Read - 2 minutes
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬದಲಾಗುತ್ತಿರುವ ಜೀವನ ಶೈಲಿಯಿಂದ ಉಂಟಾಗುತ್ತಿರುವ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಉತ್ತಮ ಸಾಹಿತ್ಯ ಕೃತಿಗಳನ್ನು ಓದುವುದರಿಂದ ಮನಸ್ಸು ಪ್ರಫುಲ್ಲವಾಗಿ ಸಕಾರಾತ್ಮಕ ಯೋಚನೆಗಳು ಮೂಡುತ್ತವೆ ಎಂದು ಶ್ರೀಕೃಷ್ಣ ಸಮೂಹ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ. ಎಂ. ರುಕ್ಮಾಂಗದ ನಾಯ್ಡು ಅಭಿಪ್ರಾಯಪಟ್ಟರು.
ನಗರದ ಐಟಿಐ ಲೇಔಟ್ ನಲ್ಲಿರುವ ಶ್ರೀಕೃಷ್ಣ ಪದವಿ ಸಂಜೆ ಕಾಲೇಜಿನಲ್ಲಿ ನವ ಸಿದ್ದಾಂತ ಪ್ರಕಾಶನ ಪ್ರಕಟಿಸಿರುವ ಲೇಖಕ, ಕವಿ ಜೆ.ಆರ್. ನರಸಿಂಹಮೂರ್ತಿ ರವರ ‘ನುಡಿ ನಮನ ‘ ಕವನ ಸಂಕಲನ ಹಾಗೂ ‘ನವರತ್ನ ಮಾಲೆ ‘ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕಾದಂಬರಿಕಾರ ಡಾ. ಕೆ. ರಮಾನಂದ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸರಳ ಸುಂದರ ಶೈಲಿಯಲ್ಲಿ ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಗಳ ಕುರಿತು ತೀಕ್ಷ್ಣವಾಗಿ ಕವನದ ಮೂಲಕ ತಮ್ಮ ಆಲೋಚನೆಗಳನ್ನು ಹರಿಯ ಬಿಟ್ಟಿರುವ ಜಿ ಆರ್ ನರಸಿಂಹಸ್ವಾಮಿ ರವರನ್ನು ಅಭಿನಂದಿಸಿದರು. ಪ್ರಾಧ್ಯಾಪಕ ಡಾ.ಆರ್. ವಾದಿರಾಜು ಹಾಗೂ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ಕಾಲೇಜಿನ ಪ್ರಾಂಶುಪಾಲ ಪ್ರೊ. ಚೆಂಗಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಚೌಡಯ್ಯ ನಿರೂಪಿಸಿದರು.
![](data:image/svg+xml,%3Csvg%20xmlns='http://www.w3.org/2000/svg'%20viewBox='0%200%201233%201600'%3E%3C/svg%3E)
![](data:image/svg+xml,%3Csvg%20xmlns='http://www.w3.org/2000/svg'%20viewBox='0%200%20720%20720'%3E%3C/svg%3E)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post