ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2021-22ರ ಚುನಾವಣೆಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್. ರಘುನಾಥ್ ರವರು ಇಂದು ಬೆಂಗಳೂರಿನ ಕೆ.ಆರ್. ರಸ್ತೆಯ ಉಮಾಮಹೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗಾಯತ್ರಿ ಭವನದಲ್ಲಿರುವ ಎಕೆಬಿಎಂಎಸ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ KSSIDC ಯ ಉಪಾಧ್ಯಕ್ಷ ಎಸ್. ದತ್ತಾತ್ರಿ ಶುಭ ಹಾರೈಸಿದರು. ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಕ್ತಾರ ವೃಕ್ಷಂ ಸುರೇಶ್, ಖಜಾಂಚಿ ಪ್ರಕಾಶ್ ಅಯ್ಯಂಗಾರ್, ಸಿರಿನಾಡು ಮಹಾಸಭಾದ ಅಧ್ಯಕ್ಷ ಸುದರ್ಶನಂ, ಬಡಗನಾಡು ಮಹಾಸಭಾದ ಅಧ್ಯಕ್ಷ ನಾಗೇಶ್, ಯಾಜ್ಞವೆಲ್ಕ ವತ್ಸಲ ನಾಗೇಶ್, ಮುಲಕನಾಡು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೈ. ಎನ್. ಶರ್ಮ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post