ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದಿವಂಗತ ನಟ ಡಾ. ಪುನೀತ್ ರಾಜಕುಮಾರ್ Puneeth Rajkumar ಅಭಿನಯದ ಕೊನೆಯ ಹಾಗೂ ಅವರ ಕನಸಿನ ಗಂಧದ ಗುಡಿ Gandhada Gudi ಸಾಕ್ಷ್ಯ ಚಿತ್ರದ ಟ್ರೇಲರ್ ಒಂದು ಕೋಟಿ ವೀಕ್ಷಣೆ ಗಳಿಸುವ ಮೂಲಕ ದಾಖಲೆ ಬರೆದಿದೆ.
ಕೊರೋನಾ ಲಾಕ್ ಡೌನ್ Corona Lockdown ಸಮಯದ ಅವಕಾಶವನ್ನು ಉಪಯೋಗಿಸಿಕೊಂಡ ಅಪ್ಪು, ಹಗಲು ರಾತ್ರಿ ಶ್ರಮ ವಹಿಸಿ, ಬಹಳಷ್ಟು ಕನಸು ಕಂಡು ಗಂಧದ ಗುಡಿ ಚಿತ್ರವನ್ನು ನಿರ್ಮಿಸಿದ್ದರು. ಆದರೆ, ಅವರ ಕನಸು ನನಸಾಗುವ ಮುನ್ನವೇ ಅಪ್ಪು ಇಹಲೋಕ ತ್ಯಜಿಸಿದರು.
ಆದರೆ, ಪತಿಯ ಕನಸನ್ನು ನನಸು ಮಾಡಲು ಮುಂದಾದ ಅಶ್ವಿನಿ ಪುನೀತ್ ರಾಜಕುಮಾರ್ Ashwini Puneeth Rajkumar ಅವರು ವಿಶೇಷ ಆಸಕ್ತಿ ವಹಿಸಿ, ಚಿತ್ರವನ್ನು ಪೂರ್ಣಗೊಳಿಸಿ ಬಿಡುಗಡೆಗೆ ಸಿದ್ಧಗೊಳಿಸಿದ್ದಾರೆ.
ಚಿತ್ರದ ಟ್ರೇಲರ್ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ ಒಂದು ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ. ಈ ಮೂಲಕ ದಾಖಲೆ ಬರೆದಿದ್ದು, ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Also read: ಔಷಧಗಳ ಗುಣಮಟ್ಟದ ನಿಯಂತ್ರಣ ಸಮಕಾಲೀನ ಸಮಸ್ಯೆಗಳಿಗೆ ಅತ್ಯವಶ್ಯಕ: ಜಿ.ಎಸ್. ನಾರಾಯಣರಾವ್
ಚಿತ್ರ ಅ.28ರಂದು ಬೆಳ್ಳಿ ತೆರೆಗೆ ಬರಲಿದ್ದು, ಪಿಆರ್’ಕೆ ಪ್ರೊಡಕ್ಷನ್ PRK Production ಇದನ್ನು ನಿರ್ಮಿಸಿದೆ. ಇನ್ನು, ‘ಗಂಧದ ಗುಡಿ’ ತೆರೆಗೆ ಬರಲು ಒಂದು ವಾರಕ್ಕೂ ಮುನ್ನವೇ ಅದರ ಪ್ರಿ-ರಿಲೀಸ್ ಇವೆಂಟ್ ಮಾಡುವುದಕ್ಕೆ ಡಾ. ರಾಜಕುಮಾರ್ ಕುಟುಂಬ ನಿರ್ಧರಿಸಿದೆ. ಆ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರನ್ನು ಆಹ್ವಾನಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post