ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ವ್ಯಾಸರಾಜ ಮಠ (ಸೋಸಲೆ) ಸುಬ್ರಹ್ಮಣ್ಯನಗರ ಶಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಜುಲೈ 1 ರಿಂದ 4ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ : (ಪ್ರತಿದಿನ ಸಂಜೆ 6 ರಿಂದ 7) ಜುಲೈ 1, ಮಂಗಳವಾರ : ಮತ್ತಿಕೆರೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ, ಜುಲೈ 2, ಬುಧವಾರ : ರಾಜಾಜಿನಗರದ ಅಂಭ್ರಣಿ ಭಜನಾ ಮಂಡಳಿ, ಜುಲೈ 3, ಗುರುವಾರ : ರಾಜಾಜಿನಗರದ ರುಕ್ಮಿಣಿ ಮಹಿಳಾ ಸಂಘ.
ಧಾರ್ಮಿಕ ಪ್ರವಚನ : ಜುಲೈ 1 ರಿಂದ 3ರ ವರೆಗೆ (ಪ್ರತಿದಿನ ಸಂಜೆ 7 ರಿಂದ 8)
ಪ್ರವಚನಕಾರರು : ಶ್ರೀ ದ್ವೈಪಾಯನಾಚಾರ್, ವಿಷಯ : ಶ್ರೀ ಜಗನ್ನಾಥದಾಸರ ವಿರಚಿತ ‘ಹರಿಕಥಾಮೃತಸಾರದ ಕರುಣಾ ಸಂಧಿ”.
ಹರಿನಾಮ ಸಂಕೀರ್ತನೆ : ಜುಲೈ 4, ಶುಕ್ರವಾರ (ಸಂಜೆ 6-30 ರಿಂದ 8-00) ಗಾಯನ : ಕು|| ರಶ್ಮಿ ನಟರಾಜ್, ಕು|| ರಕ್ಷಾ ನಟರಾಜ್, ಪಿಟೀಲು : ಶ್ರೀ ಎಂ.ಎನ್.ಸತ್ಯನಾರಾಯಣ, ಮೃದಂಗ : ಶ್ರೀ ಶ್ರೀನಿವಾಸ್ ಅನಂತರಾಮಯ್ಯ.
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ವ್ಯಾಸರಾಜ ಮಠ (ಸೋಸಲೆ) #1160, 5ನೇ ಮುಖ್ಯರಸ್ತೆ, ‘ಎ’ ಬ್ಲಾಕ್, ರಾಜಾಜಿನಗರ 2ನೇ ಹಂತ, ಸುಬ್ರಹ್ಮಣ್ಯನಗರ, ಬೆಂಗಳೂರು-560010.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post