ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ಅಂಜನಾಪುರ ಬಡಾವಣೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರನ್ನು ಆತಂಕ ಮೂಡಿಸಿದೆ.
ಇಲ್ಲಿನ ಜನವಸತಿ ಪ್ರದೇಶದ ಮನೆಗಳ ಮುಂದೆ ಚಿರತೆ #Leopard ಓಡಾಡಿರುವುದು ಹಾಗೂ ಬೀದಿ ನಾಯಿಯನ್ನು ಬೇಟೆ ಆಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಈ ಹಿಂದೆಯೂ ಸಹ ಈ ಪ್ರದೇಶದಲ್ಲಿ ಚಿರತೆ ಓಡಾಟವಿದೆ ಎಂಬ ಅನುಮಾನಗಳು ಮೂಡಿತ್ತು. ಹೀಗಾಗಿ, ಹಿಂದೆಯೂ ಸಹ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿದ್ದವು ಎನ್ನುತ್ತಾರೆ ಸ್ಥಳೀಯರು.
ಈಗ ಚಿರತೆ ಈ ಪ್ರದೇಶದಲ್ಲಿ ಇರುವುದು ಸಿಸಿಟಿವಿ ದೃಶ್ಯಗಳಿಂದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಸ್ಥಳೀಯರ ಮಾಹಿತಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಚಿರತೆ ಓಡಾಟ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅದರ ಸೆರೆಗೆ ಮುಂದಾಗಿದ್ದಾರೆ. ಚಿರತೆ ಸೆರೆಗೆ ಬೋನು ಇರಿಸಲಾಗುತ್ತಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















