No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Thursday, October 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಕೋಲಾರ ಜಿಲ್ಲೆಯಲ್ಲಿ 300 ಆಕ್ಸಿಜನ್‌ ಬೆಡ್ ವ್ಯವಸ್ಥೆ: ಡಿಸಿಎಂ ಅಶ್ವತ್ಥನಾರಾಯಣ

kalpa News by kalpa News
May 26, 2021
in ಬೆಂಗಳೂರು ನಗರ
0
ಕೋಲಾರ ಜಿಲ್ಲೆಯಲ್ಲಿ 300 ಆಕ್ಸಿಜನ್‌ ಬೆಡ್  ವ್ಯವಸ್ಥೆ:  ಡಿಸಿಎಂ ಅಶ್ವತ್ಥನಾರಾಯಣ

File Image

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಬೆಂಗಳೂರು: ತಕ್ಷಣವೇ ಕೋಲಾರ ಜಿಲ್ಲೆಯಲ್ಲಿ 300 ಆಕ್ಸಿಜನ್‌ ಬೆಡ್‌ಗಳು, 150 ಐಸಿಯು ಬೆಡ್‌ಗಳು ಹಾಗೂ 40 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಿಂದಲೇ ಮಂಗಳವಾರ ವರ್ಚುಯಲ್‌ ಸಭೆಯ ಮೂಲಕ ಕೋಲಾರ ಜಿಲ್ಲೆಯ  ಚುನಾಯಿತ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು, ಎಲ್ಲ ತಾಲೂಕುಗಳ ಆರೋಗ್ಯ ಮತ್ತಿತರೆ ಇಲಾಖೆಗಳ ಅಧಿಕಾರಿಗಳ ಜತೆ ಕೋವಿಡ್‌ ಪರಿಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಮಯ ಪೋಲು ಮಾಡದೇ ತಕ್ಷಣದಿಂದಲೇ ಎಲ್ಲ ಕೆಲಸಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ಮಾಡಲಾಗುವುದು ಎಂದರು.

ಸದ್ಯಕ್ಕೆ ಕೋಲಾರ ಜಿಲ್ಲೆಯಲ್ಲಿ 700 ಕೋವಿಡ್‌ ಬೆಡ್‌ಗಳಿದ್ದು, ಈ ಪೈಕಿ 190 ಐಸಿಯು ಮತ್ತು ವೆಂಟಿಲೇಟರ್‌ ಬೆಡ್‌ಗಳಿವೆ. ಜಿಲ್ಲಾ ಕೇಂದ್ರದಲ್ಲಿರುವ ಎಸ್‌ಎನ್ನಾರ್‌ ಆಸ್ಪತ್ರೆಯಲ್ಲಿ ಇನ್ನು 10 ದಿನಗಳ ಒಳಗಾಗಿ ಪ್ರತಿ ನಿಮಿಷಕ್ಕೆ ಸಾವಿರ ಕೆಎಲ್ ಆಮ್ಲಜನಕ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. 6 ಕೆಎಲ್‌ ಆಕ್ಸಿಜನ್‌ ಸಂಗ್ರಹದ ವ್ಯವಸ್ಥೆಯ ಕೆಲಸ ಪ್ರಗತಿಯಲ್ಲಿದೆ. ಇನ್ನೆರಡು ದಿನದಲ್ಲಿ ಸಿವಿಲ್‌ ಕೆಲಸ ಮುಗಿಯಲಿದೆ ಎಂದು ಡಿಸಿಎಂ ತಿಳಿಸಿದರು.

ಜಿಲ್ಲಾ ಕೇಂದ್ರವೂ ಸೇರಿ ಯಾವುದೇ ತಾಲೂಕು ಕೇಂದ್ರದಲ್ಲೂ ಆಮ್ಲಜನಕದ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದೇ ರೀತಿ ರೆಮಿಡಿಸ್ವೀರ್‌ ಸಾಕಷ್ಟು ದಾಸ್ತಾನು ಇದ್ದು, ಅಗತ್ಯವಿರುವ ಯಾವ ಔಷಧವೂ ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.

ಎಲ್ಲ ಬೆಡ್‌ಗಳಿಗೂ ಆಕ್ಸಿಜನ್‌ ಸಂಪರ್ಕ:
ಇದಕ್ಕೂ ಮೊದಲು ಪರಿಶೀಲನಾ ಸಭೆಯಲ್ಲಿ ಮಾತನಾಡಿ ಡಿಸಿಎಂ ಅಶ್ವತ್ಥನಾರಾಯಣ ಅವರು; “ಕೋಲಾರ ಜಿಲ್ಲೆಯಲ್ಲಿರುವ 750 ಆಕ್ಸಿಜನ್‌ ಬೆಡ್‌ಗಳು ಹಾಗೂ 190 ಐಸಿಯು ವೆಂಟಿಲೇಟರ್‌ಗಳ ನಿರ್ವಹಣೆಗೆ ನುರಿತ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು. ಆದಷ್ಟು ಬೇಗ ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲ ಬೆಡ್‌ಗಳನ್ನು ಆಕ್ಸಿಜನ್‌ ಬೆಡ್‌ಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಹತ್ತಿರದ ದೇವರಾಜ ಅರಸು ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಯಲ್ಲೂ ಆಕ್ಸಿಜನ್‌ ಬೆಡ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಾಕಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಡಿಸಿಎಂ ಸಭೆಗೆ ಮಾಹಿತಿ ನೀಡಿದರು.

ನಿನ್ನೆ (ಸೋಮವಾರ) ಒಂದೇ ದಿನ ಜಿಲ್ಲೆಯಲ್ಲಿ 622 ಸೋಂಕಿತರು ಪತ್ತೆಯಾಗಿದ್ದಾರೆ. ಈಗ ಜಿಲ್ಲೆಯಲ್ಲಿ 3,600 ಜನ ಸೋಂಕಿತರಿದ್ದಾರೆ. ಇವರಲ್ಲಿ ಶೇ.10ರಷ್ಟು ಅಂದರೆ, 360 ಜನರಿಗೆ ಮಾತ್ರ ಆಕ್ಷಿಜನ್‌ ಅವಶ್ಯಕತೆ ಇರುತ್ತದೆ. ಉಳಿದವರು ಮನೆಯಲ್ಲೇ ಕ್ವಾರಂಟೈನ್‌ ಆಗಿ ಚಿಕಿತ್ಸೆ ಪಡೆಯಬಹುದು. ಜಿಲ್ಲಾಡಳಿತ ಎಲ್ಲ ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದು, ಇನ್ನು ವೇಗವಾಗಿ ಜನರಿಗೆ ಸ್ಪಂದಿಸುವಂತೆ ಡಿಸಿಗೆ ನಿರ್ದೇಶನ ನೀಡಿದರು ಉಪ ಮುಖ್ಯಮಂತ್ರಿ.

24 ಗಂಟೆಯೊಳಗೆ ವರದಿ
ರೋಗ ಲಕ್ಷಣಗಳುಳ್ಳ ಪ್ರತಿಯೊಬ್ಬರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದ ಡಿಸಿಎಂ, ಪರೀಕ್ಷೆ ನಂತರ 24 ಗಂಟೆಗಳ ಒಳಗಾಗಿ ಫಲಿತಾಂಶ ಕೊಡಬೇಕು. ಒಂದು ವೇಳೆ ಪಾಸಿಟೀವ್‌ ಬಂದಿದ್ದರೆ ಕೂಡಲೇ ಚಿಕಿತ್ಸೆ ಆರಂಭಿಸಬೇಕು. ಹೋಮ್‌ ಐಸೋಲೇಶನ್‌ ಆಗಿರುವವರಿಗೆ ಮೆಡಿಕಲ್‌ ಕಿಟ್‌ ಕೊಡಬೇಕು. ಕಾಲಕಾಲಕ್ಕೆ ಅವರನ್ನು ಫಾಲೋಅಪ್‌ ಮಾಡುತ್ತಿರಬೇಕು. ಸೋಂಕಿನ ಪ್ರಮಾಣವನ್ನು ಪರಿಶೀಲಿಸುತ್ತಲೇ ಇರಬೇಕು ಎಂದು ಡಾ.ಅಶ್ವತ್ಥನಾರಾಯಣ ಅವರು ವೈದ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟರು.

ಆಂಬುಲೆನ್ಸ್‌ ಚಾಲಕರಿಗೆ ತಕ್ಷಣವೇ ವೇತನ:
ಆಂಬ್ಯುಲೆನ್ಸ್‌ ಚಾಲಕರಿಗೆ ಎರಡು ತಿಂಗಳಿನಿಂದ ವೇತನ ಆಗಿಲ್ಲ ಎಂದು ಕೆಜಿಎಫ್‌ ಶಾಸಕಿ ರೂಪಾ ಶಶಿಧರ್‌ ಸಭೆಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಡಿಸಿಎಂ, ತಕ್ಷಣವೇ ಅವರ ವೇತನದಲ್ಲಿ ಒಂದು ಪೈಸೆಯೂ ಬಾಕಿ ಇರದಂತೆ ಪಾವತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಆರ್.‌ಸೆಲ್ವಮಣಿ ಅವರು, ಕೂಡಲೇ ಪರಿಶೀಲಿಸಿ ವೇತನ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ವೈದ್ಯಕೀಯ ಉತ್ಪನ್ನಗಳಿಗೆ ಕೊರತೆ ಆಗಬಾರದು:
ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಬಳಕೆಯ ವಸ್ತುಗಳ ಕೊರತೆಯಿಂದ ವೈದ್ಯರು, ಸಿಬ್ಬಂದಿ ಸೋಂಕಿಗೆ ಸುತ್ತಾಗುತ್ತಿದ್ದಾರೆ ಎಂದು ಶಾಸಕರಾದ ನಂಜೇಗೌಡ, ಎಸ್.ಎನ್.‌ನಾರಾಯಣಸ್ವಾಮಿ, ರೂಪಾ ಶಶಿಧರ್‌ ಪ್ರಸ್ತಾಪ ಮಾಡಿದರು. ಇದಕ್ಕೂ ಸ್ಪಂದಿಸಿದ ಡಿಸಿಎಂ; ವೈದ್ಯರು ಹಾಗೂ ಸಿಬ್ಬಂದಿ ಬಳಸುವ ಪಿಪಿಎ ಕಿಟ್‌, ಮಾಸ್ಕ್‌, ಸ್ಯಾನಿಟೈಸರ್‌, ಗ್ಲೌಸ್‌ ಸೇರಿ ಯಾವ ವಸ್ತುವಿಗೂ ಕೊರತೆ ಆಗಬಾರದು. ಅವೆಲ್ಲವನ್ನು ಎಷ್ಟು ಬೇಕಾದರೂ ಪೂರೈಸಲು ಸರಕಾರ ಸಿದ್ದವಿದೆ. ಒಂದು ವೇಳೆ ಕೊರತೆ ಬಿದ್ದರೆ ಜಿಲ್ಲಾಧಿಕಾರಿಗೆ ಖರೀದಿ ಮಾಡಲು ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯ ಆರಂಭಕ್ಕೆ ಮುನ್ನ ಜಿಲ್ಲಾಧಿಕಾರಿ ಆರ್.‌ಸೆಲ್ವಮಣಿ ಜಿಲ್ಲೆಯಲ್ಲಿ ಕೋವಿಡ್‌ ನಿರ್ವಹಣೆಗೆ ಕೈಗೊಂಡಿರುವ ಎಲ್ಲ ಕ್ರಮಗಳ ಮಾಹಿತಿಯನ್ನು ನೀಡಿದರು. ಜಿಲ್ಲೆಯಲ್ಲಿ ದಿನಕ್ಕೆ 6,000 ಕೆಎಲ್‌ ಆಮ್ಲಜನಕ ಬಳಕೆಯಾಗುತ್ತಿದ್ದು, ಇನ್ನೂ 10,000 ಕೆಎಲ್‌ ಆಮ್ಲಜನಕ ಬೇಕಿದೆ. ಜಿಲ್ಲಾಸ್ಪತ್ರೆಯಲ್ಲಿ ದಿನಕ್ಕೆ 10,000 ಕೆಎಲ್‌ ಆಕ್ಸಿಜನ್‌ ಪೂರೈಸುವ ಕಾಮಗಾರಿ ನಡೆಯುತ್ತಿದೆ. ಇನ್ನೆರಡು ದಿನದಲ್ಲಿ ಆ ಕೆಲಸ ಮುಗಿಯುತ್ತದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಲಸಿಕೆಗೆ ಬಹಳ ಡಿಮಾಂಡ್‌ ಇದ್ದು, ಸೋಮವಾರದ ಹೊತ್ತಿಗೆ ನಮ್ಮಲ್ಲಿದ್ದ ಲಸಿಕೆಯ ಸ್ಟಾಕ್‌ ಖಾಲಿಯಾಯಿತು. ಹೊರಗಡೆಯಿಂದ 10,000 ವೈಲ್‌ ತರಿಸಲಾಗಿದೆ. ದಿನಕ್ಕೆ 11ರಿಂದ 12,000 ವೈಲ್‌ಗಳಷ್ಟು ಲಸಿಕೆ ಜಿಲ್ಲೆಗೆ ಬೇಕಿವೆ ಎಂಬ ಅಂಶವನ್ನು ಡಿಸಿಎಂ ಅವರ ಗಮನಕ್ಕೆ ತಂದರು.

ಇದಕ್ಕೂ ಕೂಡಲೇ ಸ್ಪಂದಿಸಿದ ಡಿಸಿಎಂ ಅಶ್ವತ್ಥನಾರಾಯಣ, ಕೊರತೆ ಇರುವ ಆಮ್ಲಜನಕವನ್ನು ತತ್‌ಕ್ಷಣವೇ ಒದಗಿಸಲಾಗುವುದು ಹಾಗೂ ಅಗತ್ಯ ಪ್ರಮಾಣ ಲಸಿಕೆಯನ್ನೂ ನೀಡಲಾಗುವುದು ಎಂದರು.

ಉಳಿದಂತೆ ಬೆಡ್‌ಗಳು ಸಿಗದಿರುವುದು, ಆಮ್ಲಜನಕದ ಪೂರೈಕೆ ಮತ್ತಿತರೆ ಅಂಶಗಳ ಬಗ್ಗೆ ಸಂಸದ ಮುನಿಸ್ವಾಮಿ, ಶಾಸಕರಾದ ಎಸ್.ರಮೇಶ್‌ ಕುಮಾರ್‌, ಎಸ್.ಎನ್.‌ನಾರಾಯಣಸ್ವಾಮಿ, ರೂಪಾ ಶಶಿಧರ್‌, ಕೆ.ಶ್ರೀನಿವಾಸ ಗೌಡ, ಕೆ.ವೈ.ನಂಜೇಗೌಡ,‌ ನಾಗೇಶ್‌, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮದ್‌ ಮುಂತಾದವರು ಹಲವಾರು ವಿಷಯಗಳನ್ನು ಪ್ರಸ್ತಾಪ ಮಾಡಿದರು. ಕೋಲಾರ & ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿಗಳು ಸಭೆಯಲ್ಲಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ ಅವರೂ ಸಭೆಯಲ್ಲಿ ಹಾಜರಿದ್ದರು.

ವರದಿ: ಡಿ.ಎಲ್. ಹರೀಶ್, ಬೆಂಗಳೂರು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: BangaloreCovidKannada News WebsiteKannada_NewsKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaOxygenState Newsಆಕ್ಸಿಜನ್ಕೋವಿಡ್ಬೆಂಗಳೂರು
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪ್ರತಿ ತಾಲೂಕು ಕೇಂದ್ರಗಳಲ್ಲೂ ಆಕ್ಸಿಜನ್ ಉತ್ಪಾದನಾ ಪ್ಲಾಂಟ್: ಸಂಸದ ರಾಘವೇಂದ್ರ

Next Post

ಕೋವಿಡ್ ಕರಾಳತೆಗೆ ಕಿಂಚಿತ್ತೂ ಅಂಜದೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಸಮುದಾಯ ತಲ್ಲೀನ..

kalpa News

kalpa News

Next Post
ಕೋವಿಡ್ ಕರಾಳತೆಗೆ ಕಿಂಚಿತ್ತೂ ಅಂಜದೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಸಮುದಾಯ ತಲ್ಲೀನ..

ಕೋವಿಡ್ ಕರಾಳತೆಗೆ ಕಿಂಚಿತ್ತೂ ಅಂಜದೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಸಮುದಾಯ ತಲ್ಲೀನ..

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL