ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ಯಾಂಡಲ್’ವುಡ್ ಬಾದ್’ಷಾ ಕಿಚ್ಚ ಸುದೀಪ್ #Sandalwood Badhshah Kichcha Sudeep ಅವರು ತಮ್ಮ ಮ್ಯಾಕ್ಸ್ #Max ಸಿನಿಮಾದ ಯಶಸ್ಸಿನ ನಂತರ ಹೊಸ ಸಿನಿಮಾ ತಯಾರಿಯಲ್ಲಿದ್ದು, ಈ ನಡುವೆಯೇ ಕಿಚ್ಚನ ಒಂದು ಪೋಸ್ಟ್ ಅವರ ಅಭಿಮಾನಿಗಳಲ್ಲಿನ ಕುತೂಹಲವನ್ನು ಹೆಚ್ಚಿಸಿದೆ.
April 16th …. 🕰 pic.twitter.com/BP6RJg9Bhc
— Kichcha Sudeepa (@KicchaSudeep) April 2, 2025
ಹೌದು…ತಮ್ಮ ಕಟ್ಟು ಮಸ್ತಾದ ವರ್ಕೌಟ್ ಫೋಟೋವೊಂದನ್ನು ಹಂಚಿಕೊAಡಿರುವ ಸುದೀಪ್ ಎಪ್ರಿಲ್ 16 ಎಂದು ಉಲ್ಲೇಖಿಸಿದ್ದು, ಇದರೊಂದಿಗೆ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್’ಗೆ ಬಿಗ್ ನ್ಯೂಸ್ ಕೊಟ್ಟಿದ್ದಾರೆ.
ಅದಷ್ಟೇ ಅಲ್ಲ, ವರ್ಕೌಟ್ ಫೋಟೋ ಶೇರ್ ಮಾಡಿ ಏ.16 ಎಂದು ಸುದೀಪ್ ಪೋಸ್ಟ್’ನಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಇದು ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್ ಎಂದೇ ಫ್ಯಾನ್ಸ್ ಊಹಿಸಿದ್ದಾರೆ.
Also read: ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ | ಘಟನೆಗೆ ಕಾರಣವೇನು?
ಕಿಚ್ಚ ಸುದೀಪ್ ಅವರು ಈ ಬಾರಿ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ? ಏನು ಕತೆ ಎಂದು ಅವರು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಪೈಲ್ವಾನ್ #Pailwan ಸಿನಿಮಾ ನಂತರದಲ್ಲಿ ಫಿಟ್ನೆಸ್ ಕಡೆಗೆ ಗಮನ ಕೊಡಲು ಆರಂಭಿಸಿದ್ದ ಕಿಚ್ಚ, ಪೈಲ್ವಾನ್ ಸಿನಿಮಾಕ್ಕೋಸ್ಕರ ಕಿಚ್ಚ ಸುದೀಪ್ ಅವರು ಭಾರೀ ತಯಾರಿ ಮಾಡಿದ್ದರು.
ಇನ್ನು ಬಿಗ್ ಬಾಸ್ ಕನ್ನಡ ಶೋ ನಿರೂಪಣೆ ಮಾಡುವುದಿಲ್ಲ ಎಂದು ಕಿಚ್ಚ ಸುದೀಪ್ ಅವರೇ ಹೇಳಿದ್ದರು. ಒಟ್ಟಿನಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಅವರು ಮುಂದಿನ ಸೀಸನ್ ನಿರೂಪಣೆ ಮಾಡುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ಇದರ ನಡುವೆಯೇ, ಹೊಸ ಸಿನಿಮಾಗಾಗಿ ಜಿಮ್’ನಲ್ಲಿ ಬೆವರು ಹರಿಸುತ್ತಿರುವ ಕಿಚ್ಚ, ಕಟ್ಟು ನಿಟ್ಟಾಗಿ ಡಯಟ್ ಫಾಲೋ ಮಾಡಿ ಸಖತ್ ಆಗಿ ಬಾಡಿ ಬೀಲ್ಡ್ ಮಾಡಿದ್ದಾರೆ. ಅವರ ಈ ವರ್ಕೌಟ್ ಫೋಟೋ ನೋಡಿ ಫ್ಯಾನ್ಸ್ ಬೆರಗಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post