ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ನವದೆಹಲಿಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೇಂದ್ರ ಕಛೇರಿ ಇವರ ನೆರವಿನಿಂದ ರಾಜ್ಯದಲ್ಲಿನ ಆಕ್ಸಿಜನ್ ಕೊರತೆಯನ್ನು ತಗ್ಗಿಸುವ ಸಲುವಾಗಿ ಬಹರೆನ್ ರಾಷ್ಟ್ರದ ಬಿಡಿಎಫ್‌ಆರ್‌ಎಮ್‌ಎಸ್ ಆಸ್ಪತ್ರೆಯಿಂದ 40 ಮೆಟ್ರಿಕ್ ಟನ್‌ನ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ಸ್‌ಗಳನ್ನು ಭಾರತದ ನೌಕಾಪಡೆಯ ಐಎನ್‌ಎಸ್ ತಲವಾರ್ ಮೂಲಕ ಇಂದು ಮಂಗಳೂರು ಬಂದರಿನಲ್ಲಿ ಸ್ವೀಕರಿಸಲಾಯಿತು.
ಕೋವಿಡ್ -19 ತುರ್ತು ಸಂದರ್ಭದಲ್ಲಿ ಬಳಸುವ ನಿಟ್ಟಿನಲ್ಲಿ ರೆಡ್‌ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು ಸ್ವೀಕರಿಸಿದ 40 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್‌ನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಲಾಯಿತು. ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಭಾರತೀಯ ತೈಲ ನಿಗಮದ ಸಹಾಯದಿಂದ ಒದಗಿಸಲಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post