ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಂದಿನ ಯುವಜನತೆಯಲ್ಲಿ ವ್ಯಾಸದಾಸ ಸಾಹಿತ್ಯದ ಅರಿವು ಬರಬೇಕು. ಸಾಮೂಹಿಕ ಕಾರ್ಯಕ್ರಮಗಳಲ್ಲಿ ಯುವಕರು ಭಾಗವಹಿಸುವಂತೆ ಮಾಡಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು #Vishwaprasanna Thirtha shri of Udupi Pejawara Mutt ಕಿವಿಮಾತು ಹೇಳಿದರು.
ಹರಿದಾಸ ಮಿಲನ ಮತ್ತು ದಾಸೋಪಾಸನ, ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದ ಮೂರನೇ ವಾರ್ಷಿಕೋತ್ಸವ
ಬೆಂಗಳೂರು ಕತ್ರಿಗುಪ್ಪೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಪಂಡಿತರಾದ ಶ್ರೀ ಸತ್ಯಧ್ಯಾನ ಆಚಾರ್ಯ ಕಟ್ಟಿ ವ್ಯಾಸ ಸಾಹಿತ್ಯದ ಸರಳ ರೂಪವೇ ದಾಸ ಸಾಹಿತ್ಯ ಎಂದು ದಾಸ ಸಾಹಿತ್ಯದ ಸಮಗ್ರ ಸರಳ ರೂಪ ತಿಳಿಸಿದರು. ಪಂಡಿತ ಡಾ ಸತ್ಯನಾರಾಯಣಾಚಾರ್ಯರು ಶ್ರೀ ವಿಜಯ ದಾಸರ ಕೃತಿಗಳ ಸುಳಾದಿಗಳ ವೈಶಿಷ್ಟತೆಯ ಬಗ್ಗೆ ಉಪನ್ಯಾಸ ನೀಡಿದರು.
Also read: ಬೆಂಗಳೂರು | ಎಸ್’ಪಿ ಕಚೇರಿಯನ್ನೇ ಮಾರಲು ಯತ್ನಿಸಿದ ಖದೀಮರು | ಕೃತ್ಯ ತಿಳಿದಿದ್ದು ಹೇಗೆ?
ಸಮೂಹದಲ್ಲಿ “ನಿತ್ಯ ಗಾಯನ ಸೇವೆ”, ವಾರದ ನೇರ ಪ್ರಸಾರ ಗಾಯನ ಸೇವೆ, ವಿಶೇಷ ದಾಸರ ಮತ್ತು ಯತಿಗಳ “ಗಾಯನ ಸ್ಪರ್ಧೆ”, ತಿಂಗಳಿಗೆ ಎರಡು ಬಾರಿ “ಪಟ್ ಅಂತ ಹೇಳ್ರಿ” ಇನ್ನು ವಿಶೇಷವಾಗಿ ಶ್ರಾವಣಮಾಸದಲ್ಲಿ “ಶ್ರಾವಣೀಯ ಶ್ರಾವಣೋಪಾಸನೆ”, ಪಕ್ಷಮಾಸದಲ್ಲಿ ಪಿತೃಗಳ ಚಿಂತನೆ, ಹಲವಾರು ವೈವಿದ್ಯಮಯ ಸ್ಪರ್ಧೆ, ಚಿಂತನೆ ನಡೆಸುತ್ತಾ ಒಟ್ಟಾರೆ 11 ಪ್ರಶಸ್ತಿ ಪ್ರಧಾನ ಮಾಡಲಾಯಿತು. ಶ್ರೀ ಚಿದಾನಂದ ಕುಲಕರ್ಣಿ ಅವರ “ಪುಣ್ಯಕೋಟಿ ” ರೂಪಕ ಅವರ ತನ್ಮಯತೆಯ ಏಕಪಾತ್ರಾಭಿನಯ ಎಲ್ಲರ ಮನಸೂರೆಗೊಂಡಿತು. ವಿಶೇಷ ಚೇತನಳಾದ ಕುಮಾರಿ ವೈಭವಿ ಕುಲಕರ್ಣಿ ಇವಳ ಭರತ ನಾಟ್ಯ ಎಲ್ಲರ ಪ್ರೀತಿಗೆ ಪಾತ್ರವಾಯಿತು.
ಶ್ರೀ ಶ್ರೀಪಾದ ಸಿಂಗನಮಲ್ಲಿ, ಪಂಡಿತ ಶ್ರೀ ಪದ್ಮನಾಭ ವರಖೇಡಿ, ಶ್ರೀ ಸುರೇಶ ಕಲ್ಲೂರ, ಡಾ ಆರ್. ಪಿ. ಕುಲಕರ್ಣಿ, ಶ್ರೀಮತಿ ರಾಧಿಕಾ ಜೋಶಿ, ಹಾಗೂ ಪ್ರಿಯಾ ಪ್ರಾಣೇಶ ಹರಿದಾಸ ಹೀಗೆ ಸಮೂಹದ ಎಲ್ಲ ಕಾರ್ಯನಿರ್ವಾಹಕರು, ಸದಸ್ಯರ ಉಪಸ್ಥಿತಿಯಲ್ಲಿ ಸಾಂಗೋಪವಾಗಿ ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post