ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಮ್ಮ ಮನೆಯನ್ನು ತೆರವಿಗೆ ಮುಂದಾಗಿರುವ ಬಿಬಿಎಂಪಿ ಕ್ರಮವನ್ನು ವಿರೋಧಿಸಿ ಕೆಆರ್ ಪುರಂನಲ್ಲಿ ದಂಪತಿ ಹೈಡ್ರಾಮಾ ಸೃಷ್ಠಿಸಿದ್ದು, ಮನೆ ಒಡೆದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಕೆಆರ್ ಪುರಂನಲ್ಲಿ ಇಂದು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ BBMP ನಡೆಸುತ್ತಿದೆ. ಈ ವೇಳೆ ಅಳಲು ತೋಡಿಕೊಂಡು ಆಕ್ರೋಶಗೊಂಡ ದಂಪತಿ, ನಮ್ಮ ಮನೆಯನ್ನು 2 ಮೀಟರ್ ಒಡೆಯುವುದಾಗಿ ಮಾರ್ಕಿಂಗ್ ಮಾಡಿದ್ದಾರೆ. ನಾವೇನು ಪಾಕಿಸ್ತಾನದಿಂದ ಬಂದಿದ್ದೇವಾ. ನಾವು ಇಲ್ಲಿಯೇ ಹುಟ್ಟಿ ಬೆಳೆದಿದ್ದೇವೆ. 40 ಲಕ್ಷ ರೂ. ಲೋನ್ ಮಾಡಿ ಮನೆ ಕಟ್ಟಿದ್ದೇವಾ. ನಮ್ಮ ಮನೆಯನ್ನು ಒಡೆಯಬೇಡಿ ಎಂದು ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.
ಮನೆ ಬಳಿಯಲ್ಲಿ ನಿಂತಿರುವ ದಂಪತಿ ಪೆಟ್ರೋಲ್ ಕ್ಯಾನ್ ಹಾಗೂ ಲೈಟರ್ ಹಿಡಿದು ನಿಂತಿದ್ದು, ಸ್ಥಳಕ್ಕೆ ಮುಖ್ಯಮಂತ್ರಿಗಳು ಬಂದು ನಮ್ಮ ಸಮಸ್ಯೆ ಪರಿಹಾರ ಮಾಡಬೇಕು. ಒಂದು ವೇಳೆ ನಮ್ಮ ಮನೆ ಒಡೆಯಲು ಮುಂದಾದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ಇವರ ಮನವೊಲಿಸಲು ಮುಂದಾದ ವೇಳೆ ಮಹಿಳೆ ತಮ್ಮ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದು, ಬೆಂಕಿ ಹಚ್ಚಿಕೊಳ್ಳುವುದಾಗಿ ಹೆದರಿಸಿದ್ದಾರೆ.
ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಹಾಗೂ ಸಂಬಂಧಿಸಿದ ಅಧಿಕಾರಿಗಳು ಬರಲೇಬೇಕು ಎಂದು ಬೇಡಿಕೆಯಿಟ್ಟು ಅಳಲು ತೋಡಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post