ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ Vasista Simha-Haripriya ಹಸೆಮಣೆ ಏರಲು ಸಿದ್ಧರಾಗಿದ್ದು, ಜ.26ರಂದು ಮೈಸೂರಿನಲ್ಲಿ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ.
ಈ ಬಗ್ಗೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ತಮ್ಮ ಪರಿಚಯ, ಸ್ನೇಹ ಮತ್ತು ತಮ್ಮ ಒಡನಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
2016ರ ಸಿನಿಮಾ ಪ್ರಿಮಿಯರ್ ಶೋನಲ್ಲಿ ಪರಿಚಯವಾದ ಸ್ನೇಹ ಈಗ ಮದುವೆಯೆಂಬ ಮುದ್ರೆ ಒತ್ತಲು ಈ ಜೋಡಿ ರೆಡಿಯಾಗಿದೆ. ತಮ್ಮ ಪ್ರೀತಿಯ ವಿಚಾರ, ಮದುವೆ ಬಗ್ಗೆ ಪ್ರಶ್ನೆಗಳಿಗೆ ವಸಿಷ್ಠ ಜೋಡಿ ಉತ್ತರ ನೀಡಿದ್ದು, ಜ.26ರಂದು ಮೈಸೂರಿನಲ್ಲಿ ಸಾಂಪ್ರದಾಯಿಕವಾಗಿ ಮದುವೆ ಜರುಗಲಿದ್ದು, 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post