ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದಿವಂಗತ ಪುನೀತ್ ರಾಜ್‌ಕುಮಾರ್ Puneeth Rajkumar ಅಭಿನಯದ ಬಹುನಿರೀಕ್ಷಿತ ಜೇಮ್ಸ್ James ಚಿತ್ರದ ಸಾಂಗ್ ಸಲಾಂ ಸೋಲ್ಜರ್ ಲಿರಿಕಲ್ ವೀಡಿಯೋ ಸಾಂಗನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.
Kannada : https://t.co/0UGchIDmzH
Tamil : https://t.co/ymZvs42HRK
Telugu : https://t.co/e5Z59gCCx9
Malayalam: https://t.co/34BhRL22QO
Hindi : https://t.co/xMPTFDJ4Lv— Kichcha Sudeepa (@KicchaSudeep) March 11, 2022
ನಮ್ಮ ಪ್ರೀತಿಯ ಅಪ್ಪು Appu ಅಭಿನಯದ ಜೇಮ್ಸ್ ಚಿತ್ರದ ಸಲಾಂ ಸೋಲ್ಜಾರ್ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡುವ ಮೂಲಕ ಅವರನ್ನು ಗೌರವಿಸಲಾಗುತ್ತಿದೆ. ಇಡೀ ಚಿತ್ರ ತಂಡಕ್ಕೆ ಹಾಗೂ ಅವರ ಕುಟುಂಬಕ್ಕೆ ನನ್ನ ಶುಭಾಶಯಗಳು. ಅವರ ಎಲ್ಲಾ ಅಭಿಮಾನಿಗಳಿಗೆ ಪ್ರೀತಿಯ ಅಪ್ಪುಗೆಗಳು… ಬೆಳ್ಳಿಪರದೆಯ ಮೇಲೆ ಅವರ ಕೊಡುಗೆ ಮತ್ತು ಉಪಸ್ಥಿತಿಯನ್ನು ಗೌರವಿಸಲು ಮತ್ತು ಆಚರಿಸಲು ಇದು ಸಮಯ. ರತ್ನವನ್ನು ಯಾವುದೂ ಬದಲಾಯಿಸಲು ಸಾಧ್ಯವಿಲ್ಲ. ಜೇಮ್ಸ್‌ನ ಪ್ರತಿ ಕ್ಷಣವನ್ನು ಅನ್ನು ಆನಂದಿಸಿ ಎಂದು ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಜೇಮ್ಸ್ ಚಿತ್ರ ಮಾರ್ಚ್ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಪ್ರಸ್ತುತ ಚಿತ್ರದ ಎರಡನೇ ವಿಡಿಯೋ ಸಾಂಗ್ ಪಿಆರ್‌ಕೆ PRK ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಲಭ್ಯವಿದೆ.
ಪವರ್‌ಸ್ಟಾರ್ ಅಭಿನಯದ ಕೊನೆಯ ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಪುನೀತ್ ಅವರ ಅಸಂಖ್ಯಾತ ಅಭಿಮಾನಿಗಳು ಕಾಯುತ್ತಿದ್ದು, ಜೇಮ್ಸ್ ಚಿತ್ರದಲ್ಲಿ ಪುನೀತ್ ಪಾತ್ರಕ್ಕೆ ಶಿವರಾಜ್‌ಕುಮಾಋ ಧ್ವನಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post