ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಬನಶಂಕರಿ 6 ಸ್ಟೇಜ್‌ನಲ್ಲಿ ಚಿರತೆ ಕಾಣಿಸಿಕೊಂಡ ಪರಿಣಾಮ ಸಿಲಿಕಾನ್ ಸಿಟಿ ಜನತೆಗೆ ಈಗ ಚಿರತೆಯ ಭಯ ಎದುರಾಗಿದೆ.
ಈ ಬಗ್ಗೆ ವೆಲ್ ಫೇರ್ ಅಸೋಸಿಯೇಷನ್ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದು, ಒಬ್ಬೊಬ್ಬರೇ ಓಡಾಡಬೇಡಿ, ಅದರಲ್ಲೂ ರಾತ್ರಿಯಾದರೆ ಮನೆಯಿಂದ ಹೊರಬರಬೇಡಿ ಎಂದು ಎಚ್ಚರಿಕೆ ನೀಡಿದೆ.

Also read: ಬಾಕಿಯಿರುವ ಫಲಾನುಭವಿಗಳ ಅರ್ಜಿ ಪ್ರಸ್ತಾವನೆಗಳನ್ನು ತಕ್ಷಣವೇ ವಿಲೇವಾರಿ ಮಾಡಿ: ಡಿಸಿ ಗುರುದತ್ತ ಹೆಗಡೆ
ಅರಣ್ಯ ಪ್ರದೇಶಕ್ಕೆ ಈ ಸ್ಥಳ ಹತ್ತಿರವಾಗಿರುವುದರಿಂದ ಓಡಾಟ ಇದೆ. ಹಾಗೂ ಇದು ಚಿರತೆಗಳ ಸಂತಾನೋತ್ಪತಿ ಸಮಯವಾಗಿರುವುದರಿಂದ ಅಲ್ಲಲ್ಲಿ ಕಾಣುತ್ತಿರುತ್ತದೆ. ಸದ್ಯ ಇಲ್ಲಿ ಬೋನಿನ ವ್ಯವಸ್ಥೆ ಮಾಡಲಾಗಿದೆ. ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.












Discussion about this post