ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಾಮರಾಜಪೇಟೆ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಮಠದಲ್ಲಿ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳವರು ಸಂಸ್ಥಾನ ಪೂಜೆ ನೆರವೇರಿಸಿದರು.
ಶ್ರೀಮಠದಲ್ಲಿ ಮುಂಜಾನೆಯಿಂದಲೇ ವಿಶೇಷ ಅಭಿಷೇಕ, ಪೂಜೆ ಹಾಗೂ ಅಲಂಕಾರಗಳು ನಡೆದವು.
ನಂತರ, ವಿದುಷಿ ಮಾನಸ ಕುಲಕರ್ಣಿ ಅವರ ನೇತೃತ್ವದಲ್ಲಿ ಸ್ವರಾತ್ಮಿಕ ಸಂಗೀತ ವಿದ್ಯಾಲಯದ ವೃಂದವರಿAದ ಅನೇಕ ದಾಸರು ರಚಿಸಿದ ಕೃತಿಗಳ ದಾಸವಾಣಿ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ವೀಕ್ಷಿಸಿದ ಶ್ರೀ ಸುಜಯನಿಧಿತೀರ್ಥ ಶ್ರೀಪಾದಂಗಳವರು ಅತ್ಯಂತ ಸಂತಸದಿAದ ಆಶೀರ್ವಚನ ನೀಡಿದರು.
ಸ್ವರಾತ್ಮಿಕ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ಎಲ್ಲರಿಗೂ ಉಚಿತವಾಗಿ ದಾಸರ ಪದಗಳನ್ನು ಹೇಳಿಕೊಡುತ್ತಿರುವ ಮಾನಸ ಕುಲಕರ್ಣಿ ಅವರ ನೇತೃತ್ವದಲ್ಲಿ ಸ್ವರಾತ್ಮಿಕ ಸಂಗೀತ ವಿದ್ಯಾಲಯದಿಂದ ಪ್ರತಿಷ್ಠಿತ ವೇದಿಕೆಗಳಲ್ಲಿ ಅನೇಕ ಉತ್ತಮ ದಾಸವಾಣಿ ಕಾರ್ಯಕ್ರಮಗಳು ನಡೆಯಲಿ ಎಂದು ಆಶೀರ್ವದಿಸಿದರು.
ಜ.12ರಂದು ಜಯನಗರ ಮಠದಲ್ಲಿ ಹರಿನಾಮ ಸಂಕೀರ್ತನೆ
ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಡಿ.12ರಂದು ಹರಿನಾಮ ಸಂಕೀರ್ತನೆ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
Also read: Motherhood Hospitals & Decathlon Collaborate to Host Unique 3K Saree Run to Empower Women & Promote Fitness
ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಅಂದು ಸಂಜೆ 5.30ಕ್ಕೆ ವಿಂಧ್ಯಾ ಅಡಿಗ ಅವರಿಂದ ಹರಿನಾಮ ಸಂಕೀರ್ತನೆ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪಕ್ಕವಾದ್ಯದಲ್ಲಿ ಕು.ಸೃಷ್ಟಿ ದೇಸಾಯಿ (ಕೀ-ಬೋರ್ಡ್) ಮತ್ತು ಚಿ. ಋತುಪರ್ಣ ದೇಸಾಯಿ (ತಬಲಾ) ಸಾಥ್ ನೀಡಲಿದ್ದಾರೆ ಎಂದು ನಂದಕಿಶೋರ್ ಆಚಾರ್ ತಿಳಿಸಿದ್ದಾರೆ.
ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-41
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post