ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಲಾಗ್ರಣಿ ಪ್ರತಿಷ್ಠಾನದ ವತಿಯಿಂದ ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿಯ ಸೇವಾ ಸದನದಲ್ಲಿ ಭರತನಾಟ್ಯ ನೃತ್ಯಾರೋಹಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಘಟಂ ವಾದಕರಾದ ವಿದ್ವಾನ್ ಶ್ರೀ ದಯಾನಂದ ಮೋಹಿತೆ ಹಾಗೂ ಕಲಾವಿದರು ಸಸ್ಯಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನೃತ್ಯಾರೋಹಣದ ಮೊದಲನೇ ಹಂತವಾದ ರಂಗಪ್ರವೇಶಕ್ಕೆ ಸಿದ್ಧರಾದ 21 ವಿದ್ಯಾರ್ಥಿಗಳು (ಕು. ಕೃತಿಲಯ, ಚಿನ್ಮಯಿ, ಮೋನಿಷಾ, ದಿಯಾ, ತಿಲಕ, ಸುಧೀಕ್ಷಾ, ರಚಿತಾ, ಲಿತಿಶ, ಲಿಶಿತ, ಹೀರ, ನಿಧಿ, ಸಿಂಚನ, ವರ್ಷಿಣಿ, ಪೂರ್ವಿಕ, ಹೇಮಾ ಹೆಚ್ ಗೌಡ, ದೀಪಿಕಾ, ಪೂಜಿತ, ಕೀರ್ತನ, ಹಂಸಪ್ರಿಯ, ಕೃತಿಕಾ ಹಾಗೂ ಮಂಜುಳ) ಪ್ರಮಾಣ ಮಾಡಿ ತಮ್ಮ ಗುರುಗಳಿಂದ ಗೆಜ್ಜೆಯನ್ನು ಸ್ವೀಕರಿಸಿ ನೃತ್ಯ ಪ್ರದರ್ಶನ ನೀಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post