ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಾದ್ಯಂತ ಜಾರಿಯಲ್ಲಿರುವ ನೈಟ್ ಕರ್ಫ್ಯೂವನ್ನು ಜ.31ರಿಂದ ತೆರವು ಮಾಡಲಾಗುತ್ತದೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಟ್ ಕರ್ಫ್ಯೂವನ್ನು ಜ.31ರಿಂದ ತೆರವುಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ ಪ್ರಮುಖವಾಗಿ ಬೆಂಗಳೂರಿನಲ್ಲಿ ಸ್ಥಗಿತಗೊಂಡಿದ್ದ ಶಾಲೆಗಳ ಭೌತಿಕ ತರಗತಿಗಳು ಕೂಡ ಅಂದಿನಿಂದಲೇ ಆರಂಭವಾಗಲಿದೆ ಎಂದರು.

ಸಾರಿಗೆ ಬಸ್ ಗಳಲ್ಲಿ ಸಿಟ್ಟಿಂಗ್ ಕೆಪಾಸಿಟಿ ಮುಂದುವರಿಸಲಾಗುತ್ತದೆ. ಪಬ್, ಹೊಟೇಲ್ ಗಳು ಶೇ.100 ರಷ್ಟು ಒಪನ್ ಇರುತ್ತವೆ. ಸಿನಿಮಾ, ಮಲ್ಟಿಪ್ಲೆಕ್ಸ್ ಗಳಲ್ಲಿ ಶೇ.50 ರಷ್ಟು ಮಾತ್ರ ಅವಕಾಶ ನೀಡಲಾಗಿದೆ. ಹಾಗೆ ಮದುವೆಗೆ 300 ಜನರಿಗೆ ಅವಕಾಶ ನೀಡಲಾಗಿದೆ. ದೇವಾಲಯದಲ್ಲಿ ಪೂಜೆಗೆ 50% ಜನರಿಗೆ ಅವಕಾಶ ನೀಡಲಾಗಿದೆ. ಜಾತ್ರೆ, ರ್ಯಾಲಿ, ಧರಣೀ, ಪ್ರತಿಭಟನೆಗಳಿಗೆ ನಿರ್ಬಂಧ ಹೇರಲಾಗಿದೆ. ಕ್ರೀಡೆಗೆ, ಜೀಮ್, ಸ್ವೀಮಿಂಗ್ ಪೂಲ್ ಗಳಲ್ಲಿ ಶೇ.50 ರಷ್ಟು ಅವಕಾಶ ನೀಡಲಾಗಿದೆ ಎಂದರು.

ಬೆಂಗಳೂರು ನಗರದಲ್ಲಿ ಶಾಲೆಗಳು ಕೂಡ ಪುನರಾರಂಭವಾಗಲಿದ್ದು ಸಂಪೂರ್ಣ ಕರ್ನಾಟಕ ಇನ್ನು ನಿಯಮದಿಂದ ಮುಕ್ತವಾಗಿದೆ. ಕೋವಿಡ್ ನಿಯಮ ಪಾಲಿಸಿ ಶಾಲೆಗಳನ್ನು ನಡೆಸುವಂತೆ, ಒಂದು ವೇಳೆ ಕೊರೋನಾ ಸೋಂಕು ಕಂಡುಬಂದರೆ ಆಯಾ ಶಾಲೆಗಳನ್ನು ಮಾತ್ರ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ 4 ಲಕ್ಷ ಎರಡು ಸಾವಿರ ಕೊರೋನಾ ಪ್ರಕರಣಗಳಿದ್ದು, 11 ಸಾವಿರ 318 ಮಕ್ಕಳ ಕೇಸ್ ಇವೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















