ಟು ಇಲ್ಲದೇ ದಿನ ನಿತ್ಯದ ಜೀವನದಲ್ಲಿ ಎಲ್ಲರೊಂದಿಗೆ ಸಹಬಾಳ್ವೆ ನಡೆಸುವ ವಿಷಯಗಳನ್ನು ಮನ ಮುಟ್ಟವಂತೆ ಹಾಸ್ಯಮಯವಾಗಿ ಹೊರ ಹೊಮ್ಮಿದ ನಾಟಕವಾಗಿದೆ.
ನಾಟಕ ಒಂದು ಹಾಸ್ಯ ನಾಟಕವಾಗಿದ್ದು ಕೂಡ ಹಾಸ್ಯದಲ್ಲಿ ಕೂಡ ಸಾಮಾಜಿಕ ಪ್ರಜ್ಞೆ, ಉತ್ತಮ ನಡೆ ನುಡಿಗಳಿಗೆ ಪ್ರೇರಕವಾಗುವಂತಹ ಅದ್ಭುತವಾದ ನಾಟಕವಾಗಿದೆ. ಕೆಲಸದವರು ಮತ್ತು ಮಾಲಿಕರ ಸಂಬಂಧ, ಹೆಣ್ಣು ಮಕ್ಕಳ ಪರ ಕಾಳಜಿ ಸಮಾಜದಲ್ಲಿ ಸಾಮರಸ್ಯ ಸಹಬಾಳ್ವೆಯಂತಹ ಸೂಕ್ಷ್ಮ ವಿಚಾರವನ್ನು ಹಾಸ್ಯಮಯವಾಗಿ ಎಲ್ಲರನ್ನೂ ನಗಿಸುತ್ತಾ ಸಾಮಾಜಿಕ ಪರಿಸ್ಥಿತಿ ಹಾಗೂ ಜನರ ಬಾಂಧವ್ಯವನ್ನು ಸಭ್ಯತೆಯ ಚೌಕಟ್ಟಿನೊಂದಿಗೆ ತಿಳಿಸಿಕೊಡುವ ಅತ್ಯುತ್ತಮ ನಾಟಕವಾಗಿದೆ. ಹಲವೆಡೆ ಯಶಸ್ವಿ ಪ್ರದರ್ಶನ ಕಂಡಿರುತ್ತದೆ.
-
ಬಾಯ್ ತುಂಬ ನಕ್ಬಿಡಿ-- 22 ಪ್ರದರ್ಶನಗಳು- ಅಂತರಂಗ ಬಹಿರಂಗ ತಂಡ-ಮನೆ ಯಜಮಾನಿ ಮತ್ತು ಕೆಲಸದವಳ ನಡುವೆ ದಿನ ನಿತ್ಯದ ಆಗು ಹೋಗುಗಳ ಮಾತು ಕತೆಯಲ್ಲಿ ಹಾಸ್ಯ
-
ಹಿಂಗ್ ಮಾಡಿದ್ರೆ ಹೆಂಗೆ --27 ಪ್ರದರ್ಶನಗಳು- ಅಂತರಂಗ ಬಹಿರಂಗ ತಂಡ-ಹಳ್ಳಿಯಲ್ಲಿ ಜಾತ್ರೆಗೆ ನಾಟಕ ಮಾಡುವ ತಯಾರಿಯ ಹಾಸ್ಯ ಪ್ರಸಂಗ
-
ಹಸ್ಬೆಂಡ್ 360_ 27 ಪ್ರದರ್ಶನಗಳು- ಅಂತರಂಗ ತಂಡ-ಗಂಡನ ಹೊಟ್ಟೆ ಕರಗಿಸಿ ಒಂದು ರಿಯಾಲಿಟಿ ಶೋಗೆ ತಯಾರು ಮಾಡುವ ಹೆಂಡತಿಯ ಪ್ರಯತ್ನಗಳಲ್ಲಿ ಆಗುವ ಅಡೆ ತಡೆಗಳು
-
ವರಲಕ್ಷ್ಮಿ ಅವಾಂತರ-10 ಪ್ರದರ್ಶನಗಳು- ಪ್ರಕಸಂ ತಂಡ- ಮನೆಗೆ ನಾಯಿ ತಂದು ಸಾಕುವಾಗ ಆಗುವ ಫಜೀತಿಗಳು
-
ನಿನ್ ಹಣೆಬರ ನೀನೆ ಬರಕೋ - ಪ್ರದರ್ಶನಕ್ಕೆ ಸಜ್ಜಾಗುತ್ತಿದೆ - ಅತಿಯಾಗಿ ಜಾತಕ, ವಾಸ್ತು ಬಗ್ಗೆ ನಂಬುವ ಒಂದು ಹೆಣ್ಣಿನ ಸುತ್ತಾ ಹೆಣೆದಿರುವ ಕತೆ
ನಾಟಕದ ಲೇಖಕಿಯ ಬಗ್ಗೆ
ಈ ನಾಟಕವನ್ನು ಬರೆದಿರುವವರು ಶ್ರೀಮತಿ ನಾಗವೇಣಿ ರಂಗನ್‌ರವರು ಇವರು ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಇವರು ಉತ್ತಮ ಬರಹಗಾರ್ತಿಯೂ ಆಗಿದ್ದಾರೆ, ಇವರು ಎರಡು ಕವನ ಸಂಕಲಗಳನ್ನು ಕೂಡ ಬರೆದು ಬಿಡುಗಡೆ ಮಾಡಿದ್ದರೆ. ೫ ಹಾಸ್ಯ ನಾಟಕಗಳನ್ನು ಬರೆದು ಎಲ್ಲ ನಾಟಕಗಳ ಯಶಸ್ವಿ ಪ್ರದರ್ಶನವು ನಡೆಯುತ್ತಲಿದೆ. ಸಧ್ಯಕ್ಕೆ ಪ್ರದರ್ಶನಗೊಳ್ಳುತ್ತಿರುವ ನಾಟಕ “ಬಾಯ್ ತುಂಬಾ ನಕ್ ಬಿಡಿ” ಪ್ರಸ್ತುತ ಪ್ರದರ್ಶನ ಗೊಳ್ಳುತ್ತಿರುವ ನಾಟಕವನ್ನು ಬಿಟ್ಟು ೪ ನಾಟಕಗಳು ಕೂಡ ಯಶಸ್ವಿ ಪ್ರದರ್ಶನಗೊಳ್ಳುತ್ತಿದ್ದು ಮುದ್ರಣಕ್ಕೆ ಸಿದ್ಧವಾಗಿವೆ. ಒಟ್ಟು ಐದು ನಾಟಕಗಳನ್ನು ಬರೆದು ತಮ್ಮ ಸಹ ನಿದೇರ್ಶನದಲ್ಲಿ ಹಾಗೂ ಇನ್ನು ಬೇರೆ ನಿರ್ದೇಶಕರ ಜೊತೆಗೆ ನಟಿಯಾಗಿ ಸಹ ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಿರುವ ಇವರು. ಎಲೆ ಮರೆಯ ಕಾಯಿಯಂತೆ ಇರುವ ಸಮಾಜ ಸೇವಕಿಯಾಗಿದ್ದಾರೆ.
ಇವರು ತಮ್ಮ ನಾಟಕ ಪ್ರದರ್ಶನಗಳಿಂದ ಬರುವ ಹಣವನ್ನು ಚಾರಿಟಿ ಶೋಗಳ ಮೂಲಕ ಅನೇಕ ಕಾರ್ಯಗಳಿಗೆ, ದೇವಸ್ಥಾನ ಅಭಿವೃದ್ಧಿಗೆ, ಬಡವರ ಮತ್ತು ಅಸಹಾಯಕರ ಸೇವೆಗೆ, ಆರೋಗ್ಯ ತಪಾಸಣೆಗೆ ದೇಣಿಗೆಯಾಗಿ ಕೊಡುತ್ತಾ ಬಂದಿರುತ್ತಾರೆ. ತೋಟಗಾರಿಕೆಯನ್ನೇ ಹವ್ಯಾಸ ಮಾಡಿಕೊಂಡಿರುವ ಇವರು ಇಕೆಬಾನ ತರಗತಿಗಳನ್ನು ಕೂಡ ಮಹಿಳೆಯರ ಕಲಿಕೆಗಾಗಿ ಕೇಳಿದ ಸಂಸ್ಥೆಯವರಿಗಾಗಿ ನಡೆಸಿಕೊಂಡುತ್ತಾರೆ. ಗಿಡ ನೆಡುವ ಕಾರ್ಯದಲ್ಲಿ, ಪ್ಲಾಸ್ಟಿಕ್ ಬಳಕೆಯ ಹಾನಿಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿರುತ್ತಾರೆ. ಅಡುಗೆಯಲ್ಲಿ ಪರಿಣಿತಿ ಇರುವ ಇವರು ಖಾಸಗಿ ವಾಹಿನಿಗಳಿಗೆ ಅತಿಥಿಯಾಗಿ ಸವಿ ರಉಚಿಯನ್ನು ಕಲಿಸಿಕೊಟ್ಟಿರುತ್ತಾರೆ. ಸಂಗೀತ ನೃತ್ಯ ಮೊದಲಾದ ಕಲೆಗಳಲ್ಲೂ ಆಸಕ್ತಿ ಇರುವ ಇರುವ ಮಹಿಳೆಯರಿಗಾಗಿ ಮಕ್ಕಳಿಗಾಗಿ ನಾಟಕ, ನೃತ್ಯಗಳನ್ನು ಲಯನ್ಸ್ ಕ್ಲಬ್ ಮತ್ತಿತರ ಸಂಸ್ಥೆಗಳಿಗೆ ನಡೆಸಿಕೊಡುತ್ತಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲೆಗಳ ಆರಾಧನೆಯ ಜೊತೆಗೆ ಸಮಾಜ ಸೇವೆ ಮಡುತ್ತಿರುವುದು ವಿಶೇಷವಾಗಿದೆ
- ನಾಟಕ ಪ್ರದರ್ಶನದ ಸ್ಥಳ : ಡಾ. ಸಿ. ಅಶ್ವತ್ಥ ಕಲಾ ಭವನ, ಎನ್ ಆರ್ ಕಾಲೋನಿ, ಬೆಂಗಳೂರು
- ದಿನಾಂಕ : 10ನೇ ಆಗಸ್ಟ್
- ಸ್ಥಳ ಕಾದಿರಿಸುವ ಬಗೆ : ಬುಕ್ ಮೈ ಶೋ
- ಮೊಬೈಲ್ ಸಂಖ್ಯೆ : 8660547776
- ಪ್ರದರ್ಶನ ಸಮಯ : ಸಂಜೆ 4ಕ್ಕೆ ಮತ್ತು ಸಂಜೆ 7ಕ್ಕೆ 2 ಪ್ರದರ್ಶನಗಳು
- ನಾಟಕದ ರಚನೆ ಮತ್ತು ಸಹ ನಿರ್ದೇಶನ : ಶ್ರೀಮತಿ ನಾಗವೇಣಿ ರಂಗನ್
- ನಿದೇರ್ಶನ : ವನಿತಾ ರಂಗಾಯಣರವರು
- ಕಲಾವಿದರು : ಕಲ್ಪವೃಕ್ಷ ಟ್ರಸ್ಟ್ ನ ಅಂತರಂಗ ಬಹಿರಂಗ ತಂಡದ ಮಹಿಳಾ ಸದಸ್ಯ ನಟಿಯರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post