ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕುಮಾರಸ್ವಾಮಿ ಅವರೇ, ಎರಡು ಬಾರಿ ಅದೃಷ್ಟ ಚೀಟಿಯ ಮೂಲಕ ಸಿಎಂ ಆಗಿದ್ದೀರಿ. ಎರಡಂಕಿಯ ಶಾಸಕರನ್ನು ಹಿಡಿದುಕೊಂಡು ಎರಡೆರಡು ಬಾರಿ ಚೀಟಿಯ ಮೂಲಕ ಮುಖ್ಯಮಂತ್ರಿಯಾಗುವುದು ಅಪೂರ್ವ ಸಂಗತಿ. ನೀವು ಅದೃಷ್ಟವಂತರು! ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಲಕ್ಕಿಡಿಪ್‌ನಲ್ಲಿ
ಗೆದ್ದರೆ ಆಳುತ್ತೇನೆ
ಸೋತರೆ ಅಳುತ್ತೇನೆಲಕ್ಕಿಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ!?
ನಾನೇ #LuckyDipCMHDK!
— BJP Karnataka (@BJP4Karnataka) July 6, 2022
ಹೌದು… ಹೆಚ್. ಡಿ. ಕುಮಾರಸ್ವಾಮಿ H D Kumaraswamy ಅವರ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದ್ದು, ಲಕ್ಕಿಡಿಪ್‍ನಲ್ಲಿ ಗೆದ್ದರೆ ಆಳುತ್ತೇನೆ. ಸೋತರೆ ಅಳುತ್ತೇನೆ. ಲಕ್ಕಿ ಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ!? ನಾನೇ ಲಕ್ಕಿಡಿಪ್ ಸಿಎಂ ಹೆಚ್‍ಡಿಕೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಂದು ಲೇವಡಿ ಮಾಡಿದ್ದಾರೆ.
ಸಿದ್ಧರಾಮಯ್ಯನವರ ಬಗ್ಗೆಯೂ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ಹಲವು ಜಿಲ್ಲೆಗಳ ಬೆಂಬಲಿಗರಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಆಹ್ವಾನ ವಿಚಾರವಾಗಿ ಸಿದ್ದರಾಮಯ್ಯರ ಕಾಲೆಳೆದಿರುವ ಬಿಜೆಪಿ, ಬಾದಾಮಿ ಕ್ಷೇತ್ರಕ್ಕೆ ಓಡಾಡುವುದು ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯಂತೆ! ಕೋಲಾರಕ್ಕೆ ಬನ್ನಿ ಎಂಬುದು ರಮೇಶ್ ಕುಮಾರ್ ಬಳಗದ ಆಗ್ರಹವಂತೆ! ನಿದ್ದೆ ಮಾಡುವವನಿಗೆ ಹಾಸಿಗೆ ನೀಡಿದ ಹಾಗಿದೆ ಅಹ್ವಾನಗಳು! ಎಂದು ಅಪಹಾಸ್ಯ ಮಾಡಲಾಗಿದೆ.
Also read: ಜೀಸಸ್ ಸರ್ವೋಚ್ಚ ದೇವರು ಎಂದ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post