ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹೊಸ ಪ್ರತಿಭೆಗಳ ಒಗ್ಗಟ್ಟಿನ ಶ್ರಮವೇ ಕಟಿಂಗ್ ಶಾಪ್ ಸಿನಿಮಾ. Cutting Shop Movie ಆರಂಭದಲ್ಲಿ ಮುಖ ಪರಿಚಯ ಇಲ್ಲದವರ ಪಾತ್ರಗಳು ಪ್ರೇಕ್ಷಕರ ಮನ ಪಟಲದಲ್ಲಿ ದಾಖಲಾಗಲು ಸಮಯ ತಗೆದುಕೊಳ್ಳುತ್ತದೆ. ಸಿನಿಮಾದವರಿಗೆ ಹತ್ತಿರವಾದಷ್ಟು ಸಾಮೂಹಿಕ ಪ್ರೇಕ್ಷಕರನ್ನು ಮುಟ್ಟಲು ಚಿತ್ರ ಪೂರ್ತಿ ಮುಗಿಯುವ ತನಕ ಕಾಯಬೇಕಾಗುತ್ತದೆ.
ಸಿನಿಮಾದ ನಾಯಕ ನಟ ಪ್ರವೀಣ್ ಅಭಿನಯ ಮನೋಜ್ಞವಾಗಿ ಮೂಡಿ ಬಂದಿದೆ. ತನ್ನ ಎಡಿಟಿಂಗ್ ಪ್ರವೃತ್ತಿ ಹೇಗೆ ಆರಂಭವಾಯ್ತು ಎನ್ನುವುದನ್ನ ವಿಬಿನ್ನವಾದ ನಟನ ಕೌಶಲ್ಯದಿಂದ ಪ್ರಸ್ತುತಪಡಿಸಿದ್ದಾರೆ.
ಹೊಸಬರ ತಂಡವೊಂದು ನಿರೀಕ್ಷೆಗೂ ಮೀರಿ ಪ್ರಬುದ್ಧವಾಗಿ ಕಥೆಯನ್ನು ಹೆಣೆದಿದ್ದಾರೆ. ಸಿನಿಮಾಗೆ ಬೇಕಿರುವ ಪಾತ್ರಗಳಿಗೆ ಜೀವ ತುಂಬುವಲ್ಲಿ ಕಲಾವಿದರು ಹಾಗೂ ಕಥೆಗೆ ಬೇಕಾದ ರೂಪ ನೀಡುವಲ್ಲಿ ಮೊದಲ ಸಿನಿಮಾವೆಂಬ ತಡವರಿಕೆಗಳಿಲ್ಲದೇ ಕೊಂಡ್ಯೊದಿದ್ದಾರೆ ನಿರ್ದೇಶಕ ಪವನ್ ಭಟ್ . ಹೊಸ ನಿರ್ದೇಶಕ ಎಂದು ಹೇಳಲು ಆಚ್ಚರಿಯಾಗುವಾಷ್ಟು ಚಿತ್ರಕ್ಕೆ ಅವಶ್ಯವಿರುವ ಹಲವು ಕೌಶಲ್ಯಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟಾರೆಯಾಗಿ ಸಿನಿಮಾ ಇಷ್ಟು ಬೇಗ ಮುಗಿಯಿತಲ್ಲ ಎಂಬ ಭಾವವನ್ನು ಸೃಷ್ಟಿಸುತ್ತದೆ. ಕೊಲೆ ಸೂಲಿಗೆ ರಕ್ತಗಳಿಲ್ಲದೆಯೂ ಸಿನಿಮಾ ಮಾಡಬಹುದು ಎಂಬುದನ್ನ ತೋರಿಸಿಕೊಟ್ಟ ನಿರ್ದೇಶಕರಿಗೆ ಸಿನಿ ಪ್ರೇಕ್ಷಕರ ಕಡೆಯಿಂದ ಒಂದು ಸಲಾಂ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post