ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೋಕಸಭಾ ಚುನಾವಣೆಗೆ #Lok Sabha Election ರಾಜ್ಯದಲ್ಲಿ ಮತದಾನ ಆರಂಭವಾಗಿದ್ದು, 14 ಕ್ಷೇತ್ರಗಳಲ್ಲಿ ಬಿರುಸಿನಿಂದ ಜನರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಬೆಂಗಳೂರಿನ ಜೆಪಿ ನಗರ ಜಂಬೂಸವಾರಿ ದಿಣ್ಣೆ ಪ್ರದೇಶದಲ್ಲಿ ಮತದಾನಕ್ಕಾಗಿ ಆಗಮಿಸಿದ್ದ ಮಹಿಳೆಯೊಬ್ಬರಿಗೆ ಹೃದಯಾಘಾತ ಸಂಭವಿಸಿದ್ದು, ಸ್ಥಳದಲ್ಲೇ ಇದ್ದ ವೈದ್ಯರೊಬ್ಬರಿಂದ ಆಕೆಯ ಪ್ರಾಣ ಉಳಿದಿದೆ.

Also read: ಬೆಂಗಳೂರು ಗ್ರಾಮಾಂತರ | 11 ಗಂಟೆವೆರಗೂ ಚಲಾವಣೆಯ ಮತ ಪ್ರಮಾಣ ಎಷ್ಟು?
ಮಹಿಳೆಗೆ ಹೃದಯಾಘಾತ ಸಂಭವಿಸಿದೆ ಎಂದು ಅರಿತು ಸ್ಥಳದಲ್ಲೇ ಸಿಪಿಆರ್ ಮಾಡಿ ಆಕೆಯ ಜೀವ ಉಳಿಸಿದ್ದಾರೆ. ಮಹಿಳೆಗೆ ಹೆಚ್ಚಿನ ಚಿಕಿತ್ಸೆ ಅವಶ್ಯತೆಯಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ತತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post