ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಜನವರಿ 2ರ ಗುರುವಾರ ಸಂಜೆ 7ಕ್ಕೆ ಕು. ಮನುಶ್ರೀ ಮತ್ತು ಕು. ತನುಶ್ರೀ ಇವರಿಂದ “ದಾಸರ ಪದಗಳ ಗಾಯನ” ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಗೊಗ್ಗಿ ಕೃಷ್ಣಾಚಾರ್ ತಿಳಿಸಿದ್ದಾರೆ.
ಪೀಟೀಲು ವಾದನದಲ್ಲಿ ಶ್ರೀ ಎಂ.ಎನ್. ಸತ್ಯನಾರಾಯಣ ಹಾಗೂ ಮೃದಂಗ ವಾದನದಲ್ಲಿ ಶ್ರೀ ವರದರಾಜನ್ ಸಾಥ್ ನೀಡಲಿದ್ದಾರೆ.
Also read: ವಕೀಲಿ ವೃತ್ತಿಯಲ್ಲಿ ಪ್ರತಿಫಲಿತ ಚಿಂತನೆ ಬೆಳೆಸಿಕೊಳ್ಳಿ | ನ್ಯಾಯಮೂರ್ತಿ ಇಂದರೇಶ್
ಬೆಂಗಳೂರಿನ ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಗೋವಿಂದರಾಜನಗರದ ಜ್ಞಾನಸೌಧ ಸಭಾಂಗಣದಲ್ಲಿ ಡಿ.29ರ ಭಾನುವಾರ ಧರಣಿ ಘರ್ಜನೆ ಪತ್ರಿಕೆ ಹಾಗೂ ನ್ಯೂಸ್ ಚಾನಲ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುಟಾಣಿಗಳಾದ ಧೃತಿ ಆತ್ರೇಯ ಮತ್ತು ಧನ್ವಿ ಆತ್ರೇಯ ಸಹೋದರಿಯರಿಂದ ಹಾಡುಗಾರಿಕೆ ಮತ್ತು ನೃತ್ಯ ಪ್ರದರ್ಶನ ಜರುಗಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post