ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಲಾಭೂಮಿ ಪ್ರತಿಷ್ಠಾನದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ರಾಜಾಜಿನಗರದ ಯಕ್ಷಿತ್ ರಾಯಲ್ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಸ್ವರ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ನಟ, ನಿರ್ದೇಶಕ, ನಿರ್ಮಾಪಕ ಆಸ್ಕರ್ ಕೃಷ್ಣ ಸಾರಥ್ಯದ ಕಲಾಭೂಮಿ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೈ.ಜಿ. ಉಮಾ ಅವರಿಗೆ ಕಲಾಭೂಮಿ ಪ್ರತಿಷ್ಠಾನದ ವತಿಯಿಂದ ದೇಸೀ ಕೋಗಿಲೆ ಹಾಗೂ ಚಂದ್ರಪ್ರಭಾ ಜಿ. ಅವರಿಗೆ ಹಾಸ್ಯ ಚತುರ ಎಂಬ ಬಿರುದುಗಳನ್ನು ನೀಡಿ ಗೌರವಿಸಲಾಯಿತು.
Also read: ಉತ್ತರ ಕನ್ನಡದಲ್ಲಿ ಮತ್ತೊಂದು ದುರಂತ | ಕರ್ನಾಟಕ-ಗೋವಾ ಸಂಪರ್ಕಿಸುತ್ತಿದ್ದ ಕಾಳಿ ಸೇತುವೆ ಕುಸಿತ
ದೇಶ ಹಾಗೂ ನಾಡಿನ ವಿವಿಧ ಭಾಗಗಳಿಂದ ಆಗಮಿಸಿ ರಾಷ್ಟçಮಟ್ಟದ ಕರೋಕೆ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಭಾನ್ವಿತ ಗಾಯಕ, ಗಾಯಕಿಯರು ಸೊಗಸಾದ ಹಾಡುಗಳನ್ನು ಹಾಡಿ, ನರ್ತಿಸಿ ಸಭಿಕರ ಮನರಂಜಿಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎನ್.ಎಂ. ಸುರೇಶ್, ಮಾಜಿ ಅಧ್ಯಕ್ಷರಾದ ಭಾ.ಮ. ಹರೀಶ್, ಹಾಲಿ ಕಾರ್ಯದರ್ಶಿಗಳಾದ ಭಾ.ಮ. ಗಿರೀಶ್, ಅಶೋಕ ಚಿತ್ರಮಂದಿರದ ಮಾಲೀಕರಾದ ಕೆ.ಸಿ. ಅಶೋಕ್, ನಿರ್ಮಾಪಕ-ನಿರ್ದೇಶಕ ಪ್ರಶಾಂತ್ ಅಂಕಪುರ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್.ಆರ್.ಕೆ. ವಿಶ್ವನಾಥ್, ಬಹುಭಾಷಾ ನಟಿ ವಿಜಯಲಕ್ಷ್ಮಿ, ಗಾಯಕಿ ಮತ್ತು ಚಲನಚಿತ್ರ ನಟಿ ವೈ.ಜಿ. ಉಮಾ, ಖ್ಯಾತ ಹಾಸ್ಯನಟ ಚಂದ್ರಪ್ರಭಾ, ನಟ-ನಿರ್ದೇಶಕ-ಸಂಕಲನಕಾರ ಎಸ್.ಕೆ. ನಾಗೇಂದ್ರ ಅರಸ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post