ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗುರುವಾರ ಗುರುಪುಷ್ಯ ಯೋಗದ ಪ್ರಯುಕ್ತ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಯಿತು.
ಗುರುಪುಷ್ಯ ಯೋಗ ನಿಮಿತ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕವು ನೆರವೇರಿಸಲಾಯಿತು.
ಈ ಕುರಿತಂತೆ ಮಾತನಾಡಿದ ಶ್ರೀಮಠದ ಪ್ರಮುಖರಾದ ನಂದಕಿಶೋರ್ ಆಚಾರ್ಯ, ಶ್ರೀ ಸುಬುಧೇಂದ್ರ ತೀರ್ಥರ ಆದೇಶಾನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರ ಮಾರ್ಗದರ್ಶನದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆ ನಡೆಯಿತು ಎಂದರು.
Also read: ಬೆಂಗಳೂರು | ಶೇಷಾದ್ರಿಪುರಂ ರಾಯರ ಮಠದಲ್ಲಿ ಧಾತ್ರಿ ಹವನ ಸಂಪನ್ನ
ವಿಶೇಷ ಪುಷ್ಪಗಳಿಂದ ಅಲಂಕಾರವನ್ನು ಮಾಡಿ ಮಹಾಮಂಗಳಾರತಿಯು ನೆರವೇರಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಚಿತ್ರನಟಿ ಪದ್ಮಜ ರಾವ್ ರವರು ಈ ದಿನ ಸನ್ನಿಧಿಗೆ ಆಗಮಿಸಿ ಗುರುಗಳಲ್ಲಿ ಪ್ರಾರ್ಥನೆ ಸಲ್ಲಿಸಿ ದೀಪಗಳನ್ನು ಬೆಳಗಿಸಿ ಫಲಮಂತ್ರಾಕ್ಷತೆಯನ್ನು ಸ್ವೀಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
ಶ್ರೀ ಗುರು ರಾಯರ ಸನ್ನಿಧಿಗೆ ಆಗಮಿಸಿದ ಸಹಸ್ರಾರು ಭಕ್ತರು ಅನ್ನಸಂಪರ್ಪಣೆಯ ಪ್ರಸಾದವನ್ನು ಸ್ವೀಕರಿಸಿದರು.
ಸಂಜೆ ಭಕ್ತಾದಿಗಳು ಕಾರ್ತೀಕ ದೀಪೋತ್ಸವ ಪ್ರಜ್ವಲಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು.ರಕ್ಷಿತಾ ಶರ್ಮಾ ಅವರು ತಮ್ಮ ಇಂಪು ಸಂಗೀತ ಶಾಲೆಯ ವಿದ್ಯಾರ್ಥಿಗಳೊಂದಿಗೆ ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post