ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕೈಲಿ ಶೌಚಾಲಯ ಸ್ವಚ್ಚಗೊಳಿಸಿದ ವಿಚಾರಕ್ಕೆ ಶಾಲ ಮುಖ್ಯ ಶಿಕ್ಷಕಿ ಲಕ್ಷ್ಮೀ ದೇವಮ್ಮ ಅವರನ್ನು ಅಮಾನತು ಮಾಡಲಾಗಿದೆ.
ಈ ಕುರಿತಂತೆ ಡಿಡಿಪಿಐ ಆದೇಶ ಹೊರಡಿಸಿದ್ದು, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಬಿಇಒ ಆಂಜನಪ್ಪ ಮುಖ್ಯ ಶಿಕ್ಷಕಿ ಲಕ್ಷ್ಮೀ ದೇವಮ್ಮ ಕುರಿತು ಶಿಸ್ತು ಕ್ರಮಕ್ಕೆ ಶಿಪಾರಸ್ಸು ಮಾಡಿದ್ದರು. ಇದರನ್ವಯ ಅಮಾನತು ಮಾಡಲಾಗಿದೆ.
ಏನಿದು ಪ್ರಕರಣ?
ಮೋರಾರ್ಜಿ ದೇಸಾಯಿ ವಸತಿ ಶಾಲ ಆವರಣದಲ್ಲಿ ಶಾಲ ಮಕ್ಕಳ ಕೈಲಿ ಮಲಗುಂಡಿ ಸ್ವಚ್ಚಗೊಳಿಸಿದ ಪ್ರಕರಣ ಇನ್ನೂ ಕಣ್ಣ ಮುಂದೇಯೆ ಇದೆ. ಈ ನಿರ್ಲಕ್ಷ ಮತ್ತು ಅಪರಾಧಕ್ಕೆ ಕೆಲಸ ಅಧಿಕಾರಿಗಳು ಅಮಾನತಾಗಿದ್ದರು. ಈ ನೀಚ ಘಟನೆ ಮಾಸುವ ಮುನ್ನವೆ ಅಂತಹುದ್ದೇ ಇನ್ನೊಂದು ಘಟನೆ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಪುಟ್ಟ ಬಾಲಕರ ಕೈಲಿ ಸರ್ಕಾರಿ ಶಾಲೆಯ ಶೌಚಾಲಯ ಸ್ವಚ್ಚಗೊಳಿಸಿ ಶಾಲಾ ಆಡಳಿತ ಮತ್ತು ಶಿಕ್ಷಕ ಮಂಡಳಿ ಮತ್ತೊಂದು ನೀಚ ಕೃತ್ಯಕ್ಕೆ ಸಾಕ್ಷಿಯಾಗಿದ್ದಾರೆ.
ಗಲೀಜಿನಿಂದ ತುಂಬಿದ ಶೌಚಾಲಯವನ್ನು ಮಕ್ಕಳು ಯಾವೂದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಸ್ವಚ್ಚಗೊಳಿಸಿದ್ದಾರೆ. ಒಂದು ಕಡೆ ಆ್ಯಸಿಡ್ ಹಾಕೋವಾಗ ಮಕ್ಕಳು ಕೈಗೆ ಗ್ಲೌಸ್ ಆಗಲಿ ಕಾಲಿಗೆ ಶೂ.. ಆಗಲಿ ಧರಿಸಿಲ್ಲ. ನಗರದ ಅಂಧ್ರಹಳ್ಳಿ ಸರ್ಕಾರಿ ಶಾಲೆಯ ಆರನೇ ತರಗತಿ ಮಕ್ಳಳ ಕೈಲಿ ಈ ಕೆಲಸ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ಮಾದ್ಯಮಗಳಿಗೆ ಮಾತನಾಡಿರುವ ಶಾಲೆಯ ಮುಖ್ಯೋಪಾಧ್ಯಾಯೆ, ಇದು ನಮ್ಮ ಶಾಲೆ ಅಂತ ಹೇಳುತ್ತಿದ್ದಾರೆ. ಆದರೆ ಸ್ಥಳೀಯರು ಹೇಳುವ ಪ್ರಕಾರ ಇದು ಅಂಧ್ರಹಳ್ಳಿ ಸರ್ಕಾರಿ ಶಾಲೆ ಎಂದು ಶಾಲೆ ಮುಂದೆ ಧರಣಿ ಕೂಡ ನಡೆಸಿದ್ದಾರೆ.
ಆದರೆ, ಒಂದು ವೇಳೆ ಬೇರೆ ಶಾಲೆ ಆಗಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಈ ವಿಡಿಯೋ ಎಲ್ಲಿಯದ್ದು ಎಂದು ಕಂಡುಹಿಡಿದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















