ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶೇಷಾದ್ರಿಪುರದ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇತ್ತೀಚೆಗೆ ಧಾತ್ರಿ ಹವನ ಅದ್ಧೂರಿಯಾಗಿ ಸಂಪನ್ನಗೊಂಡಿತು.
ಧಾತ್ರಿ ಹವನದ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಶ್ರೀ ಲಕ್ಷ್ಮೀ ನಾರಾಯಣಾಚಾರ್ಯರು ಧಾತ್ರಿ ಹವನವನ್ನು ನಡೆಸಿ, ಧಾತ್ರಿಯ ಮಹಿಮೆಯನ್ನು ತಿಳಿಸಿಕೊಟ್ಟರು.
ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ಕಾರ್ಯಕ್ರಮಗಳು ಜರುಗಿದವು ಎಂದು ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಸುಬ್ಬು ನರಸಿಂಹ (ಸುಬ್ಬಣ್ಣ) ತಿಳಿಸಿದರು.
ಹರಿದಾಸ ಮಂಜರಿ
ತ್ಯಾಗರಾಜನಗರದಲ್ಲಿರುವ `ವಜ್ರಕ್ಷೇತ್ರ’ ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನ.22 ಇಂದು ಸಂಜೆ 6-30ಕ್ಕೆ ಕಾವ್ಯ ರಾಮಚಂದ್ರ ಇವರಿಂದ ಹರಿದಾಸ ಮಂಜರಿ ನಡೆಯಲಿದೆ.
Also read: ಅರ್ಹರ ಬಿಪಿಎಲ್ ಕಾರ್ಡ್ ರದ್ದು ವದಂತಿ | ಡಿಸಿಎಂ ಶಿವಕುಮಾರ್ ಹೇಳಿದ್ದೇನು?
ಕೀ ಬೋರ್ಡ್’ನಲ್ಲಿ ಅಭಯ್ ಸಂಪಿಗೆತ್ತಾಯ, ಮೃದಂಗದಲ್ಲಿ ಕಾರ್ತಿಕ್ ಪ್ರಣವ್ ವಾದ್ಯದಲ್ಲಿ ಸಹಕಾರ ನೀಡಲಿದ್ದಾರೆ.
ಸ್ಥಳ : `ಶ್ರೀ ವಜ್ರಕ್ಷೇತ್ರ’ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, 152/1, 7ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು-560070
ವೆಂಕಟಗಿರಿ ಮಹಾತ್ಮೆ
ವಿಜಯ ಮಧ್ವ ಸಂಘದ ವತಿಯಿಂದ ನ. 24 ರಿಂದ ಡಿ. 1ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಮ||ಶಾ||ಸಂ|| ಶ್ರೀ ಚಂದ್ರಶೇಖರ ಆಚಾರ್ಯರಿಂದ ವೆಂಕಟಗಿರಿ ಮಹಾತ್ಮೆ ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ.
ಸ್ಥಳ : ವಿಜಯ ಮಧ್ವ ಸಂಘ, 37/2, ಗಂಗಾಧರ ಬಡಾವಣೆ, 2ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-560040
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post