ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೇರಿದ ನಂತರ ಇಂದಿನಿಂದ ಆರಂಭವಾಗಿರುವ ಮೂರು ದಿನಗಳ ವಿಧಾನಸಭೆ ಅಧಿವೇಶನದಲ್ಲಿ ನೂತನ ಸದಸ್ಯರುಗಳು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಇಂದಿನ ಅಧಿವೇಶನದ ಆರಂಭದಲ್ಲಿ ಮಾತನಾಡಿದ ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಅವರು, ಪ್ರಮಾಣ ವಚನ ಸ್ವೀಕರಿಸುವ ಎಲ್ಲ ಸದಸ್ಯರು ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಪಡೆಯಬಾರದು ಎಂದು ಸೂಚನೆ ನೀಡಿದ್ದರು.
ಸಂವಿಧಾನದ ಪ್ರಕಾರ ಪ್ರತಿಜ್ಞೆ ಮಾಡುವಾಗ ಸಂವಿಧಾನ ಅಥವಾ ದೇವರ ಹೆಸರಿನಲ್ಲಿ ಮಾಡಬಹುದಾಗಿದೆ. ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಮಾಡಿದರೆ ಅದು ಕಾನೂನುಬದ್ದವಾಗುವುದಿಲ್ಲ. ಹೀಗಾಗಿ, ನಿಯಮದಂತೆಯೇ ಮಾಡಿ ಎಂದು ಸೂಚನೆ ನೀಡಿದ್ದರು.
ಆದರೆ, ಸ್ಪೀಕರ್ ಸೂಚನೆಯನ್ನು ಉಲ್ಲಂಘಿಸಿದ ಚನ್ನಗಿರಿ ನೂತನ ಶಾಸಕ ಬಸವರಾಜ ಶಿವಲಿಂಗ ಅವರು ದೇವರು ಹಾಗೂ ನನ್ನ ಆರಾಧ್ಯ ದೈವ ಡಿ.ಕೆ. ಶಿವಕುಮಾರ್ DKShivakumar ಅವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದರು. ಇದರಿಂದ ಒಂದು ಕ್ಷಣ ವಿಚಲಿತರಾದ ವಿಧಾನಸಭೆ ಕಾರ್ಯದರ್ಶಿಗಳು ಹೀಗೆ ಮಾಡುವಂತಿಲ್ಲ ಎಂದು ಹೇಳಿದರೂ ಸಹ ಅದನ್ನು ಲೆಕ್ಕಿಸದೇ ಮುಂದುವರೆಸಿದ ಘಟನೆ ನಡೆದಿದೆ.
Also read: ಬಾಡಿ ಬಿಲ್ಡರ್’ಗಳೇ ನಾಚುವಂತೆ ದೇಹ ಹುರಿಗೊಳಿಸಿದ ಶೋಕ್ದಾರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post