ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಾಲಾಜಿ ಕಾಲೇಜು ಸಭಾಂಗಣದಲ್ಲಿ ಮೇ 31ರಂದು ಬೆಳಿಗ್ಗೆ 8:30ಕ್ಕೆ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆ ಉಲ್ಲಾಳ ವಿಭಾಗದ ಎಸಿಪಿ ಡಾ. ಸಿ. ಬಸವರಾಜು ರವರಿಗೆ ಗೌರವಾಭಿನಂದನೆ ಆಯೋಜಿಸಲಾಗಿದೆ.
ಮೈಸೂರು ವಿಶ್ವವಿದ್ಯಾಲಯದಿಂದ ‘ಸರ್ವೋದಯ ಪರಿಕಲ್ಪನೆಯ ಪ್ರಸ್ತುತತೆ ಮತ್ತು ದುರ್ಬಲ ವರ್ಗಗಳ ಸಬಲೀಕರಣದಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ – ತುಮಕೂರು ಜಿಲ್ಲೆಯ ಒಂದು ಅಧ್ಯಯನ ‘ ಕುರಿತು ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದು, ಕರ್ನಾಟಕ ಸರ್ವೋದಯ ಮಂಡಲ, ಕುಮಾರ ಪಾರ್ಕ್ ಪೂರ್ವ ವಲ್ಲಭ ನಿಕೇತನ, ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಂ.ನ.ಜಿ. ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಗೌರವ ಕಾರ್ಯದರ್ಶಿ ಡಾ. ಯ. ಚಿ. ದೊಡ್ಡಯ್ಯ, ಲೇಖಕ ಡಾ.ಆರ್. ವಾದಿರಾಜು, ಬಾಲಾಜಿ ಪದವಿ ಕಾಲೇಜು ಪ್ರಾಂಶುಪಾಲ ಉಮೇಶ್ ದಕ್ಷಿಣ ಮೂರ್ತಿ, ಡಾ.ಎಚ್.ಎಸ್. ಸುರೇಶ್ ಉಪಸ್ಥಿತರಿರಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post