ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೀಪಾವಳಿ ಹಬ್ಬದ #Deepavali Festival ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ರೈಲ್ವೆ ಮಂಡಳಿ ಹಾಗೂ ನೈಋತ್ಯ ರೈಲ್ವೆಯು ಕೆಎಸ್’ಆರ್ ಬೆಂಗಳೂರಿನಿಂದ ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ಹಾಗೂ ಹುಬ್ಬಳ್ಳಿ-ವಾಟ್ವಾ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲುಗಳನ್ನು #Special Express Train ಓಡಿಸಲು ನಿರ್ಧರಿಸಿದೆ.
ಕೆಎಸ್’ಆರ್ ಬೆಂಗಳೂರು – ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ಪ್ರೆಸ್ ವಿಶೇಷ (ಒಂದು ಟ್ರಿಪ್):
07317 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ವಾಸ್ಕೊ-ಡ-ಗಾಮ ವಿಶೇಷ ಎಕ್ಸ್’ಪ್ರೆಸ್ ರೈಲು 17.10.2025 ರಂದು ರಾತ್ರಿ 11:25ಕ್ಕೆ ಕೆಎಸ್’ಆರ್ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 02:55ಕ್ಕೆ ವಾಸ್ಕೊ-ಡ-ಗಾಮ ತಲುಪಲಿದೆ.
ಮರಳಿ ಪ್ರಯಾಣದಲ್ಲಿ, ರೈಲು ಸಂಖ್ಯೆ 07318 ವಾಸ್ಕೊ-ಡ-ಗಾಮ – ಕೆಎಸ್’ಆರ್ ಬೆಂಗಳೂರು ವಿಶೇಷ ಎಕ್ಸ್’ಪ್ರೆಸ್ ರೈಲು 18.10.2025 ರಂದು ಸಂಜೆ 05:00ಕ್ಕೆ ವಾಸ್ಕೊ-ಡ-ಗಾಮದಿಂದ ಹೊರಟು, ಮರುದಿನ ಬೆಳಿಗ್ಗೆ 08:30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
07317 ಸಂಖ್ಯೆಯ ರೈಲು ಮಾರ್ಗಮಧ್ಯೆ ಬೆಂಗಳೂರು ಕಂಟೋನ್ಮೆಂಟ್, ಎಸ್’ಎಂವಿಟಿ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಎಸ್’ಎಂಎಂ ಹಾವೇರಿ, ಎಸ್’ಎಸ್’ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸ್ಯಾನ್’ವೊರ್ಡೆಮ್, ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಅದೇ ರೀತಿ, ರೈಲು ಸಂಖ್ಯೆ 07318 ಸಹ ಬೆಂಗಳೂರು ಕಂಟೋನ್ಮೆಂಟ್’ನತ್ತ ಹಿಮ್ಮುಖ ದಿಕ್ಕಿನಲ್ಲಿ ಇದೇ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ರೈಲು ಒಟ್ಟು 22 ಬೋಗಿಗಳ ಸಂಯೋಜನೆಯನ್ನು ಹೊಂದಿದ್ದು, ಅದರಲ್ಲಿ 13 ಎಸಿ 3-ಟೈರ್, 7 ಸ್ಲೀಪರ್ ದರ್ಜೆ ಮತ್ತು 2 ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳು ಇರಲಿವೆ.
ಹುಬ್ಬಳ್ಳಿ ಮತ್ತು ವಾಟ್ವಾ ನಡುವೆ ವಿಶೇಷ ರೈಲು
- 07333/07334 ಸಂಖ್ಯೆಯ ಹುಬ್ಬಳ್ಳಿ-ವಾಟ್ವಾ-ಹುಬ್ಬಳ್ಳಿ ಎಕ್ಸ್’ಪ್ರೆಸ್ ವಿಶೇಷ (1 ಟ್ರಿಪ್):
- 07333 ಸಂಖ್ಯೆಯ ಹುಬ್ಬಳ್ಳಿ-ವಾಟ್ವಾ ವಿಶೇಷ ಎಕ್ಸ್’ಪ್ರೆಸ್ ರೈಲು ಅಕ್ಟೋಬರ್ 20ರ ಸೋಮವಾರದಂದು ಹುಬ್ಬಳ್ಳಿಯಿಂದ
- ರಾತ್ರಿ 10:15 ಗಂಟೆಗೆ ಹೊರಟು, ಮರುದಿನ ರಾತ್ರಿ 9:50 ಗಂಟೆಗೆ ವಾಟ್ವಾ ತಲುಪಲಿದೆ.
- ಮರಳಿ ಇದೇ ರೈಲು (ಸಂಖ್ಯೆ 07334) ಅಕ್ಟೋಬರ್ 22ರ ಬುಧವಾರದಂದು ವಾಟ್ವಾದಿಂದ ಮಧ್ಯರಾತ್ರಿ 12:15 ಗಂಟೆಗೆ
- ಹೊರಟು, ಅದೇ ದಿನ ರಾತ್ರಿ 10:10 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
ಎಲ್ಲೆಲ್ಲಿ ನಿಲುಗಡೆ?
ಮಾರ್ಗ ಮಧ್ಯದಲ್ಲಿ, ಈ ವಿಶೇಷ ರೈಲುಗಳು ಧಾರವಾಡ, ಅಳ್ನಾವರ, ಲೋಂಡಾ, ಬೆಳಗಾವಿ, ಗೋಕಾಕ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮೀಟಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ಲೋನಾವಲಾ, ಕಲ್ಯಾಣ್, ವಸಾಯಿ ರೋಡ್, ಪಾಲ್ಘರ್, ವಾಪಿ, ವಲ್ಸಾಡ್, ಸೂರತ್, ಭರೂಚ್, ವಡೋದರಾ ಮತ್ತು ಆನಂದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ಈ ವಿಶೇಷ ರೈಲು ಒಟ್ಟು 19 ಬೋಗಿಗಳನ್ನು ಒಳಗೊಂಡಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post