ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಇಂದು ಮೇಕೆದಾಟು ಪಾದಯಾತ್ರೆ ಅಂಗವಾಗಿ 1000 ಅಡಿ ಉದ್ದದ ಮೇಕೆದಾಟು ಬಾವುಟ ವನ್ನು ಹಿಡಿದು ಪಾದಯಾತ್ರೆ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಬಿ. ವಿ. ಶ್ರೀನಿವಾಸ್ , ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಯಾದವ್, ರಾಷ್ಟ್ರೀಯ ಕಾರ್ಯದರ್ಶಿ ಸುರುಬಿ, ವಿದ್ಯಾ ಬಾಲಕೃಷ್ಣ , ರಾಜ್ಯ ಯುವ ಕಾಂಗ್ರೆಸ್ ನ ನಲಪಾಡ್, ಮಂಜುನಾಥ್ ಗೌಡ, ಭವ್ಯ, ಚೇತನ್, ಶ್ರೀಜಿತ್ ಹಾಗೂ ಶಿವಮೊಗ್ಗ SC ಸೆಲ್ ನ ಅಧ್ಯಕ್ಷರಾದ ಪಲ್ಲವಿ ಯುವ ಮುಖಂಡ ಮಧುಸೂದನ್, ಅಬ್ದುಲ್ ಸತ್ತಾರ್ ಹಾಗೂ ಸಾವಿರರು ಯುವಕರು ಪಾಲ್ಗೊಂಡು ಇಂದಿನ ಪಾದಯಾತ್ರೆ ಯಶಸ್ವಿಗೊಳಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post