ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
5ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಸಿ.ನಾರಾಯಣಸ್ವಾಮಿ ಯವರು ಇಂದು ಅಧಿಕಾರವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪನವರು Minister KHMuniyappa ಶುಭಕೋರಿದರು.
ನಂತರ ಮಾತನಾಡಿದ ಸಚಿವರು ಭಾರತ ದೇಶಕ್ಕೆ ಪಂಚಾಯತ್ ರಾಜ್ ಕಾರ್ಯಕ್ರಮಗಳು ಯಾವ ರೀತಿಯಾಗಿ ಅನುಷ್ಠಾನ ಆಗಬೇಕು ಎಂಬುದರ ಬಗ್ಗೆ ಹೆಚ್ಚಿನ ಅನುಭವ ವನ್ನು ಹೊಂದಿರುವ ಸಿ.ನಾರಾಯಣಸ್ವಾಮಿ ಯವರು ಈ ಒಂದು ಹುದ್ದೆಗೆ ಆಯ್ಕೆ ಮಾಡಿರುವುದು ಸಂತಸಕರವಾಗಿದೆ ಎಂದರು
ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ CM Siddaramaiah ಹಾಗೂ ಉಪ ಮುಖ್ಯಮಂತ್ರಿಗಳಾದ ಡಿಕೆ.ಶಿವಕುಮಾರ್ ರವರು ಇವರ ಆಯ್ಕೆಗೆ ಸಹಕರಿಸಿದ್ದಕ್ಕಾಗಿ ಅವರಿಗೂ ಅಭಿನಂದನೆಗಳನ್ನು ತಿಳಿಸಿದರು.
Also read: ದಸರಾ ಆಚರಣೆಯೊಂದಿಗೆ ಸ್ಥಳೀಯ ಪ್ರತಿಭೆಗಳ ಗುರುತಿಸುವ ಕಾರ್ಯ ಶ್ಲಾಘನೀಯ
ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ್ ಪಾಟೀಲ್ , ಆಯೋಗದ ಸದಸ್ಯರಾದ ಆರ್ ಎಸ್ ಪೋಂಡೆ,ಮೊಹಮ್ಮದ್ ಸನಾಹುಲ್ಲಾ,ಕಾರ್ಯದರ್ಶಿಗಳಾದ ಉಜ್ವಲ್ ಕುಮಾರ್ ಷೋಷ್ ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















