No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Sunday, March 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕೃಷಿ ತ್ಯಾಜ್ಯದಿಂದ ನವೀನ ಪ್ಯಾಕೇಜಿಂಗ್ ಪರಿಹಾರ ಅಭಿವೃದ್ಧಿಪಡಿಸಲು ಅಮೆಜಾನ್ – ಐಐಟಿ ರೂರ್ಕಿ ಸಹಭಾಗಿತ್ವ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 5, 2026
in Special Articles
0
ಕೃಷಿ ತ್ಯಾಜ್ಯದಿಂದ ನವೀನ ಪ್ಯಾಕೇಜಿಂಗ್ ಪರಿಹಾರ ಅಭಿವೃದ್ಧಿಪಡಿಸಲು ಅಮೆಜಾನ್ – ಐಐಟಿ ರೂರ್ಕಿ ಸಹಭಾಗಿತ್ವ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಮರದ ತಿರುಳಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಬೆಳೆಗಳ ಉಳಿಕೆಯನ್ನು ಸುಡುವ ಸವಾಲುಗಳನ್ನು ಎದುರಿಸಲು, ಕೃಷಿ ತ್ಯಾಜ್ಯದಿಂದ ಗಟ್ಟಿಮುಟ್ಟಾದ, ಬಾಳಿಕೆ ಬರುವ ಪೇಪರ್ ಮೇಲರ್‌ಗಳನ್ನು ಈ ಸಂಶೋಧನಾ ಸಹಭಾಗಿತ್ವದ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ.

ಕೃಷಿ ತ್ಯಾಜ್ಯದಿಂದ ನವೀನ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) #Indian Institute of Technology ರೂರ್ಕಿ #Roorkee ಜೊತೆಗೆ ಸಹಭಾಗಿತ್ವ ಮಾಡಿಕೊಂಡಿರುವುದಾಗಿ ಅಮೆಜಾನ್ ಇಂಡಿಯಾ #Amazon India ಇಂದು ಘೋಷಿಸಿದೆ.

ಈ ಯೋಜನೆಯು ಮರರಹಿತ ಕಾಗದ ತಂತ್ರಜ್ಞಾನವನ್ನು ರೂಪಿಸುವ ಗುರಿಯನ್ನು ಹೊಂದಿದ್ದು, ಇದು ಕೃಷಿ ತ್ಯಾಜ್ಯವನ್ನು ಸುಡುವುದನ್ನು ತಪ್ಪಿಸುವುದಲ್ಲದೆ, ಹೊಸ ಮರದ ತಿರುಳಿನ ಅಗತ್ಯತೆಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಗುರವಾದರೂ ಬಲಿಷ್ಠವಾಗಿರುವ ಈ ಪ್ಯಾಕೇಜಿಂಗ್ ಸಾಮಾಗ್ರಿಗಳು ಸಾಂಪ್ರದಾಯಿಕ ಮರದ ತಿರುಳಿನ ಕಾಗದ ಅಥವಾ ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯವಾಗಿ ಬಳಕೆಯಾಗಲಿದ್ದು, ಮರುಬಳಕೆ ಮಾಡಬಹುದಾದ ಮತ್ತು ಮನೆಯಲ್ಲೇ ಗೊಬ್ಬರವಾಗಬಲ್ಲ ಆಯ್ಕೆಗಳನ್ನು ಒದಗಿಸುತ್ತವೆ.
ಈ ಸಂಶೋಧನೆಯು ಗೋಧಿ ಹುಲ್ಲು ಮತ್ತು ಕಬ್ಬಿನ ಸಿಪ್ಪೆಯಂತಹ ಬೆಳೆಗಳ ಉಳಿಕೆಗಳನ್ನು ಉತ್ತಮ ಗುಣಮಟ್ಟದ ತಿರುಳನ್ನಾಗಿ ಪರಿವರ್ತಿಸುವತ್ತ ಗಮನ ಹರಿಸಲಿದೆ. ಈ ಮೂಲಕ ತಯಾರಿಸಿದ ಪೇಪರ್ ಮೇಲರ್‌ ಗಳು ಸಾಮಾನ್ಯ ಪ್ಯಾಕೇಜಿಂಗ್‌ ಗೆ ಸಮನಾದ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದು ಕೃಷಿ ತ್ಯಾಜ್ಯವನ್ನು ಮೌಲ್ಯಯುತ ಪ್ಯಾಕೇಜಿಂಗ್ ವಸ್ತುವನ್ನಾಗಿ ಮಾಡುವ ಮೂಲಕ ಭಾರತದಲ್ಲಿ ಬೆಳೆಗಳ ಕಳೆಯನ್ನು ಸುಡುವ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಆಮದು ಮಾಡಿಕೊಳ್ಳುವ ಮರದ ತಿರುಳಿನ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ ಮತ್ತು ಕೃಷಿ ತ್ಯಾಜ್ಯಕ್ಕೆ ಮಾರುಕಟ್ಟೆ ಒದಗಿಸುವ ಮೂಲಕ ರೈತರಿಗೆ ಹೆಚ್ಚುವರಿ ಆದಾಯವನ್ನು ತಂದುಕೊಡಲಿದೆ.

ಐಐಟಿ ರೂರ್ಕಿಯ ಪೇಪರ್ ಮತ್ತು ಪ್ಯಾಕೇಜಿಂಗ್ ಟೆಕ್ನಾಲಜಿ ವಿಭಾಗದೊಂದಿಗಿನ ಈ ಸಹಭಾಗಿತ್ವವು, ಮುಂದಿನ 15 ತಿಂಗಳ ಅವಧಿಯಲ್ಲಿ ಪ್ರಯೋಗಾಲಯ ಮಟ್ಟದ ಅಭಿವೃದ್ಧಿ ಮತ್ತು ಪರೀಕ್ಷೆಯೊಂದಿಗೆ ಪ್ರಾರಂಭವಾಗಲಿದೆ. ಈ ಪರೀಕ್ಷೆಗಳು ಯಶಸ್ವಿಯಾದಲ್ಲಿ, ಮುಂದಿನ ವರ್ಷದ ಮಧ್ಯಭಾಗ ಅಥವಾ ಅಂತ್ಯದ ವೇಳೆಗೆ ಕೈಗಾರಿಕಾ ಮಟ್ಟದ ಪ್ರಯೋಗಗಳು, ಪ್ರಕ್ರಿಯೆ ದೃಢೀಕರಣ ಮತ್ತು ವಾಣಿಜ್ಯ ಉತ್ಪಾದನೆಗೆ ಅಮೆಜಾನ್ ಮುಂದಾಗಲಿದೆ.
ಈ ಕುರಿತು ಅಮೆಜಾನ್ ಇಂಡಿಯಾದ ಆಪರೇಷನ್ಸ್ ವಿಭಾಗದ ಉಪಾಧ್ಯಕ್ಷರಾದ ಅಭಿನವ್ ಸಿಂಗ್ ಮಾತನಾಡಿ , “ಅಮೆಜಾನ್‌ ನಲ್ಲಿ ನಾವು ಭಾರತದ ಅತ್ಯಂತ ವೇಗದ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಕಾರ್ಯಾಚರಣಾ ಜಾಲವನ್ನು ನಿರ್ಮಿಸುತ್ತಿದ್ದೇವೆ ಮತ್ತು ನಿರ್ವಹಿಸುತ್ತಿದ್ದೇವೆ. ಇದನ್ನು ಮತ್ತಷ್ಟು ಸುಸ್ಥಿರವಾಗಿಸಲು ನಾವು ಬದ್ಧರಾಗಿದ್ದೇವೆ. ಈ ಪ್ರಯತ್ನದ ಭಾಗವಾಗಿ, ಬೆಳೆಗಳ ಉಳಿಕೆಗಳಿಂದ ನವೀನ ಪ್ಯಾಕೇಜಿಂಗ್ ಅಭಿವೃದ್ಧಿಪಡಿಸಲು ನಾವು ಐಐಟಿ ರೂರ್ಕಿ ಜೊತೆ ಕೈಜೋಡಿಸುತ್ತಿದ್ದೇವೆ. ಭಾರತವು ವಾರ್ಷಿಕವಾಗಿ ಸುಮಾರು 500 ಮಿಲಿಯನ್ ಟನ್ ಕೃಷಿ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಇದನ್ನು ಪ್ಯಾಕೇಜಿಂಗ್ ರೂಪದಲ್ಲಿ ಮರುಬಳಕೆ ಮಾಡುವ ಮೂಲಕ, ನಾವು ಸಾಂಪ್ರದಾಯಿಕ ಸಾಮಾಗ್ರಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದಲ್ಲದೆ, ಸರ್ಕ್ಯುಲರ್ ಎಕಾನಮಿಗೆ ಬೆಂಬಲ ನೀಡಬಹುದು” ಎಂದು ಹೇಳಿದರು.

ಐಐಟಿ ರೂರ್ಕಿಯ ನಿರ್ದೇಶಕರಾದ ಪ್ರೊ. ಕಮಲ್ ಕಿಶೋರ್ ಪಂತ್ ಅವರು ಮಾತನಾಡಿ, “ಸುಸ್ಥಿರತೆ ಎಂಬುದು ಈಗ ಕೇವಲ ಒಂದು ಆಯ್ಕೆಯಾಗಿ ಉಳಿದಿಲ್ಲ, ಬದಲಿಗೆ ಅದು ರಾಷ್ಟ್ರೀಯ ತುರ್ತು ಆದ್ಯತೆಯಾಗಿದೆ. ಐಐಟಿ ರೂರ್ಕಿ ಮತ್ತು ಅಮೆಜಾನ್ ನಡುವಿನ ಈ ಸಹಭಾಗಿತ್ವವು ಭಾರತದ ‘ಸರ್ಕ್ಯುಲರ್ ಎಕಾನಮಿ’ಯ ಕನಸನ್ನು ನನಸು ಮಾಡುವತ್ತ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಇದು ಸರ್ಕಾರದ ಸ್ವಚ್ಛ ಭಾರತ, ಸ್ಟಾರ್ಟ್ಅಪ್ ಇಂಡಿಯಾ ಮತ್ತು ರಾಷ್ಟ್ರೀಯ ಸಂಪನ್ಮೂಲ ದಕ್ಷತೆ ನೀತಿಯಂತಹ ಅಭಿಯಾನಗಳಿಗೆ ಪೂರಕವಾಗಿ ಮೂಡಿಬಂದಿದೆ. ಕೃಷಿ ತ್ಯಾಜ್ಯಗಳನ್ನು ಜೈವಿಕ ವಿಘಟನೀಯ ಪ್ಯಾಕೇಜಿಂಗ್ ಸಾಮಾಗ್ರಿಗಳನ್ನಾಗಿ ಪರಿವರ್ತಿಸುವ ಮೂಲಕ, ನಾವು ಭಾರತದಲ್ಲಿ ಬೆಳೆಗಳ ಉಳಿಕೆಯನ್ನು ಸುಡುವ ಮತ್ತು ಹೊಸ ಸಾಮಗ್ರಿಗಳ ಮೇಲಿನ ಅವಲಂಬನೆಯ ಅವಳಿ ಸವಾಲುಗಳನ್ನು ನಿರ್ಹಿಸಲಿದ್ದೇವೆ. ಈ ಯೋಜನೆಯು ಶೈಕ್ಷಣಿಕ ಸಂಶೋಧನೆ ಮತ್ತು ಉದ್ಯಮಗಳ ಪಾಲುದಾರಿಕೆಯು ಹೇಗೆ ಭಾರತದ ಸುಸ್ಥಿರ ಮತ್ತು ಸ್ವಾವಲಂಬಿ ಭವಿಷ್ಯದ ಪ್ರಯಾಣವನ್ನು ವೇಗಗೊಳಿಸಬಲ್ಲದು ಎಂಬುದನ್ನು ತೋರಿಸಿಕೊಡುತ್ತದೆ” ಎಂದು ಹೇಳಿದರು.
ಐಐಟಿ ರೂರ್ಕಿಯ ಸಹರಾನ್‌ ಪುರ ಕ್ಯಾಂಪಸ್‌ ನಲ್ಲಿರುವ ಪೇಪರ್ ಮತ್ತು ಪ್ಯಾಕೇಜಿಂಗ್ ಟೆಕ್ನಾಲಜಿ ವಿಭಾಗದ ‘ಇನ್ನೋಪಾಪ್ ಲ್ಯಾಬ್’ನ (ಇನ್ನೋವೇಷನ್ಸ್ ಇನ್ ಪೇಪರ್ ಆಂಡ್ ಪ್ಯಾಕೇಜಿಂಗ್) ಡಾ. ಅನುರಾಗ್ ಕುಲಶ್ರೇಷ್ಠ ಅವರು ಈ ಸಂಶೋಧನಾ ಯೋಜನೆಯ ನೇತೃತ್ವ ವಹಿಸಲಿದ್ದಾರೆ.

ಪ್ಯಾಕೇಜಿಂಗ್ ಪ್ರಮಾಣವನ್ನು ಕಡಿಮೆ ಮಾಡುವ ತನ್ನ ನಿರಂತರ ಪ್ರಯತ್ನಗಳ ಭಾಗವಾಗಿ, ಅಮೆಜಾನ್ ಇಂಡಿಯಾ ತನ್ನ ಶೇಕಡ 50ಕ್ಕಿಂತ ಹೆಚ್ಚು ಆರ್ಡರ್‌ ಗಳನ್ನು ಅವುಗಳ ಮೂಲ ಪ್ಯಾಕೇಜಿಂಗ್‌ ನಲ್ಲಿ ಅಥವಾ ಕನಿಷ್ಠ ಪ್ಯಾಕೇಜಿಂಗ್‌ ನೊಂದಿಗೆ ರವಾನಿಸುತ್ತಿದೆ. ಕಂಪನಿಯು ದೇಶದ 300ಕ್ಕೂ ಹೆಚ್ಚು ನಗರಗಳಲ್ಲಿ ಆರ್ಡರ್‌ ಗಳನ್ನು ನೇರವಾಗಿ ಉತ್ಪನ್ನದ ಪ್ಯಾಕೇಜಿಂಗ್‌ ನಲ್ಲೇ ವಿತರಿಸುತ್ತಿದೆ. 2019 ರಿಂದ, ಅಮೆಜಾನ್ ಇಂಡಿಯಾ ತನ್ನ ಎಲ್ಲಾ ವಿತರಣಾ ಕೇಂದ್ರಗಳಲ್ಲಿ ಪ್ಯಾಕೇಜಿಂಗ್‌ ನಿಂದ ಶೇಕಡ 100ರಷ್ಟು ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದೆ.
ಅಮೆಜಾನ್ ಇಂಡಿಯಾ ತನ್ನ ಕಾರ್ಯಾಚರಣೆಗಳನ್ನು ಹೆಚ್ಚು ಸುಸ್ಥಿರವಾಗಿ ನಡೆಸಲು ಬದ್ಧವಾಗಿದೆ. ‘ದಿ ಕ್ಲೈಮೇಟ್ ಪ್ಲೆಡ್ಜ್’ ಅಡಿಯಲ್ಲಿ 2040ರ ವೇಳೆಗೆ ತನ್ನ ಕಾರ್ಯಾಚರಣೆಗಳಲ್ಲಿ ‘ನೆಟ್-ಜೀರೋ ಕಾರ್ಬನ್’ (ಶೂನ್ಯ ಇಂಗಾಲ ಹೊರಸೂಸುವಿಕೆ) ಮಟ್ಟವನ್ನು ತಲುಪುವ ಗುರಿಯನ್ನು ಅಮೆಜಾನ್ ಹೊಂದಿದೆ. ನಾವು ಕಾರ್ಬನ್-ಮುಕ್ತ ಇಂಧನ ವ್ಯವಸ್ಥೆಗಳು, ಪ್ಯಾಕೇಜಿಂಗ್ ಆವಿಷ್ಕಾರಗಳು, ಸಾರಿಗೆ ಜಾಲದ ವಿದ್ಯುದ್ದೀಕರಣ, ಸಂಪನ್ಮೂಲಗಳ ಮರುಬಳಕೆ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ಅಮೆಜಾನ್ 2027ರ ವೇಳೆಗೆ ಭಾರತದಲ್ಲಿ ತನ್ನ ನೇರ ಕಾರ್ಯಾಚರಣೆಗಳಿಗೆ ಬಳಸುವ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಸಮಾಜಕ್ಕೆ ಮರಳಿ ನೀಡುವ ಗುರಿಯನ್ನೂ ಹಾಕಿಕೊಂಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: Amazon IndiaBangaloreIndian Institute of TechnologyKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaRoorkeeಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಬೆಂಗಳೂರುಮೆಜಾನ್ ಇಂಡಿಯಾರೂರ್ಕಿ
Share199Tweet124Send
Previous Post

ಅಮಚವಾಡಿ 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳ್ಳಿ ಮಹೋತ್ಸವ ಸಂಭ್ರಮ

Next Post

ಶಿವಮೊಗ್ಗ | ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್’ನಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ | ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್’ನಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಶಿವಮೊಗ್ಗ | ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್'ನಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಛಾಯಾಗ್ರಹಣ ಕ್ಷೇತ್ರದ ವಿಶ್ವಾಸಾರ್ಹ ಹೆಸರು ಕರಾವಳಿಯ ಉದಯ್‌ ಶಂಕರ್ ಪಡಿಯಾರ್

ಛಾಯಾಗ್ರಹಣ ಕ್ಷೇತ್ರದ ವಿಶ್ವಾಸಾರ್ಹ ಹೆಸರು ಕರಾವಳಿಯ ಉದಯ್‌ ಶಂಕರ್ ಪಡಿಯಾರ್

March 19, 2026
National Safety Week 2026 Observed at Carriage Repair Workshop, Hubballi

National Safety Week 2026 Observed at Carriage Repair Workshop, Hubballi

March 18, 2026
7 ತಿಂಗಳಲ್ಲಿ 355 ವಿಶೇಷ ರೈಲುಗಳ ಸಂಚಾರದಿಂದ ನೈಋತ್ಯ ರೈಲ್ವೆ ಗಳಿಸಿದ್ದು ಎಷ್ಟು ಕೋಟಿ ಆದಾಯ?

ಹುಬ್ಬಳ್ಳಿ | ರೈಲ್ವೆ ಇಲಾಖೆ ಪರೀಕ್ಷೆ ಮುಂದೂಡಿಕೆ

March 18, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಯುಗಾದಿ ಹಬ್ಬ ಹಿನ್ನೆಲೆ: ಯಶವಂತಪುರ ಮತ್ತು ಹೊಸಪೇಟೆ ನಡುವೆ ವಿಶೇಷ ರೈಲು ಸೇವೆ

March 18, 2026
ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

March 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL