ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲಗೇಜ್ ಆಟೋದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಿನ್ನೆ ತಡರಾತ್ರಿ ಸುಮಾರು 9.30ರ ವೇಳೆಯಲ್ಲಿ ಹೊಸದುರ್ಗ-ಶಿವಮೊಗ್ಗ ಮಾರ್ಗದಲ್ಲಿ ಲಗೇಜ್ ಆಟೋದಲ್ಲಿ ಒಂದು ಹೋರಿಯನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಇದನ್ನು ಗಮನಿಸಿದ ಬಜರಂಗದಳದ ಅಭಿಷೇಕ್ ಹುಂಚ ಹಾಗೂ ಸ್ನೇಹಿತರು ಅನುಮಾನಗೊಂಡು ವಾಹನವನ್ನು ತಡೆದು, ವಿಚಾರಿಸಿದ್ದಾರೆ. ಗಾಡಿಯಲ್ಲಿದವರು ಮಾಚೇನಹಳ್ಳಿ ಆಯನೂರು ಹತ್ತಿರ ಹೋಗುದಾಗಿ ಹೇಳಿದ್ದಾರೆ. ಅನುಮಾನ ಹೆಚ್ಚಿದ್ದರಿಂದ ಗಾಡಿ ಅಲ್ಲೇ ನಿಲ್ಲಿಸಿ 112ಗೆ ಮಾಹಿತಿ ನೀಡಿ ಹತ್ತಿರದ ದೊಡ್ಡಪೇಟೆ ಠಾಣೆಗೆ ಮಾಹಿತಿ ನೀಡಿ ಗಾಡಿ ತಲುಪಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಮಲೆನಾಡು ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಗೋವುಗಳ ಅಕ್ರಮ ಸಾಗಾಟ ದಂಧೆ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ರಾಜ್ಯ ಗೃಹ ಸಚಿವರ ಸಂಪರ್ಕ ಮಾಡಿ ಪ್ರಕರಣವನ್ನು ಗಮನಕ್ಕೆ ತಂದು ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದೇವೆ ಎಂದು ಅಭಿಷೇಕ್ ಹುಂಚ ಹಾಗೂ ಭಜರಂಗದಳದ ಕಾರ್ಯಕರ್ತರು ತಿಳಿಸಿದ್ದಾರೆ.
ಬಜರಂಗದಳದ ಗಣೇಶ್ ಪ್ರಸಾದ್, ದೇವಾಡಿಗ, ಬಸವರಾಜ್, ರಾಜು ಗೌಡ್ರು, ಅಭಿಷೇಕ್ ಹುಂಚ, ಮತ್ತಿರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post