ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿಯ ಪ್ರತಿಷ್ಠಿತ ನ್ಯಾಶನಲ್ ಎಜುಕೇಶನ್ ಸೊಸೈಟಿ(ಬಸವನಗುಡಿ ನ್ಯಾಶನಲ್ ಕಾಲೇಜು) ಸಂಸ್ಥೆಗೆ ನಡೆದ ಚುನಾವಣೆಯಲ್ಲಿ 91 ವರ್ಷದ ಡಾ.ಸುಬ್ರಹ್ಮಣ್ಯ ಅವರು 15 ಮತಗಳಿಂದ ಭರ್ಜರಿ ಜಯ ದಾಖಲಿಸಿದ್ದಾರೆ.
ಈ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಚುನಾವಣೆ ನಡೆದಿದ್ದು, ಭಾರೀ ಮಟ್ಟದಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಆದರೆ, ಎಲ್ಲವನ್ನೂ ಮೀರಿ 91ರ ಈ ಇಳಿ ವಯಸ್ಸಿನಲ್ಲಿ ಡಾ.ಸುಬ್ರಹ್ಮಣ್ಯ ಅವರು ದಾಖಲೆಯ ಜಯ ಗಳಿಸಿದ್ದಾರೆ.
ಡಾ. ಸುಬ್ರಮಣ್ಯ ಅವರು ಸಿರಿನಾಡು ಬ್ರಾಹ್ಮಣ ಸಂಘದ ಗೌರವಾನ್ವಿತ ಅಧ್ಯಕ್ಷರಾಗಿ ಕೆಲಸ ಮಾಡುತ್ತಲೂ ಜೊತೆಯಲ್ಲಿ ಇಂದಿಗೂ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಿ ಪ್ರತಿದಿನ ಅನೇಕರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
Also read: ಲವ್ ಫೆಲ್ಯೂರ್: ಅನಸ್ತೇಶಿಯಾ ತೆಗೆದುಕೊಂಡು ಪ್ರಾಣಬಿಟ್ಟ ನರ್ಸ್
ವಿಶ್ವ ವಿಪ್ರತ್ರಯೀ ಪರಿಷತ್ತಿನ ಪದಾಧಿಕಾರಿಗಳು ಯಲಹಂಕದಲ್ಲಿರುವ ಸುಬ್ರಹ್ಮಣ್ಯ ಅವರ ಮನೆಗೆ ಭೇಟಿ ನೀಡಿ ಅವರಿಗೆ ಸನ್ಮಾನ ಮಾಡಿ ಗೌರವಿಸಿ ಅವರ ಆಶೀರ್ವಾದವನ್ನು ಪಡೆದರು.
ಉಪಾಧ್ಯಕ್ಷ ಸುದರ್ಶನಂ, ಕಾರ್ಯದರ್ಶಿ ನಾಗೇಂದ್ರ ಮೇಸ್ಟ್ರು, ಆಡಳಿತ ಮಂಡಳಿಯ ಸದಸ್ಯರಾದ, ಪ್ರಹ್ಲಾದ್ ಬಾಬು, ಈಜಿಪುರ ರಾಘವೇಂದ್ರ ರಾವ್, ಮುರಳಿ ಮೋಹನ್, ಸಂಘ ಪರಿವಾರದ ಮುಖಂಡರಾದ ಪ್ರಸನ್ನ ಹಾಗೂ ಶಂಕರ ಮಠದ ಅನಂತ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post