ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಬಹು ನಿರೀಕ್ಷಿತ ಕಬ್ಜ ಸಿನಿಮಾ ಚಿತ್ರೀಕರಣ ವೇಳೆ ಕಬ್ಬಿಣದ ರಾಡ್ ಬಡಿದು ನಟ ಉಪೇಂದ್ರ ತಲೆಗೆ ಪೆಟ್ಟು ಬಿದ್ದಿರುವ ಘಟನೆ ನಡೆದಿದೆ.
ಕಬ್ಬಿಣದ ರಾಡ್‌ನಿಂದ ಹೊಡೆಯುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು, ಈ ಸಂದರ್ಭದಲ್ಲಿ ಫೈಟರ್ ಹಿಂದಿನಿಂದ ಚೂಪಾದ ರಾಡ್‌ನಿಂದ ಬೀಸಿದಾಗ ತಪ್ಪಿಸಿಕೊಳ್ಳುವುದು ಮಿಸ್ ಆದ ಪರಿಣಾಮ ಉಪೇಂದ್ರ ಅವರ ತಲೆಗೆ ತಾಕಿದ್ದು, ಅದೃಷ್ಟವಶಾತ್ ಗಂಭೀರ ಗಾಯವಾಗಿಲ್ಲ ಎನ್ನಲಾಗಿದೆ.
ಕೆಲ ಸಮಯ ಸುಧಾರಿಸಿಕೊಂಡ ನಂತರ ಉಪೇಂದ್ರ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡರು ಎಂದು ವರದಿಯಾಗಿದೆ.
ಆರ್. ಚಂದ್ರು ನಿರ್ದೇಶನದ ಕಬ್ಜ ಚಿತ್ರ ನಿನ್ನೆ ರಾತ್ರಿ ಮಿನರ್ವ ಮಿಲ್‌ನಲ್ಲಿ ನಡೆಯುತ್ತಿ ವೇಳೆ ಈ ಆಕಸ್ಮಿಕ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















