ಕಲ್ಪ ಮೀಡಿಯಾ ಹೌಸ್ | ಸೊರಬ |
ಮಾನವರಿಲ್ಲದೆ ಸಸ್ಯ ಜೀವಿಗಳು ಬದುಕಬಲ್ಲವು, ಸಸ್ಯಗಳಿಲ್ಲದೆ ಮಾನವ ಬದುಕುವುದು ದುಸ್ಸಾಧ್ಯ ಎಂದು ಪರಿಸರ ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಸಾಗರ ಪಟ್ಟಣದ ಇಂದಿರಾಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಸ್ಯಶಾಸ್ತç ವಿಭಾಗದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಅಂತರಕ್ರಿಯಾ ಚಟುವಟಿಕೆ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
ಭೂಮಿಯ ಮೊದಲ ಅತಿಥಿಗಳಾದ ಸಸ್ಯ ಜೀವಿಗಳ ಉಳಿವು ಸಂರಕ್ಷಣೆ ತೀರಾ ಅಗತ್ಯವಿದೆ. ವೈಜ್ಞಾನಿಕ ವಿವೇಚನೆಯ ಜೊತೆಗೆ ಅವುಗಳನ್ನು ಸಂರಕ್ಷಿಸುವ ಜವಾಬ್ಧಾರಿಯೂ ವಿದ್ಯಾರ್ಥಿಗಳದ್ದಾಗಿದೆ.
Also read: ಬೆಂಗಳೂರು | ಶ್ರೀಪಾದರಾಜ ಮಠದಲ್ಲಿ ಶ್ರೀಗಳಿಂದ ಸಂಸ್ಥಾನ ಪೂಜೆ, ದಾಸವಾಣಿ ಸಂಪನ್ನ
ಸಸ್ಯಶಾಸ್ತ್ರ ವಿಭಾಗದವರ ಸಸ್ಯ ಸಂರP್ಷÀಣೆಯ ಕಾರ್ಯ ಕಾಲೇಜಿನಲ್ಲಿ ಗುರುತರ ಎನಿಸಿದ್ದು ಅಪರೂಪದ ಅನೇಕ ಸಸ್ಯ ಪ್ರಬೇಧಗಳನ್ನು ಇಲ್ಲಿ ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಔಷಧಿ ಸಸ್ಯಗಳ ತಜ್ಞ ಆನೆಗುಳಿ ಸುಬ್ಬರಾವ್ ಸ್ಥಳೀಯ ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಾನವನ ಬದುಕಿಗೆ ಸಸ್ಯಗಳು ನೆರವಾಗುವ ಬಗ್ಗೆ ತಿಳಿಸಿಕೊಟ್ಟರು.
ಈ ವೇಳೆ ಇಂದಿರಾಗಾAಧಿ ಕಾಲೇಜು ಕ್ಯಾಂಪಸ್ ಸಸ್ಯಪ್ರಬೇಧಗಳ ದಾಖಲಾತಿ ವರದಿಯನ್ನು ಬಿಡುಗಡೆಗೊಳಿಸಲಾಯಿತು. ಮಲೆನಾಡ ಉರಗ ಪ್ರಬೇಧಗಳ ಹಾಗೂ ಸಸ್ಯ ಪ್ರಬೇಧಗಳ ಪಿಪಿಟಿ ಪ್ರಾತ್ಯಕ್ಷಿಕೆ ಸಂವಾದವಿತ್ತು. ಕ್ಯಾಂಪಸ್ ಆವರಣದಲ್ಲಿ ವೃಕ್ಷಾರೋಪಣ ನೆರವೇರಿಸಲಾಯಿತು.
ಕಾಲೇಜು ಪ್ರಾಚಾರ್ಯ ಡಾ.ಎಚ್.ರಾಜೇಶ್ವರಿ, ಸಸ್ಯಶಾಸ್ತç ವಿಭಾಗದ ಮುಖ್ಯಸ್ಥ ಶಿವಾನಂದ ಎಸ್. ಭಟ್, ಅಧ್ಯಾಪಕರಾದ ಡಾ.ಎಚ್.ಎಸ್. ಅಶ್ವಿನಿ, ಡಿ. ಕೌಶಿಕ್, ಗಿರೀಶ್ ಜನ್ನೆ, ಡಾ. ಎಂ.ಜಿ. ರಂಗಣ್ಣನವರ್, ಡಾ. ರತ್ನಾಕರ, ಡಾ.ರಮೇಶ್, ಬಿ.ಎನ್. ಸೌಮ್ಯ, ಸಬಿತಾ ಫರ್ನಾಂಡೀಸ್, ಸಂತೋಷ್ ಕುಮಾರ್, ಬರಗಿ ಬಿಎನ್ಸಿ ರಾವ್ ಮೊದಲಾದವರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post