ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ ಸಂಭವಿಸಿದ ಸ್ಫೋಟದಲ್ಲಿ Blast at Rameshwaram Cafe ಓರ್ವ ಮಹಿಳೆಯ ಕಣ್ಣಿಗೆ ಗಂಭೀರ ಹಾಗೂ ಹಲವರ ಮೈ-ಕೈಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಅಂದಾಜು 10 ಸೆಕೆಂಡ್’ಗಳ ಅಂತರದಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದ್ದು, ಸರ್ಕಾರ ಅಥವಾ ಪೊಲೀಸ್ ಇಲಾಖೆ ಇನ್ನೂ ದೃಢಪಡಿಸಬೇಕಿದೆ.
ಘಟನೆಯಲ್ಲಿ ಗಾಯಗೊಂಡಿರುವ 9 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಮಹಿಳೆಯ ಕಣ್ಣಿಗೆ ಗಾಯವಾಗಿದೆ. ಇನ್ನು, ಓರ್ವ ವ್ಯಕ್ತಿಯ ಬೆನ್ನಿಗೆ ಗಂಭೀರ ಹಾನಿಯಾಗಿದ್ದು, ಇನ್ನು ಕೆಲವರ ಮೈ-ಕೈ ಸುಮಾರು ಒಂದು ಇಂಚಿನಷ್ಟು ಆಳವಾದ ಗಂಭೀರ ಗಾಯವಾಗಿದೆ. ಘಟನೆಯಲ್ಲಿ ನಾಲ್ವರು ಗ್ರಾಹಕರು ಹಾಗೂ ಮೂವರು ಹೊಟೇಲ್ ಸಿಬ್ಬಂದಿಗೆ ಗಾಯವಾಗಿದೆ.
Also read: ಬೆಂಗಳೂರು | ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ | ಗೃಹ ಸಚಿವ ಪರಮೇಶ್ವರ್ ಮಹತ್ವದ ಹೇಳಿಕೆ
ಮಧ್ಯಾಹ್ನ ಸಂಭವಿಸಿದ ಸ್ಫೋಟದ ತೀವ್ರತೆಗೆ ಕೆಫೆಯ ಮುಂಭಾಗ ಛಿದ್ರವಾಗಿದ್ದು, ಅಲ್ಲಿದ್ದ ವಸ್ತುಗಳು ಸುಮಾರು 10 ಅಡಿಗೂ ಹೆಚ್ಚು ದೂರ ಹಾರಿ ಬಿದ್ದಿವೆ.
ಕೆಫೆಯಲ್ಲಿ ಕೈ ತೊಳೆಯುವ ಸಿಂಕ್ ಬಳಿಯಿದ್ದ ಕಸದಬುಟ್ಟಿಯಲ್ಲಿ ಸ್ಫೋಟ ಸಂಭವಿಸಿದೆ.
ಇನ್ನು, ಸ್ಪೋಟದ ಸ್ಯಾಂಪಲ್, ಸ್ಥಳದಲ್ಲಿ ದೊರೆತ ವಸ್ತುಗಳನ್ನು ಅಧಿಕಾರಿಗಳ ತಂಡ ಸಂಗ್ರಹಿಸಿದ್ದು, ಲ್ಯಾಬ್’ಗೆ ಕಳುಹಿಸಲಾಗಿದೆ. ವರದಿ ಬಂದ ನಂತರವಷ್ಟೇ ಸ್ಪೋಟ ಸಂಭವಿಸಿದ್ದು ಹೇಗೆ ಎಂಬುದು ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post