ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಮೈಸೂರು |
ಆ. 24ರಂದು ಅರಸೀಕೆರೆ-ಬಾಣಾವರ ಹಾಗೂ ಅರಸೀಕೆರೆ-ಹಬ್ಬನಘಟ್ಟ ನಿಲ್ದಾಣಗಳ ನಡುವೆ ಪ್ರಮುಖ ಸಿಗ್ನಲಿಂಗ್ ಮತ್ತು ಬ್ಲಾಕ್ ಇನ್ಸ್ಟ್ರುಮೆಂಟ್ ಬದಲಾವಣೆ ಕಾಮಗಾರಿಗಳು ನಡೆಯಲಿದ್ದು, ಅಂದು ಹಲವು ರೈಲುಗಳ ಸಂಚಾರ ರದ್ದುಗೊಳ್ಳಲಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ಅಂದು ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳ ಮರು ನಿಗದಿಪಡಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗಿದೆ. ವಿವರಗಳು ಇಂತಿವೆ.
ಆಗಸ್ಟ್ 23ರಂದು ರದ್ದಾದ ರೈಲು
- 06270 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ರದ್ದು
ಆಗಸ್ಟ್ 24ರಂದು ಒಂದು ದಿನ ರದ್ದಾದ ರೈಲು:
- ಮೈಸೂರು-ಎಸ್’ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ (06269)
- ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್’ಪ್ರೆಸ್ (16226)
- ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್’ಪ್ರೆಸ್ (16225)
- ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ (56267)
- ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ (56268)
- ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ (56266)
- ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ (56265)
ಭಾಗಶಃ ರದ್ದು
ಆಗಸ್ಟ್ 24ರಂದು ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್-ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ರೈಲು ಶಿವಮೊಗ್ಗ ಟೌನ್ ಮತ್ತು ಬೀರೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬೀರೂರಿನಿಂದ ಅದರ ನಿಗದಿತ ಸಮಯದಲ್ಲಿ ಪ್ರಯಾಣ ಆರಂಭಿಸಲಿದೆ.
ರೈಲುಗಳ ಪ್ರಯಾಣದಲ್ಲಿ ನಿಯಂತ್ರಣ
ಆಗಸ್ಟ್ 24ರಂದು ಹೊರಡುವ ಈ ಕೆಳಗಿನ ರೈಲುಗಳ ಪ್ರಯಾಣದಲ್ಲಿ ನಿಯಂತ್ರಣವಿರುತ್ತದೆ. ರೈಲು ಸಂಖ್ಯೆ 16587 ಯಶವಂತಪುರ-ಬಿಕಾನೇರ್ ದ್ವಿ-ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ಯಶವಂತಪುರದಿAದ 60 ನಿಮಿಷ ತಡವಾಗಿ ಹೊರಡಲಿದೆ ಮತ್ತು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 18112 ಯಶವಂತಪುರ-ಟಾಟಾನಗರ ಸಾಪ್ತಾಹಿಕ ಎಕ್ಸ್’ಪ್ರೆಸ್, 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್’ಪ್ರೆಸ್, ಮತ್ತು 12725 ಕೆಎಸ್’ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ದೈನಿಕ ಎಕ್ಸ್’ಪ್ರೆಸ್ ರೈಲುಗಳನ್ನು ಮಾರ್ಗಮಧ್ಯೆ 60-75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಮತ್ತು ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ವಿಶ್ವಮಾನವ ದೈನಿಕ ಎಕ್ಸ್’ಪ್ರೆಸ್ ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post